ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. ಕರ್ನಾಟಕದ ಮಹಿಳಾ ಶಾಸಕಿಯರಲ್ಲಿ ಒಬ್ಬರು. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ.
2018ರ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಅಂಜಲಿ ನಿಂಬಾಳ್ಕರ್ 36,649 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬೆಳಗಾವಿಯಲ್ಲಿ ಗೆದ್ದ ಇಬ್ಬರು ಮಹಿಳಾ ಶಾಸಕಿಯರಲ್ಲಿ ಅಂಜಲಿ ನಿಂಬಾಳ್ಕರ್ ಸಹ ಒಬ್ಬರು.
ಮೊದಲ ಬಾರಿಗೆ ಶಾಸಕಿಯಾದರೂ ಹಲವು ಕಾರ್ಯಗಳ ಮುಖಾಂತರ ಅಂಜಲಿ ನಿಂಬಾಳ್ಕರ್ ಗಮನ ಸೆಳೆದಿದ್ದಾರೆ. ಖಾನಾಪುರ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ, ಅತಿವೃಷ್ಟಿಯಿಂದ ಬೆಳೆ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ 40 ಕಿ. ಮೀ. ಗಳ 'ಸಂಘರ್ಷ ಪಾದಯಾತ್ರೆ'ಯನ್ನು ಸುವರ್ಣ ವಿಧಾನಸೌಧ ತನಕ ನಡೆಸಿದ್ದಾರೆ.
ರಾಜಕೀಯಕ್ಕೆ ಬರುವ ಮೊದಲು ಅಂಜಲಿ ನಿಂಬಾಳ್ಕರ್ ವೈದ್ಯರು. ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾದ ಎಂಬಿಬಿಎಸ್ ಪದವಿ ಪಡೆದವರಲ್ಲಿ ಇವರು ಸಹ ಒಬ್ಬರು.
2020ರ ನವೆಂಬರ್‌ನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಗೆ ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದ್ದರು. ಖಾನಾಪುರ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 2 ಮತಗಳ ಅಂತರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ವಿರುದ್ಧ ಸೋಲು ಅನುಭವಿಸಿದ್ದರು.
| ಪೂರ್ಣ ಹೆಸರು | ಅಂಜಲಿ ನಿಂಬಾಳ್ಕರ್ |
| ಜನ್ಮ ದಿನಾಂಕ | 22 Aug 1976 (ವಯಸ್ಸು 49) |
| ಹುಟ್ಟಿದ ಸ್ಥಳ | ಖಾನಾಪುರ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Master of Surgery, Bachelor of Medicine, Bachelor of Surgery |
| ಉದ್ಯೋಗ | ವೈದ್ಯರು, ರಾಜಕಾರಣಿ |
| ತಂದೆಯ ಹೆಸರು | NA |
| ತಾಯಿಯ ಹೆಸರು | NA |
| ಅವಲಂಬಿತರ ಹೆಸರು | ಹೇಮಂತ್ ನಿಂಬಾಳ್ಕರ್ |
| ಅವಲಂಬಿತರ ಉದ್ಯೋಗ | ಐಪಿಎಸ್ ಅಧಿಕಾರಿ |
| ಧರ್ಮ | ಹಿಂದು |
| ಜಾತಿ | ಮರಾಠ |
| ವೆಬ್‌ಸೈಟ್ | anjalinimbalkar.com |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.