ದೇವರಗುಂಡ ವೆಂಕಪ್ಪ ಸದಾನಂದ ಗೌಡರು ಡಿ.ವಿ. ಸದಾನಂದ ಗೌಡ ಎಂದು ಸಾರ್ವಜನಿಕ ವಲಯದಲ್ಲಿ ಹೆಸರಾಗಿದ್ದಾರೆ. ಇವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. 2011 ರ ಆಗಸ್ಟ್ 4 ರಂದು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ನಂತರ ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ಸದಾನಂದಗೌಡರು ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಇವರು ಕೇಂದ್ರ ಸರಕಾರದಲ್ಲಿ ಅಂಕಿಸಂಖ್ಯೆ ಹಾಗೂ ಕಾರ್ಯಕ್ರಮಗಳ ಜಾರಿ ಖಾತೆ ಸಚಿವರಾಗಿದ್ದಾರೆ. ಈ ಹಿಂದೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ರೈಲ್ವೆ ಖಾತೆ ಸಚಿವರಾಗಿದ್ದ ಇವರು 2016ರ ಜುಲೈ 5 ರಂದು ನಡೆದ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕಾನೂನು ಹಾಗೂ ನ್ಯಾಯ ಖಾತೆಯ ಸಚಿವರಾದರು.
| ಪೂರ್ಣ ಹೆಸರು | ಡಿ.ವಿ. ಸದಾನಂದ ಗೌಡ |
| ಜನ್ಮ ದಿನಾಂಕ | 01 Jan 1970 (ವಯಸ್ಸು 56) |
| ಹುಟ್ಟಿದ ಸ್ಥಳ | ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ರಾಜಕಾರಣಿ, ನ್ಯಾಯವಾದಿ |
| ತಂದೆಯ ಹೆಸರು | ವೆಂಕಪ್ಪ ಗೌಡ |
| ತಾಯಿಯ ಹೆಸರು | ಕಮಲಾ |
| ಅವಲಂಬಿತರ ಹೆಸರು | ಡಾಟಿ ಸದಾನಂದ |
| ಅವಲಂಬಿತರ ಉದ್ಯೋಗ | ಹೌಸ ವೈಫ್ |
| ಮಕ್ಕಳು | 2 ಪುತ್ರ(ರು) |
| ವೆಬ್‌ಸೈಟ್ | http://sadanandagowda.com/ |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.