Dinesh Karthik: ನಾಗಿಣಿ ಡಾನ್ಸ್ ಮಾಡಿದ್ದ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರಿಗೆ ಡಿನೇಶ್ ಕಾರ್ತಿಕ್ ಉತ್ತರ ಹೀಗಿತ್ತು!

ದಿನೇಶ್ ಕಾರ್ತಿಕ್ ಅವರ ಹೆಸರು ಕೇಳಿದರೆ ಈಗ ಕನ್ನಡಿಗರು ಖುಷಿಯಾಗುತ್ತಾರೆ. ಯಾಕಂದ್ರೆ ಈ ವಯಸ್ಸಲ್ಲೂ ಆರ್‌ಸಿಬಿ ತಂಡದ ಪರವಾಗಿ ನಮ್ಮ ದಿನೇಶ್ ಕಾರ್ತಿಕ್ ಪಡುತ್ತಿರುವ ಶ್ರಮ ಅಷ್ಟಿಷ್ಟಲ್ಲ. ಹೀಗಿದ್ದಾಗ ದಿನೇಶ್ ಕಾರ್ತಿಕ್ ಅವರಿಗೆ ಮರುಜನ್ಮ ನೀಡಿದ್ದ ಬಾಂಗ್ಲಾದೇಶದ ವಿರುದ್ಧದ 'ನಾಗಿಣಿ ಡಾನ್ಸ್' ಮ್ಯಾಚ್ ವಿಡಿಯೋ, ವೈರಲ್ ಆಗುತ್ತಿದೆ. ಹಾಗೇ ಬಾಂಗ್ಲಾದ ಆಟಗಾರರ ಸೊಕ್ಕು ಅಡಗಿಸಿದ್ದ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್‌ಗೆ, ಮತ್ತೆ ಭಾರತೀಯ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ. ಆ ವಿಡಿಯೋ ನೋಡಲು ಬನ್ನಿ ಮುಂದೆ ಓದೋಣ.

ಅದು 2018 ಮಾರ್ಚ್ 18, ಅಂದು ಯಾರೂ ಊಹೆ ಮಾಡದ ಕ್ರಿಕೆಟ್ ಪಂದ್ಯ ನಡೆದಿತ್ತು. ಭಾರತ & ಬಾಂಗ್ಲಾದೇಶ ನಡುವೆ ಹೈವೋಲ್ಟೇಜ್ ಪಂದ್ಯ ಆರಂಭವಾಗಿತ್ತು. ಶ್ರೀಲಂಕಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ, ಭಾರತ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿತ್ತು. ಯಾಕಪ್ಪಾ ಅಂದ್ರೆ ಅದು ಫೈನಲ್ ಪಂದ್ಯವಾಗಿತ್ತು. ಭಾರತ, ಶ್ರೀಲಂಕಾ, ಬಾಂಗ್ಲಾದೇಶದ ನಡುವೆ ನಡೆದಿದ್ದ, ನಿದಾಹಾಸ್ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಭಾರತ & ಬಾಂಗ್ಲಾ ಫೈನಲ್ ತಲುಪಿದ್ದವು. ಈ ರೀತಿ ಫೈನಲ್‌ಗೆ ಬರುವುದಕ್ಕೆ ಮೊದಲು ಬಾಂಗ್ಲಾದೇಶದ ಆಟಗಾರರು ಶ್ರೀಲಂಕಾ ತಂಡವನ್ನು ಹೀನಾಯವಾಗಿ ಸೋಲಿಸಿದ್ದರು. ಅಲ್ಲದೆ ಅದೇ ಮ್ಯಾಚ್‌ನಲ್ಲಿ 'ನಾಗಿಣಿ ಡಾನ್ಸ್' ಮಾಡುತ್ತಾ ಶ್ರೀಲಂಕಾ ಅಭಿಮಾನಿಗಳಿಗೆ ತುಂಬಾ ಹೊಟ್ಟೆ ಉರಿಸಿದ್ದರು.

Dinesh Karthik s Fitting Reply to Bangladesh Cricketers Nagin Dance in Nidahas Twenty20 Tri-Series

ಭಾರತಕ್ಕೆ 167 ರನ್‌ಗಳ ಗುರಿ!

ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ, ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 166 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಭಾರತಕ್ಕೆ 167 ರನ್‌ಗಳ ಗುರಿ ನೀಡಿತ್ತು. ಹೀಗೆ ಬಾಂಗ್ಲಾ ಕ್ರಿಕೆಟ್ ತಂಡ ನೀಡಿದ್ದ ಸವಾಲಿನ ಮೊತ್ತ ಬೆನ್ನುಹತ್ತಿದ್ದ ಭಾರತ ತಂಡ, ಉತ್ತಮ ಆರಂಭ ಪಡೆದರೂ ಮಧ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ ಮತ್ತೊಮ್ಮೆ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಬಾಲ ಬಿಚ್ಚಿದ್ದರು. ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಅವಮಾನ ಆಗುವ ರೀತಿ ನಡೆದುಕೊಳ್ಳಲು ಆರಂಭಿಸಿದ್ದರು. ಆಗ ಶ್ರೀಲಂಕಾ ಕ್ರಿಕೆಟ್ ಫ್ಯಾನ್ಸ್ ಕೂಡ ಭಾರತದ ಬೆನ್ನಿಗೆ ನಿಂತಿದ್ದರು.

ಭಾರತಕ್ಕೆ ಸಿಕ್ಕಿತ್ತು ಭರ್ಜರಿ ಗೆಲುವು

ನೋಡ ನೋಡುತ್ತಿದ್ದಂತೆ ಭಾರತ ತಂಡ ಅಂತಿಮ ಘಟಕ್ಕೆ ಬಂದು ನಿಂತಿತ್ತು. ಇನ್ನೇನು ಈ ಪಂದ್ಯದಲ್ಲಿ ಭಾರತ ತಂಡ ಸೋತು ಹೋಗುವುದು ಗ್ಯಾರಂಟಿ ಎಂಬ ಮಾತು ಕೇಳಿಬಂತು. ಹೀಗಿದ್ದಾಗಲೇ ನೋಡಿ ದಿನೇಶ್ ಕಾರ್ತಿಕ್ ಹೀರೋ ರೀತಿ ಎಂಟ್ರಿ ಕೊಟ್ಟು, ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರ ಚಳಿ ಬಿಡಿಸಿದ್ದು. ನೋಡ ನೋಡುತ್ತಲೇ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿತ್ತು. ಅಂತಿಮವಾಗಿ ದಿನೇಶ್ ಕಾರ್ತಿಕ್ ಅವರು ಕೇವಲ 8 ಬಾಲ್ ಆಡಿ ಭರ್ಜರಿ 29 ರನ್ ಚಚ್ಚಿದ್ದರು. ಇದರಲ್ಲಿ 3 ಸಿಕ್ಸರ್ ಹಾಗೂ 2 ಫೋರ್ ಇದ್ದವು ಎಂಬುದೇ ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+