ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇಷ್ಯಾ ಓಪನ್ 2022: ಪ್ರಣಯ್ , ಸಿಂಧುಗೆ ಸೋಲು, ಭಾರತದ ಸವಾಲು ಅಂತ್ಯ

|
Google Oneindia Kannada News

ಕ್ವಾಲ ಲಾಂಪುರ, ಜುಲೈ 1: ಎಚ್‌. ಎಸ್‌ ಪ್ರಣಯ್‌ ಪುರುಷರ ಕ್ವಾರ್ಟರ್ ಫೈನಲ್‌ನಲ್ಲಿ ಶುಕ್ರವಾರ ಸೋಲು ಕಾಣುವುದರೊಂದಿಗೆ ಮಲೇಷ್ಯಾ ಓಪನ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳ ಸವಾಲು ಅಂತ್ಯಗೊಂಡಿದೆ.

ಶುಕ್ರವಾರ ನಡೆದ 8ರ ಘಟ್ಟದ ಪಂದ್ಯದಲ್ಲಿ ಪ್ರಣಯ್ 7ನೇ ಶ್ರೇಯಾಂಕದ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ವಿ ವಿರುದ್ಧ ನೇರ ಗೇಮ್‌ಗಳ ಅಂತರದಲ್ಲಿ ಸೋಲು ಕಂಡು ಪಂದ್ಯವಾಳಿಯಲ್ಲಿ ತೋರಿದ್ದ ತಮ್ಮ ಆಕರ್ಷಕ ಪ್ರದರ್ಶನ ನಿರಾಶೆಯಲ್ಲಿ ಅಂತ್ಯಗೊಳಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್‌ 18-21, 16-21ರಲ್ಲಿ ಕ್ರಿಸ್ಟಿಗೆ ಕೇವಲ 44 ನಿಮಿಷಗಳ ಆಟದಲ್ಲಿ ಶರಣಾಗುವುದರೊಂದಿಗೆ ತಮ್ಮ ಅಜೇಯ ಓಟವನ್ನು ಮುಂದುವರಿಸುವಲ್ಲಿ ವಿಫಲರಾದರು. ಪ್ರಣಯ್ ಇಂಡೋನೇಷ್ಯನ್ ಆಟಗಾರನ ವಿರುದ್ಧ ಕಂಡ ಸತತ ಮೂರನೇ ನೇರ ಗೇಮ್‌ಗಳ ಸೋಲಾಗಿದೆ. 2022ರಲ್ಲಿ 2ನೇ ಬಾರಿಗೆ ಸೋಲು ಕಂಡಿದ್ದಾರೆ. ಸ್ವಿಸ್‌ ಓಪನ್‌ನಲ್ಲೂ ಕ್ರಿಸ್ಟಿ ಭಾರತೀಯ ಆಟಗಾರನ ವಿರುದ್ಧ ಜಯ ಸಾಧಿಸಿದ್ದರು.

Malaysia Open Indian Challenge Ends After Hs Prannoy Loses to Jonathan Christie

ಪಿವಿ ಸಿಂಧುಗೆ ಸೋಲು; ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಕೂಡ ಶುಕ್ರವಾರ ಮೊದಲ ಗೇಮ್ ಜಯ ಸಾಧಿಸಿದ ಹೊರತಾಗಿಯೂ 2ನೇ ಶ್ರೇಯಾಂಕದ ಚೈನೀಸ್ ತೈಪೆಯ ತಾಯ್ ಜು ಯಂಗ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು. ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಸಿಂಧುಗೆ ಸೋಲುಣಿಸಿದ್ದ ತಾಯ್ ಜು ಇಂದಿನ ಪಂದ್ಯದಲ್ಲಿ 13-21, 21-15, 21-13 ರಲ್ಲಿ ಭಾರತೀಯ ಆಟಗಾರ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಭಾರತದಿಂದ ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌ ಜೊತೆಗೆ, ಸಾಯಿ ಪ್ರಣೀತ್, ಸಮೀರ್ ವರ್ಮಾ, ಪರುಪಳ್ಳಿ ಕಶ್ಯಪ್, ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಜೊತೆಗೆ ಸೈನಾ ನೆಹ್ವಾಲ್ ಸ್ಪರ್ಧಿಸಿದ್ದರು. ಪುರಷರ್ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಯ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕಣಕ್ಕಿಳಿದು ಮೊದಲ ಸುತ್ತಿನಲ್ಲಿ ಜಯ ಸಾಧಿಸಿದಾರಾದರೂ 2ನೇ ಸುತ್ತಿನಲ್ಲಿ ಗಾಯದ ಕಾರಣ ಕಣಕ್ಕಿಳಿಯದೇ ವಾಕ್ ಓವರ್‌ ಕೊಟ್ಟಿದ್ದರು.

Malaysia Open Indian Challenge Ends After Hs Prannoy Loses to Jonathan Christie

ಮಹಿಳೆರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ, ಹರಿತಾ ಮತ್ತು ಆಶಾ ರಾಯ್ ಹಾಗೂ ಅಶ್ವಿನಿ ಭಟ್‌ ಮತ್ತು ಶಿಖಾ ಗೌತಮ್ ಜೋಡಿ ಅರ್ಹತೆ ಪಡೆದಿದ್ದರು. ಆದರೆ ಯಾವೊಂದು ಜೋಡಿಯೂ ಕನಿಷ್ಠ ಒಂದು ಗೆಲುವ ಸಾಧಿಸದೇ ಟೂರ್ನಿಯಿಂದ ಹೊರಬಿದ್ದರು.

Recommended Video

Bill Gates ಹಂಚಿಕೊಂಡ ವಿಶೇಷ ಫೋಟೋ ನೋಡಿ ಗಾಬರಿಗೊಂಡ ಜನ | OneIndia Kannada

English summary
HS Prannoy lost to Indonesian players Jonathan Christie in quarterfinals of the Malaysia Super 750 tournament on Friday. after the Pranay lost Indian challenge ends in The tournaments
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X