IPL 2024: ಸಂಬಳ ಕಡಿಮೆ ಆದರೂ ಇವರೇ ಗೆಲುವಿನ ಹೀರೋಗಳು, ತಂಡಕ್ಕೆ ನೆರವಾಗುತ್ತಿರುವ ಪ್ಲೇಯರ್ಸ್

ಐಪಿಎಲ್‌ ಆರಂಭವಾಗಿದೆ. ಸ್ಟಾಪ್ಲೇಯರ್‌ಗಳು ತಮ್ಮ ಧಮಾಕೆದಾರ್ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರದ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಮಿನಿಮಮ್‌ ಅಮೌಂಟ್‌ ಪಡೆದ ಪ್ಲೇಯರ್ಸ್‌ ತಂಡದ ಗೆಲುವಿನಲ್ಲಿ ಮಿಂಚುತ್ತಿರುವುದು ನಿಜಕ್ಕೂ ಫ್ರಾಂಚೈಸಿಗಳಿಗೆ ಖುಷಿ ನೀಡಿದೆ.

ಈಗಾಗಲೆ ಐಪಿಎಲ್‌ ರೋಚಕ ಘಟ್ಟದತ್ತ ಮುಖ ಮಾಡಿದೆ. ಎಲ್ಲ ತಂಡಗಳು ಈಗ ಪ್ಲೇ ಆಫ್‌ನತ್ತ ಚಿತ್ತ ನೆಟ್ಟಿವೆ. ಸಖತ್‌ ಪ್ರದರ್ಶನ ನೀಡುತ್ತಿರುವ ಸ್ಟಾರ್ ಪ್ಲೇಯರ್ಸ್‌ ಅಬ್ಬರ ನಡೆಸಿ ಮಿಂಚುತ್ತಿದ್ದಾರೆ. ಅನ್‌ ಕ್ಯಾಪ್ಡ್‌ ಪ್ಲೇಯರ್‌ಗಳ ಆಟ ನಿಜಕ್ಕೂ ಮಾಲೀಕರು ಹಾಗೂ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರಲ್ಲಿ ಹಲವು ಆಟಗಾರರು ಟೀಮ್ ಇಂಡಿಯಾದ ಕದವನ್ನು ತಟ್ಟುತ್ತಲೇ ಇದ್ದಾರೆ.

IPL 2024 Despite Low Pay These Players Are Winning Heroes Crucial for Team Success

ಐಪಿಎಲ್‌ನಲ್ಲಿ ಹಲವು ಆಟಗಾರರು ಈಗಾಗಲೇ ಮಿಂಚುತ್ತಿದ್ದಾರೆ ಇದರಲ್ಲಿ ಹಲವು ಆಟಗಾರರು ಭರವಸೆ ಮೂಡಿಸಿದ್ದಾರೆ. ಗುಜರಾತ್‌ ಪರ ಸಾಯಿ ಸುದರ್ಶನ್, ಎಸ್‌ಆರ್‌ಎಚ್‌ ತಂಡದ ಪರ ನಿತೀಶ್‌ ರೆಡ್ಡಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಭಿಷೇಕ್ ಪೊರೆಲ್‌, ಮುಂಬೈ ಇಂಡಿಯನ್ಸ್‌ನ ಆಕಾಶ್ ಮಧ್ವಲ್, ರಾಜಸ್ಥಾನ್ ರಾಯಲ್ಸ್ ಕುಲದೀಪ್ ಸೇನ್‌ ಭವಿಷ್ಯದ ಕನಸು ಕಾಣುತ್ತಿದ್ದಾರೆ.

ಮಾಯೆ ತೋರದ ಮಯಾಂಕ್‌

ಪ್ರಸಕ್ತ ಐಪಿಎಲ್‌ನಲ್ಲಿ ಸನ್‌ಷೇಶನ್‌ ಕ್ರಿಯೇಟ್ ಮಾಡಿರುವ ಆಟಗಾರ ಎಂದರೆ ಲಖ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಯಾಂಕ್ ಯಾದವ್. ತಮ್ಮ ಧಮಾಕೆದಾರ್ ಬೌಲಿಂಗ್‌ನಿಂದಲೇ ಅಭಿಮಾನಿಗಳ ಮನ ಕದ್ದಿರುವ ಯುವ ವೇಗಿ ಅಬ್ಬರಿಸಿದ್ದಾರೆ. ಇವರ ಕೈಯಿಂದ ಬರುತ್ತಿರುವ ಬೆಂಕಿಯಂತಹ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳು ಹೈರಾಣಾಗಿದ್ದಾರೆ. ಇನ್ನು ಇದೇ ತಂಡದ ಪರ ಆಡುವ ಯಶ್‌ ಠಾಕೂರ್‌ ಸಹ ಸಂಚಲನ ಮೂಡಿಸಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಯುಷ್ ಬಡೋನಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

IPL 2024 Despite Low Pay These Players Are Winning Heroes Crucial for Team Success

ಕೆಕೆಆರ್ ತಂಡಕ್ಕೆ ಯುವಕರ ಆಸರೆ

2022ರ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅಂಗ್‌ಕ್ರಿಶ್ ರಘುವಂಶಿ. ಸದ್ಯ ಕೆಕೆಆರ್ ತಂಡದ ಪರ ಮಿಂಚು ಹರಿಸುತ್ತಿರುವ ಪ್ಲೇಯರ್‌. ಇವರು ಚೊಚ್ಚಲ ಅವಕಾಶದಲ್ಲೇ ಅಬ್ಬರದ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದರು. ಇವರನ್ನು ಹೊರತು ಪಡಿಸಿ ಈ ತಂಡದಲ್ಲಿ ಕಾಣಿಸಿಕೊಂಡಿರುವ ಇನ್ನೋರ್ವ ಭರವಸೆಯ ಪ್ಲೇಯರ್‌ ಎಂದರೆ ಹರ್ಷಿತ್ ರಾಣಾ. ಐಪಿಎಲ್ 2024 ರಲ್ಲಿ ಅವರು ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದು, 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.

IPL 2024 Despite Low Pay These Players Are Winning Heroes Crucial for Team Success

ಪಂಜಾಬ್‌ ತಂಡಕ್ಕೆ ಇವರೇ ಆಧಾರ

ಅಶುತೋಷ್ ಶರ್ಮಾ ಅವರು ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್‌ಗೆ ಪದಾರ್ಪಣೆ ಮಾಡಿದರು. 6-7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಅವರು ಪಂಜಾಬ್ ಪರ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಏಕಾಂಗಿಯಾಗಿ ಮುಂಬೈ ಇಂಡಿಯನ್ಸ್ ವಿರುದ್ಧ 28 ಎಸೆತಗಳಲ್ಲಿ 68 ರನ್‌ಗಳ ಬಿಗ್ ಇನ್ನಿಂಗ್ಸ್ ಆಡಿ ಗಮನ ಸೆಳೆದರು. ಇವರು ಅನೇಕ ಪಂದ್ಯಗಳಲ್ಲಿ, ಶಶಾಂಕ್ ಸಿಂಗ್ ಜೊತೆಗಿನ ಜೊತೆಯಾಟ ತಂಡಕ್ಕೆ ಆಧಾರವಾಗಿದೆ. ಅಶುತೋಷ್ 159 ರನ್ ಮತ್ತು ಶಶಾಂಕ್ ಸಿಂಗ್ 195 ರನ್ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+