Get Updates
Get notified of breaking news, exclusive insights, and must-see stories!

ಕ್ಯಾಪ್ಟನ್ ಅಮರೀಂದರ್ ಸಿಂಗ್

ಕ್ಯಾಪ್ಟನ್ ಅಮರೀಂದರ್ ಸಿಂಗ್
ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಸ್ತತ ಪಂಜಾಬ್ ನ 15ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ 2002-07ರವರೆಗೂ ಕ್ಯಾ.
By Shalini | Monday, February 8, 2021, 12:49:42 PM [IST]

ಕ್ಯಾಪ್ಟನ್ ಅಮರೀಂದರ್ ಸಿಂಗ್ ಜೀವನ ಚರಿತ್ರೆ

ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಸ್ತತ ಪಂಜಾಬ್ ನ 15ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆಯೂ ಕೂಡ 2002-07ರವರೆಗೂ ಕ್ಯಾ.ಅಮರೀಂದರ್ ಪಂಜಾಬ್ನ ಸಿಎಂ ಆಗಿದ್ದರು. ಪಾಟಿಯಾಲಾ ವಿಧಾನಸಭಾ ಕ್ಷೇತ್ರದಿಂದ ಪಂಜಾಬ್ ವಿಧಾನಸಭೆಗೆ ಆಯ್ಕೆಯಾಗಿರುವ ಅಮರೀಂದರ್, ಪಂಜಾಬ್ ಕಾಂಗ್ರೆಸ್ನ ಅಧ್ಯಕ್ಷರೂ ಆಗಿದ್ದಾರೆ. 1980ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಇದಕ್ಕೂ ಮುನ್ನ ತಮ್ಮ ಪದವಿ ನಂತರದಲ್ಲಿ 1963-65ರವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು.
ಸಿಂಧು ಕಣಿವೆಯ ಪುಲ್ಕಿಯನ್ ರಾಜ ವಂಶದ ಮಹಾರಾಜ ಯದವೀಂದ್ರ ಸಿಂಗ್ ಮತ್ತು ರಾಣಿ ಮೊಹಿಂದೇರ್ ಕೌರ್ ಅವರ ಮಗನಾಗಿ ಜನಿಸಿದ ಅಮರೀಂದರ್ ಜನಿಸಿದರು. ಸೋನಾವರದ ವೆಲ್ಹಾಮ್ ಬಾಯ್ಸ್ ಸ್ಕೂಲ್ ಮತ್ತು ಲಾರೆನ್ಸ್ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಅಧ್ಯಯನ ಕೈಗೊಂಡರು. ನಂತರ ನ್ಯಾಷನಲ್ ಡಿಫೇನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದು 1963ರಲ್ಲಿ ಸೇನೆಗೆ ಸೇರಿದರು. 1965ರಲ್ಲಿ ಸೇನೆಗೆ ರಾಜಿನಾಮೆ ನೀಡಿದ ಅಮರೀಂದರ್ ಇಂಡೋ ಪಾಕಿಸ್ತಾನ ಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ ರಾಜೀನಾಮೆ ಹಿಂಪಡೆದು, ಯುದ್ಧದಲ್ಲಿ ಪಾಲ್ಗೊಂಡು ಕ್ಯಾಪ್ಟನ್ ಎಂಬ ಅಭಿದಾನ ಪಡೆದುಕೊಂಡರು. ಅವರು ಸಿಖ್ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದರು. ಯುದ್ದದಲ್ಲಿ ಗೆಲುವು ಪಡೆದು, ನಂತರ ಸೇನೆಗೆ ರಾಜಿನಾಮೆ ಸಲ್ಲಿಸಿದರು. ಇವರ ಪತ್ನಿ ಪ್ರಣೀತ್ ಕೌರ್ ಸಂಸದೆಯಾಗಿ, 2009-14ರವರೆಗೆ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಓದು

ಕ್ಯಾಪ್ಟನ್ ಅಮರೀಂದರ್ ಸಿಂಗ್ ವಯಕ್ತಿಕ ಜೀವನ

ಪೂರ್ಣ ಹೆಸರು ಕ್ಯಾಪ್ಟನ್ ಅಮರೀಂದರ್ ಸಿಂಗ್
ಜನ್ಮ ದಿನಾಂಕ 11 Mar 1942 (ವಯಸ್ಸು 84)
ಹುಟ್ಟಿದ ಸ್ಥಳ ಪಾಟಿಯಾಲಾ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಯದವೀಂದ್ರ ಸಿಂಗ್
ತಾಯಿಯ ಹೆಸರು ಮೊಹಿಂದೇರ್ ಕೌರ್
ಅವಲಂಬಿತರ ಹೆಸರು ಪ್ರಣೀತ್ ಕೌರ್
ಅವಲಂಬಿತರ ಉದ್ಯೋಗ ಗೃಹಿಣಿ, ರಾಜಕಾರಣಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ಧರ್ಮ ಸಿಖ್
ವೆಬ್‌ಸೈಟ್ http://captainamarindersingh.com/

ಕ್ಯಾಪ್ಟನ್ ಅಮರೀಂದರ್ ಸಿಂಗ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹59.47 CRORE
ಆಸ್ತಿ
₹68.73 CRORE
ಸಾಲಸೋಲ
₹9.27 CRORE

ಕ್ಯಾಪ್ಟನ್ ಅಮರೀಂದರ್ ಸಿಂಗ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕ್ಯಾಪ್ಟನ್ ಅಮರೀಂದರ್ ಸಿಂಗ್, ಸೈನಿಕ, ರಾಜಕಾರಣಿ ಮಾತ್ರವಲ್ಲದೇ ಒಬ್ಬ ಸಾಹಿತಿಯೂ ಆಗಿದ್ದು, ಬರಹಗಾರರಾಗಿ ಹಲವು ವಿಷಯಗಳ ಬಗ್ಗೆ ಸುಧೀರ್ಘ ಮಂಡನೆ ಮಾಡಿದ್ದಾರೆ. ಅವರು ಹಲವು ಪುಸ್ತಕಗಳನ್ನೂ ಸಹ ಪ್ರಕಟಿಸಿದ್ದಾರೆ. ಸಿಖ್ ಇತಿಹಾಸ, ಯುದ್ಧದ ಸನ್ನಿವೇಶಗಳ ಬಗ್ಗೆ ಬರೆದಿದ್ದಾರೆ. ಎ ರಿಡ್ಜ್ ಟೂ ಫಾರ್, ಲೆಸ್ಟ್ ವಿ ಫಾರ್ಗೆಟ್, ದ ಲಾಸ್ಟ್ ಸನ್ ಸೆಟ್: ರೈಸ್ ಅಂಡ್ ಫಾಲ್ ಆಫ್ ಲಾಹೋರ್ ದರ್ಬಾರ್ ಅಂಡ್ ದ ಸಿಖ್ಸ್ ಇನ್ ಬ್ರಿಟನ್, 150 ಇಯರ್ಸ್ ಆಫ್ ಪೋಟೋಗ್ರಾಫ್ಸ್ ಸೇರಿವೆ. ಇತ್ತೀಚಿಗೆ ಇಂಡಿಯಾಸ್ ಮಿಲಿಟರಿ ಕಾಂಟ್ರಿಬ್ಯುಷನ್ ಟು ದ ಗ್ರೇಟ್ ವಾರ್ 1914-18 ಕೃತಿ 6 ಡಿಸೆಂಬರ್ 2014ರಲ್ಲಿ ಚಂಢೀಗಡದಲ್ಲಿ ಬಿಡುಗಡೆಯಾಯಿತು. ಹೀಗೆ ಯುದ್ಧ ಸನ್ನಿವೇಶ, ಸಂದರ್ಭ, ಭಾರತದ ಪಾತ್ರಗಳ ಕುರಿತು ಹಲವು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಕ್ಯಾ.ಅಮರೀಂದರ್ ಗೆ ಪೊಲೋ, ಕುದುರೆ ಸವಾರಿ, ಸ್ಕ್ವಾಷ್ ಮತ್ತು ಬ್ಯಾಡ್ಮಿಂಟನ್ ಆಟಗಳಲ್ಲಿ ಹೆಚ್ಚು ಆಸಕ್ತಿ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಾಧನೆಗಳು

ಜಾಟ್ ಮಹಾಸಭಾಗೆ 2013ರಿಂದ ಇಂದಿಗೂ ಕ್ಯಾ. ಅಮರೀಂದರ್ ಸಿಂಗ್ ಅಧ್ಯಕ್ಷರಾಗಿದ್ದಾರೆ. ಇಂಗ್ಲೆಂಡ್ ನ ಮೆರ್ಲೆಬೋನ್ ಕ್ರಿಕೆಟ್ ಕ್ಲಬ್ನ ಸದಸ್ಯ, ಲಂಡನ್ ನ ನೇವಲ್ ಮತ್ತು ಮಿಲಿಟರಿ ಕ್ಲಬ್ ನ ಸದಸ್ಯ, ದೆಹಲಿ ಗಾಲ್ಫ್ ಕ್ಲಬ್ ನ ಸದಸ್ಯ, ಪಟಿಯಾಲ ಜಿಮ್ಖಾನಾ ಕ್ಲಬ್ ಸದಸ್ಯರಾಗಿ ಇಂದಿಗೂ ಅವರು ಮುಂದುವರಿಯುತ್ತಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+