ಬೆಂಗಳೂರಿನಲ್ಲಿ ಜನಿಸಿದ ರಮ್ಯ ಸ್ಪಂದನಾ ಅವರು ಕರ್ನಾಟಕದ ಜನಪ್ರಿಯ ಚಿತ್ರನಟಿ ಹಾಗೂ ರಾಜಕಾರಣಿಯಾಗಿದ್ದಾರೆ. ಇವರು ತಮ್ಮ ಶಾಲಾಭ್ಯಾಸವನ್ನು ಊಟಿ ಹಾಗೂ ಚೆನ್ನೈಗಳಲ್ಲಿ ಮುಗಿಸಿದರು. 2003 ರಲ್ಲಿ ಪುನೀತ ರಾಜಕುಮಾರ ನಟಿಸಿದ ’ಅಭಿ’ ಕನ್ನಡ ಚಲನಚಿತ್ರದ ಮೂಲಕ ದಿವ್ಯ ಸ್ಪಂದನಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಇವರು ತಮಿಳು ಹಾಗೂ ತೆಲುಗು ಚಿತ್ರರಂಗದ ಹಲವಾರು ದಿಗ್ಗಜ ನಟರೊಂದಿಗೆ ಸಹ ನಟಿಸಿದ್ದಾರೆ. ಕನ್ನಡದ ಬಹುತೇಕ ಎಲ್ಲ ಖ್ಯಾತನಾಮ ಕಲಾವಿದರೊಂದಿಗೆ ಸಿನಿಮಾಗಳಲ್ಲಿ ನಟಿಸಿದ ದಿವ್ಯ ಸ್ಪಂದನಾ ಬಹುಬೇಗನೆ ಚಿತ್ರರಂಗದಲ್ಲಿ ಹೆಸರು ಗಳಿಸಿದರು.
2012 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಯುವ ಘಟಕ ಸೇರಿದ ಇವರು 2013 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಯತ್ನದಲ್ಲೇ ಸಂಸದರಾಗಿ ಆಯ್ಕೆಯಾದರು. ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದರು. 2017 ರಲ್ಲಿ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಟೀಂನ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡರು.
| ಪೂರ್ಣ ಹೆಸರು | ದಿವ್ಯ ಸ್ಪಂದನಾ (ರಮ್ಯ) |
| ಜನ್ಮ ದಿನಾಂಕ | 29 Nov 1982 (ವಯಸ್ಸು 43) |
| ಹುಟ್ಟಿದ ಸ್ಥಳ | ಬೆಂಗಳೂರು |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | 12th Pass |
| ಉದ್ಯೋಗ | ಚಿತ್ರನಟಿ, ರಾಜಕಾರಣಿ |
| ತಂದೆಯ ಹೆಸರು | ಆರ್.ಟಿ. ನಾರಾಯಣ |
| ತಾಯಿಯ ಹೆಸರು | ರಂಜಿತಾ |
| ಧರ್ಮ | ಹಿಂದು |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.