ವಿರಾಟ್ ಕೊಹ್ಲಿ ನೋ ಬಾಲ್‌ಗೆ ಔಟಾದ ನಂತರ ಏನ್ ಮಾಡಿದ್ರು ವಿಡಿಯೋ ನೋಡಿ!
ವಿರಾಟ್ ಕೊಹ್ಲಿ ರೊಚ್ಚಿಗೆದ್ದಿದ್ದಾರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಟೀಂ ಆಡಿದ ಪಂದ್ಯದಲ್ಲಿ, ನಮ್ಮ ಆರ್‌ಸಿಬಿ ತಂಡಕ್ಕೆ ಮೋಸ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಕೊಹ್ಲಿ ರೊಚ್ಚಿಗೆದ್ದು ಕೋಪದಲ್ಲಿ ಬ್ಯಾಟ್ ನೆಲಕ್ಕೆ ಎಸೆದ ವಿಡಿಯೋ ವೈರಲ್ ಆಗುತ್ತಿದ್ದು. ಆ ವಿಡಿಯೋ ನೋಡಲು ಮುಂದೆ ಓದಿ.
ಕೋಪದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದೇನು?
ವಿರಾಟ್ ಕೊಹ್ಲಿಗೆ ಕೋಪ ಬಂದ್ರೆ ಏನಾಗುತ್ತೆ? ಅನ್ನೋದು ಇಡೀ ಕ್ರಿಕೆಟ್ ಜಗತ್ತಿಗೆ ಚೆನ್ನಾಗಿ ಗೊತ್ತಿದೆ. ಯಾಕಂದ್ರೆ ಕೋಪ ಬಂದಾಗ ವಿರಾಟ್ ಕೊಹ್ಲಿ ತಮ್ಮ ಮಾತನ್ನು ತಾವೇ ಕೇಳಲ್ಲ. ಹೀಗಾಗಿಯೇ ವಿರಾಟ್ ಕೊಹ್ಲಿಗೆ ಕೋಪ ಬರಿಸುವ ಕೆಲಸವನ್ನು ಯಾರೂ ಮಾಡಲ್ಲ. ಹೀಗೆ ಕೋಪ ಬರಿಸಿದರೆ ಅವರ ಕಥೆ ಮುಗಿದೇ ಹೋಯಿತು ಅಂತಾ ಹೇಳಬಹುದು. ಆರ್‌ಸಿಬಿಯ ಶಕ್ತಿ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರನ್ನು ಸುಳ್ಳು ಸುಳ್ಳಾಗಿ ಔಟ್ ಮಾಡಿಸಿ, ಹೊರ ಕಳಿಸಿರುವ ಆರೋಪ ಕೇಳಿಬಂದಿತ್ತು.

ನೋ ಬಾಲ್ ಹಾಕಿದ್ದರೂ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಮ್ಯಾಚ್‌ನಲ್ಲಿ ಔಟ್ ನೀಡಲಾಗಿದೆ, ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೋಪದಲ್ಲಿ ಬ್ಯಾಟ್ ನೆಲಕ್ಕೆ ಎಸೆದಿರುವ ವಿಡಿಯೋ ವೈರಲ್ ಆಗುತ್ತಿದೆ. ಹಾಗೇ ಈ ಸಮಯದಲ್ಲಿ ವಿರಾಟ್ ಕೊಹ್ಲಿ ಮುಖದಲ್ಲಿ ಎಷ್ಟು ಕೋಪ ಕಂಡುಬಂದಿದೆ ಅಂತಾ ಇದೀಗ ಅಭಿಮಾನಿಗಳು ವಿವರಣೆ ನೀಡುತ್ತಿದ್ದಾರೆ.
ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗುತ್ತಾ?
ಈಗಿನ ಸ್ಥಿತಿ ನೋಡುತ್ತಿದ್ರೆ ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದು ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿಯೇ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲು ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಕೂಡ ಸಾಧಿಸಬೇಕು. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ.
ಈ ಮೂಲಕ ಲೀಗ್ ಹಂತದ ಪಂದ್ಯಗಳು ಮುಗಿದಾಗ ಆರ್‌ಸಿಬಿ ಒಟ್ಟಾರೆ 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತೆ. ಆದ್ರೆ ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ, ಕೇವಲ 1 ರನ್ ಅಂತರದಲ್ಲಿ ಆರ್‌ಸಿಬಿ ತಂಡ ಸೋತಿದ್ದು ಹೀಗಾಗಿ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಆರ್‌ಸಿಬಿ ಎದುರು ಇದೀಗ ದೊಡ್ಡ ಸವಾಲು ನಿಂತಿದೆ. ಹಾಗೇ ಕೊಹ್ಲಿ ಅವರು ಈ ಸಮಯದಲ್ಲಿ ಆರ್‌ಸಿಬಿಗೆ ಮತ್ತಷ್ಟು ಬೆಂಬಲವಾಗಿ ನಿಲ್ಲಬೇಕಿದೆ.
16 ವರ್ಷ ಕಳೆದರೂ ಆರ್‌ಸಿಬಿ...
ಆರ್‌ಸಿಬಿ ಬೆಂಗಳೂರು ತಂಡಕ್ಕೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿಗಳು ಇದ್ದು, ಹೀಗಾಗಿ ನಮ್ಮ ಆರ್‌ಸಿಬಿ ತಂಡ ದೊಡ್ಡ ಹೆಸರು ಸಂಪಾದನೆ ಮಾಡಿದೆ. ಆದರೆ ಏನ್ ಮಾಡೋದು ಐಪಿಎಲ್ ಶುರುವಾಗಿ 16 ವರ್ಷ ಕಳೆದರೂ ನಮ್ಮ ಆರ್‌ಸಿಬಿ ಕಪ್ ಗೆದ್ದೇ ಇಲ್ಲ. ಈ ಕಾರಣಕ್ಕೆ ಆರ್‌ಸಿಬಿ ಅಭಿಮಾನಿಗಳು ಕೂಡ ಬೇಸರದಲ್ಲಿ ಇದ್ದಾರೆ. ಇನ್ನು 2024ರ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಆರ್‌ಸಿಬಿ ಈ ಬಾರಿ ತೊಡೆತಟ್ಟಿ ಅಖಾಡಕ್ಕೆ ಬಂದಿತ್ತು.
ಆದರೆ ಈಗ ಆಗಿರುವುದೇ ಬೇರೆ, ಆರ್‌ಸಿಬಿ ತಂಡ ಸತತವಾಗಿ 6 ಮ್ಯಾಚ್ ಸೋತು ನರಳಾಡಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಕ್ಯಾಪ್ಟನ್ ಆಗಿ, ಆರ್‌ಸಿಬಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಫ್ಯಾನ್ಸ್ ಪಾಲಿನ ಈ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಲು ಮುಂದೆ ಓದಿ.












Click it and Unblock the Notifications