ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಶಾಸಕಿ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪತ್ನಿ. ರಾಜಕೀಯ ಹೊರತುಪಡಿಸಿ ಚಲನಚಿತ್ರ ನಿರ್ಮಾಣ, ಟಿವಿ ವಾಹಿನಿಗಳ ಮಾಲೀಕರು.
2018ರ ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಕಣಕ್ಕಿಳಿದಿದ್ದರು. ಎರಡೂ ಕಡೆ ಗೆಲುವು ಸಾಧಿಸಿದರು. ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಆಗ ಎದುರಾದ ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದರು. ಕಾಂಗ್ರೆಸ್ ಬೆಂಬಲ, ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ತಟಸ್ಥರಾದ ಕಾರಣ ಎದುರಾಳಿಯೇ ಇಲ್ಲದೇ 1,25,043 ಮತಗಳನ್ನು ಪಡೆದು ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.
2008ರಲ್ಲಿ ನಡೆದ ಮಧುಗಿರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಕಣಕ್ಕಿಳಿದು ಸೋಲು ಕಂಡಿದ್ದರು.
ರಾಜಕೀಯ ಹೊರತುಪಡಿಸಿ ಉದ್ಯಮಿಯಾಗಿಯೂ ಅನಿತಾ ಕುಮಾರಸ್ವಾಮಿ ಗುರುತಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದರಾದ ಅವರು 1986 ಮಾರ್ಚ್ 13ರಂದು ಎಚ್. ಡಿ. ಕುಮಾರಸ್ವಾಮಿ ವಿವಾಹವಾದರು.
| ಪೂರ್ಣ ಹೆಸರು | ಅನಿತಾ ಕುಮಾರಸ್ವಾಮಿ |
| ಹುಟ್ಟಿದ ಸ್ಥಳ | ತಳಗವಾರ ಗ್ರಾಮ, ಚಿಂತಾಮಣಿ, ಚಿಕ್ಕಬಳ್ಳಾಪುರ |
| ಪಕ್ಷದ ಹೆಸರು | Janata Dal (Secular) |
| ವಿದ್ಯಾರ್ಹತೆ | BE Computer Science, BIT college |
| ಉದ್ಯೋಗ | ಉದ್ಯಮಿ, ರಾಜಕಾರಣಿ |
| ತಂದೆಯ ಹೆಸರು | ಡಾ. ಸೀತಾತಾಮನ್ |
| ತಾಯಿಯ ಹೆಸರು | ವಿಮಲಾ |
| ಅವಲಂಬಿತರ ಹೆಸರು | ಎಚ್. ಡಿ. ಕುಮಾರಸ್ವಾಮಿ |
| ಅವಲಂಬಿತರ ಉದ್ಯೋಗ | ಕೃಷಿಕ, ರಾಜಕಾರಣಿ |
| ಮಕ್ಕಳು | 1 ಪುತ್ರ(ರು) |
| ಧರ್ಮ | ಹಿಂದು |
| ಜಾತಿ | ಒಕ್ಕಲಿಗ |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.