ಆ ಒಂದು ಕನಸಿನ ಹಿಂದೆ ಬಿದ್ದಿರುವ ಅರ್ಜಿತ್ ಸಿಂಗ್: ಅವರ ಕನಸು ಏನು? ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು?
ಅಂದು ಹುಟ್ಟು ಊರಿನಿಂದ ಮಾಯಾನಗರಿ ಮುಂಬೈಗೆ ಕನಸಿನ ಬುತ್ತಿಯನ್ನು ಹೊತ್ತುಕೊಂಡು ಬಂದಿದ್ದ ಯುವಕ, ಹಿಂದಿ ರಿಯಾಲಿಟಿ ಶೂನಲ್ಲಿ ಪಾರ್ಟಿಸಿಪೇಟ್ ಮಾಡ್ತಾರೆ. ಆಗಲೂ ಅವರಿಗೆ ಇದ್ದಿದ್ದು ಒಂದೇ ಆಸೆ, ತನ್ನ ರೋಲ್ ಮಾಡೆಲ್ ಸೋನು ನಿಗಮ್ ಅವರನ್ನು ಒಮ್ಮೆ ಭೇಟಿ ಆದರೆ ಸಾಕು ಎಂದು.
ಸೋನು ನಿಗಮ್‌ರನ್ನು ಭೇಟಿ ಮಾಡುವ ಆಸೆ ಸಹ ಫಲಿಸಿತು. ಆ ಘಳಿಗೆ ಸಹ ರಿಯಾಲಿಟಿ ಶೋ ಮೂಲಕವೇ ಈಡೇರಿತು. ರಿಯಾಲಿಟಿ ಶೋದಲ್ಲಿ ಈತ ಚಾಂಪಿಯನ್ ಏನು ಆಗಲಿಲ್ಲ. ಆದರೆ ಸ್ವರ ತಾಳದ ಟ್ರ್ಯಾಕ್ ಹಿಡಿದು ಹೊರಟವರೇ ಅರ್ಜಿಂತ್ ಸಿಂಗ್ ಸೂಪರ್ ಸ್ಟಾರ್ ಆದರು. ತನ್ನ ರೋಲ್ ಮಾಡೆಲ್ ನಂತೆ ಈತನೂ ಭಾರತದ ಸೂಪರ್ ಸ್ಟಾರ್ ಆದವರು. ಇವರ ಹಾಡುಗಳಲ್ಲಿ ನೋವು, ಪ್ರಣಯವನ್ನು ತುಂಬುವುದು ಎಂದರೆ ಇವರಿಗೆ ನೀರು ಕುಡಿದಷ್ಟೇ ಸುಲಭ. ಇವರು ಎಲ್ಲ ರೀತಿಯ ಹಾಡನ್ನು ಹಾಡುವುದರಲ್ಲಿ ನಿಪುಣರು.

ಅರ್ಜಿತ್ ಸಿಂಗ್ ಕನಸು ಏನು?
ಸೂಪರ್ ಸ್ಟಾರ್ ಪಟ್ಟ ತಲೆಯ ಮೇಲೆ ಕೂರಿಸಿಕೊಳ್ಳದ ಇವರು ಇನ್ನೂ ಸಾಮಾನ್ಯ ಜೀವನವನ್ನೇ ನಡೆಸುತ್ತಿದ್ದಾರೆ. ಪಶ್ಚಿಮ್ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅರ್ಜಿತ್ ವಾಸಿಸುತ್ತಾರೆ. ಅವರು ಹಾಡುವುದಷ್ಟೇ ಅಲ್ಲ, ಹಳ್ಳಿಯ ಮಕ್ಕಳಿಗೆ ಕಲಿಸುತ್ತಾರೆ. ಎಲ್ಲಿಗಾದರೂ ಹೋಗಬೇಕಾದರೆ ಐಷಾರಾಮಿ ಕಾರಿನಲ್ಲಿ ಹೋಗದೆ ಸ್ಕೂಟರ್ ನಲ್ಲಿ ಹೋಗುತ್ತಾರೆ. ಸಾಮಾನ್ಯ ಜನರಂತೆ ಜೀವನವನ್ನು ನಡೆಸುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುತ್ತಿದ್ದಾರೆ. ಅರ್ಜಿತ್ ಸಿಂಗ್ ಅವರಿಗೆ ವೈದ್ಯಕೀಯ ಕಾಲೇಜು ನಿರ್ಮಿಸುವ ಕನಸು.
ಮನೆಯಲ್ಲಿ ಏನು ಮಾಡ್ತಾರೆ?
37 ವರ್ಷದ ಅರಿಜಿತ್ ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಉಚಿತ ಕೋಚಿಂಗ್ ಸೆಂಟರ್ ಕೂಡ ತೆರೆದಿದ್ದಾರೆ. ಅವರು ಎಷ್ಟು ಉದಾರಿಯಾಗಿದ್ದಾರೆ ಎಂದರೆ ಅವರು ಬಡವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವ 'ಲೆಟ್ ದೇರ್ ಬಿ ಲೈಟ್' ಎಂಬ ಎನ್‌ಜಿಒ ಅನ್ನು ಸಹ ನಡೆಸುತ್ತಿದ್ದಾರೆ. ಅವರ ತಾಯಿ ಕೋವಿಡ್19 ಸಮಯದಲ್ಲಿ ಸಾವನ್ನಪ್ಪಿದರು. ತಾಯಿಯ ಮರಣದ ನಂತರ ಅರ್ಜಿತ್ ಅವರ ಕನಸಿನ ವೈದ್ಯಕೀಯ ಕಾಲೇಜು ನಿರ್ಮಿಸುವುದು ಆಗಿದೆ.

25 ಏಪ್ರಿಲ್ 1987 ರಂದು ಜನಿಸಿದ ಅರಿಜಿತ್ ಅವರು ಗಾಯಕ ಮಾತ್ರವಲ್ಲದೆ ಸಂಗೀತ ಸಂಯೋಜಕರೂ ಹೌದು. ಇವರಿಗೆ ರಾಷ್ಟ್ರ ಪ್ರಶಸ್ತಿಯೂ ಸಹ ಲಭಿಸಿದೆ. ರಿಯಾಲಿಟಿ ಶೋದಿಂದ ಹೊರ ಬಿದ್ದ ಮೇಲೆ ಅವಕಾಶಕ್ಕಾಗಿ ಕಾದರು. ಮರ್ಡರ್ 2ನಲ್ಲಿ ಫಿರ್ ಮೊಹಬ್ಬತ್ ಹಾಡುತ್ತಿದ್ದಂತೆ ಇವರನ್ನು ಜನ ಗುರುತಿಸಲು ಆರಂಭಿಸಿದರು. 2013 ವರೆಗೆ ಎಷ್ಟೋ ಹಿಂದಿ ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಆದರೆ 2013 ಇವರ ವೃತ್ತಿ ಜೀವನಕ್ಕೆ ಮಹತ್ತರ ತಿರುವು ಕೊಟ್ಟಿತು. 'ಆಶಿಕಿ 2' ಸಿನಿಮಾದ 'ತುಮ್ ಹಿ ಹೋ' ಮತ್ತು 'ಚಾಹೂನ್ ಮೈ ಯಾ ನಾ' ಹಾಡುಗಳನ್ನು ಕೇಳಿದ ಅಭಿಮಾನಿಗಳನ್ನು ಅರ್ಜಿತ್ ಅವರನ್ನು ಅಭಿಮಾನಿಗಳು ತಲೆ ಮೇಲೆ ಇಟ್ಟುಕೊಂಡು ಮೆರೆಸಿದ್ದಾರೆ.

ಒಂದು ಹಾಡಿಗೆ ಎಷ್ಟು ಸಂಭಾವನೆ?
ವರದಿಗಳ ಪ್ರಕಾರ ಅರ್ಜಿತ್ ಸಿಂಗ್ 414 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಒಂದು ಸಿನಿಮಾ ಹಾಡಿಗೆ 20 ರಿಂದ 22 ಲಕ್ಷ ರೂ. ಪಡೆಯುತ್ತಾರೆ. ಅವರ ಸಂಗೀತ ಕಛೇರಿ ನಡೆಸಿ ಕೊಡಲು ಕೋಟಿಗೂ ಹೆಚ್ಚು ಹಣವನ್ನು ಪಡೆಯುತ್ತಾರೆ.












Click it and Unblock the Notifications