ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್‌ಡ್ರೈವ್ ಬಗ್ಗೆ ಹೇಳಿ? ಹೆಚ್‌ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ

ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ (MP) ಪ್ರಜ್ವಲ್ ರೇವಣ್ಣ ಅವರ ಮಾರ್ಫ್‌ ಮಾಡಿದ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅವರ ಚುನಾವಣಾ ಏಜೆಂಟ್ ದೂರು ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಈ ಪೆನ್‌ಡ್ರೈವ್ ಪ್ರಕರಣ ಹೊರಬಂದಿದ್ದು, ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಜೆಡಿಎಸ್ ಮತ್ತು ಬಿಜೆಪಿಯ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಮಂಗಳವಾರ ಈ ಬಗ್ಗೆ ದೂರು ದಾಖಲಿಸಿದ್ದಾರೆ.

Prajwal Revanna s Close Aide Files Complaint Over Morphed Videos Congress Questions HDK on Pendrive

ನವೀನ್ ಗೌಡ ಮತ್ತು ಇತರರು ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ ಎಂದು ದೂರಿನಲ್ಲಿ ತೇಜಸ್ವಿ ಆರೋಪಿಸಿದ್ದಾರೆ. "ನವೀನ್ ಗೌಡ ಮತ್ತು ಇತರರು ವಿಡಿಯೋ ಮತ್ತು ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಪೆನ್ ಡ್ರೈವ್, ಸಿಡಿ ಮತ್ತು ವಾಟ್ಸಾಪ್ ಮೂಲಕ ಪ್ರಜ್ವಲ್ ರೇವಣ್ಣ ಅವರ ಹೆಸರು ಕೆಡಿಸುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿದೆ. ಪೆನ್‌ಡ್ರೈವ್, ಸಿಡಿ ಹಂಚುವ ಮೂಲಕ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡಬೇಡಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ" ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ.

ಹೆಚ್‌ಡಿ ಕುಮಾರಸ್ವಾಮಿಗೆ ಕಾಂಗ್ರೆಸ್‌ ಪ್ರಶ್ನೆ

ಪೆನ್‌ಡ್ರೈವ್ ಪ್ರಕರಣ ಹಾಸನ ಜಿಲ್ಲೆಯನ್ನು ದಾಟಿ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಮಾಡಿರುವ ಪೋಸ್ಟ್‌ನಲ್ಲಿ "ಕುಮಾರಸ್ವಾಮಿಯವರೇ, ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ?
ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ? ಎಂದು ಪ್ರಶ್ನೆ ಮಾಡಿದೆ.

ರಾಜ್ಯದ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ದಾರಿ ತಪ್ಪಿದ್ದಾರೆ ಎಂದಿದ್ದ ನೀವು
ಯಾಕೆ ಈಗ ಗಾಢ ಮೌನ ವಹಿಸಿದ್ದೀರಿ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ? ಎಂದು ಕೇಳಿದೆ.

ಪ್ರಧಾನಿ ನರೇಂದ್ರ ಮೋದಿಗೂ ಪ್ರಶ್ನೆ

ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್, ಮಂಗಳಸೂತ್ರದ ಬಗ್ಗೆ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರನ್ನೂ ಪ್ರಶ್ನಿಸಿದೆ. " ಗೌರವದಿಂದ ಮಂಗಳಸೂತ್ರ ತೊಟ್ಟಿರುವ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದು ಯಾರು ಎಂದು ಕಣ್ಬಿಟ್ಟು ನೋಡಿ ಮೋದಿಯವರೇ. ಹಾಸನ ಮೂಲದ ಬಿಜೆಪಿ ಬೆಂಬಲಿತ ಸಂಸದನಲ್ಲವೇ? ಇದು ಮಹಿಳೆಯರ ಮಂಗಳ ಸೂತ್ರದ ಪಾವಿತ್ರ್ಯತೆಗೆ ಕುತ್ತು ತಂದಿದ್ದು ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಕೇಳಿದೆ.

ನಿಮಗೆ ಮಹಿಳೆಯರ ಘನತೆ, ಮಂಗಳಸೂತ್ರದ ಪಾವಿತ್ರ್ಯತೆಯ ಬಗ್ಗೆ ನೈಜ ಕಾಳಜಿ ಇದ್ದಿದ್ದೇ ಆದರೆ ನಿಮ್ಮ ಮೈತ್ರಿಕೂಟದ ಕರ್ಮಕಾಂಡದ ಬಗ್ಗೆ ಕ್ಷಮೆ ಕೇಳಿ ಎಂದು ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+