Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
Tamannaah Bhatia: ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿದ್ದ ಆರೋಪದ ಮೇರೆಗೆ ಮಿಲ್ಕಿ ಬ್ಯೂಟಿ ಅಂತಲೇ ಹೇಸರುವಾಸಿಯಾಗಿರುವ ನಟಿ ತಮನ್ನಾ ಭಾಟಿಯಾಗೆ ಮುಂಬೈ ಸೈಬರ್ ಕ್ರೈಂ ಪೊಲೀಸರು ಏಪ್ರಿಲ್ 29ಕ್ಕೆ ವಿಚಾರಣೆಗೆ ಹಾಜಾರಾಗುವಂತೆ ಸಮನ್ಸ್ ನೀಡಿದ್ದಾರೆ. ಹಾಗಾದರೆ ಯಾವ ಸೀಸನ್ ಐಪಿಎಲ್‌ನಲ್ಲಿ ಹಾಗೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅನಧಿಕೃತವಾಗಿ ಯಾವುದೇ ಒಪ್ಪಿಗೆ ಇಲ್ಲದೆ ಫೇರ್ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್ ಅಂದರೆ (ಸೀಸನ್ 16) ಪ್ರಸಾರ ಮಾಡಿದ ಆರೋಪ ಹಿನ್ನೆಲೆ ನಟಿ ತಮನ್ನಾ ಭಾಟಿಯಾಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾದ ಬಳಿ ಮಾತ್ರ ಇತ್ತು. ಇನ್ನು ಈ ವೇಳೆ ಯಾವುದೇ ಬ್ರಾಟ್‌ಕಾಸ್ಟಿಂಗ್ ಹಕ್ಕು ಪಡೆಯದೇ ಆ ಐಪಿಎಲ್ ಅನ್ನು ಫೇರ್ಪ್ಲೇ ಆ್ಯಪ್‌ನಲ್ಲಿ ಪ್ರಸಾರ ಮಾಡಲಾಗಿದ್ದು, ಇದರಿಂದ ಅಧಿಕೃತವಾಗಿ ಪ್ರಸಾರದ ಹಕ್ಕು ಪಡೆದಿದ್ದ ಜಿಯೋ ಸಿನಿಮಾಗೆ ತುಂಬಾ ನಷ್ಟವಾಗಿದ್ದು, ಈ ಆ್ಯಪ್ ಪ್ರಚಾರದಲ್ಲಿ ತಮನ್ನಾ ಕೂಡ ಭಾಗಿಯಾಗಿದ್ದರು ಎನ್ನುವ ಆರೋಪವೊಂದು ಕೇಳಿಬಂದಿದೆ.












Click it and Unblock the Notifications