ವಿರಾಟ್ ಕೊಹ್ಲಿ VS ಚಿಕ್ಕಣ್ಣ: ಏನ್ ಗುರೂ ನೋ ಬಾಲ್ ಫೈಟ್! ವಿಡಿಯೋ ನೋಡಿ
ಆರ್‌ಸಿಬಿ ಬೆಂಗಳೂರು ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಕೇವಲ 1 ರನ್ ಅಂತರದಲ್ಲಿ ಸೋಲು ಕಂಡ ನಂತರ, ಭಾರಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಈಗ ವಿರಾಟ್ ಕೊಹ್ಲಿ ಮತ್ತು ಕನ್ನಡದ ಕಾಮಿಡಿ ಸ್ಟಾರ್ ಚಿಕ್ಕಣ್ಣ ನಡುವೆ, ನೋ ಬಾಲ್ ವಿಚಾರಕ್ಕೆ ಫುಲ್ ಫೈಟಿಂಗ್ ಶುರುವಾಗಿದೆ.
ಆರ್‌ಸಿಬಿ ಮೊನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ (KKR vs RCB) ಎದುರು ಸೋಲುವ ಮೂಲಕ, ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಇದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆರ್‌ಸಿಬಿ ತಂಡ ಈ ಸೋಲಿನ ಮೂಲಕ, ಸತತ 6ನೇ ಸೋಲನ್ನು ಕಂಡಿದ್ದು, ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಆರ್‌ಸಿಬಿ. ಇನ್ನುಳಿದ 7ರಲ್ಲಿ ಸೋತಿದ್ದು, 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಪಡೆದಿದೆ. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಚಿಕ್ಕಣ್ಣ ನಡುವೆ, ನೋ ಬಾಲ್ ಫೈಟ್ ವಿಡಿಯೋ ವೈರಲ್ ಆಗುತ್ತಿದೆ!

2024ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿ ಇರುವ, ನಮ್ಮ ಆರ್‌ಸಿಬಿಗೆ ಈಗ ಅಗ್ನಿ ಪರೀಕ್ಷೆ ಎದುರಾಗಿದೆ. ಆದರೆ ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ನೋ ಬಾಲ್ ಹಾಕಿ ಔಟ್ ಮಾಡಿರುವ ವಿಚಾರದಲ್ಲಿ ದೊಡ್ಡ ಚರ್ಚೆಯು ಆಗ್ತಿದೆ. ಈ ವಿಚಾರದಲ್ಲಿ ಈಗ ಕಾಮಿಡಿ ಸ್ಟಾರ್ ಚಿಕ್ಕಣ್ಣ ಎಂಟ್ರಿ ಕೂಡ ಆಗಿದೆ! ಆ ವಿಡಿಯೋ ನೋಡಲು ಮುಂದೆ ಓದಿ.
ಆರ್‌ಸಿಬಿ ತಂಡಕ್ಕೆ ಮೋಸ ಮಾಡಿದ್ರಾ?
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ ತಂಡಕ್ಕೆ ಕೋಟಿ ಕೋಟಿ ಕನ್ನಡಿಗರು ಅಭಿಮಾನಿ ದೇವರಾಗಿ ಹೋಗಿದ್ದಾರೆ ಅದ್ರಲ್ಲೂ ಆರ್‌ಸಿಬಿ ತಂಡವನ್ನ ಕನ್ನಡ ನಾಡು ಮಾತ್ರವಲ್ಲ ಭಾರತದ ಮೂಲೆ ಮೂಲೆಯಲ್ಲೂ ಬೆಂಬಲಿಸುವ ಜನರು ಇದ್ದಾರೆ. ಹೀಗಿದ್ದಾಗ ಕೊಲ್ಕತ್ತಾ ವಿರುದ್ಧದ, ನಮ್ಮ ಆರ್‌ಸಿಬಿ ತಂಡಕ್ಕೆ ಭಾರಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಬಾಲ್ ನೋ ಬಾಲ್ ಆಗಿದ್ದು, ಈ ಮೋಸದ ಮೂಲಕ ಆರ್‌ಸಿಬಿ ತಂಡವನ್ನು ಕೆಕೆಆರ್ ಸೋಲಿಸಿದೆ ಎಂದು ಅಭಿಮಾನಿಗಳು ಆರೋಪ, ಮಾಡುತ್ತಿದ್ದಾರೆ.
'ಕ್ವಾಟ್ಲೆ ಸತೀಶ' ಸಿನಿಮಾದ ಸೀನ್!
ಈ ಸಮಯದಲ್ಲಿ ಚಿಕ್ಕಣ್ಣ ಅಭಿನಯದ 'ಕ್ವಾಟ್ಲೆ ಸತೀಶ' ಸಿನಿಮಾದ ನೋ ಬಾಲ್ ಕ್ರಿಕೆಟ್ ಸೀನ್ ಮತ್ತು ವಿರಾಟ್ ಕೊಹ್ಲಿ ಅವರ ನೋ ಬಾಲ್ ಔಟ್ ಸೀನ್‌ಗೆ ಸಿಂಕ್ ಮಾಡಿ ವಿಡಿಯೋ ಮಾಡಲಾಗಿದೆ. 'ಕ್ವಾಟ್ಲೆ ಸತೀಶ' ಸಿನಿಮಾದಲ್ಲಿನ ಕ್ರಿಕೆಟ್ ಸೀನ್ ಅದ್ಭುತವಾಗಿ ಬಂದಿದ್ದು, ಇಡೀ ಸಿನಿಮಾಗೆ ಕ್ರಿಕೆಟ್ ಸೀನ್ ತಿರುವು ನೀಡುತ್ತದೆ. ಹಾಗೇ ಕೋಟಿ ಕೋಟಿ ಕನ್ನಡಿಗರು ಈ ಸಿನಿಮಾ ನೋಡಿ & ಕ್ರಿಕೆಟ್ ಆಡುವ ಕಾಮಿಡಿ ನೋಡಿ ನಕ್ಕಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಅವರು ಔಟ್ ಆಗುವ ಸೀನ್‌ನ ಈ ವಿಡಿಯೋ ಜೊತೆಗೆ ಎಡಿಟಿಂಗ್ ಮಾಡಿರುವುದು ವೈರಲ್ ಆಗುತ್ತಿದೆ.
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ, ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲೂ ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತದೆ. ಆರ್‌ಸಿಬಿ ಕೊನೇ ತಂಡವಾಗಿ ಪ್ಲೇಆಫ್ ತಲುಪುವುದಕ್ಕೆ ಇದರಿಂದ ಸಾಧ್ಯತೆ ಇರುತ್ತದೆ.
ಅಭಿಮಾನಿಗಳಿಂದ ಭರ್ಜರಿ ಬೆಂಬಲ
ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು & ಆರ್‌ಸಿಬಿ ತಂಡಕ್ಕೆ ಕಪ್ ಬರಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆಯಾಗಿದೆ. ಆದ್ರೂ ಈ ಆಸೆಯು ಈಡೇರುತ್ತಿಲ್ಲ. ಆರ್‌ಸಿಬಿ ತಂಡ ಕಪ್ ಗೆಲ್ಲುತ್ತಿಲ್ಲ. ಇತ್ತೀಚೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಟೀಂ ವಿರುದ್ಧ ಆರ್‌ಸಿಬಿ ತಂಡ ರೋಚಕ ಸೋಲು ಕಂಡಿದೆ. ಈ ಮೂಲಕ ಸತತ 6 ಸೋಲು ಕಂಡು ಆರ್‌ಸಿಬಿ ಕಂಗಾಲಾಗಿ ಕುಳಿತಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಡೌಟ್ ಕೂಡ ಕಾಡುತ್ತಿದೆ. ಅಭಿಮಾನಿಗಳು ಮಾತ್ರ ನಮ್ಮ ಆರ್‌ಸಿಬಿ ನಮ್ಮ ಹೆಮ್ಮೆ ಅನ್ನೋ ಮಾತನ್ನು ಹೇಳುತ್ತಾ ಮತ್ತೊಮ್ಮೆ ಆರ್‌ಸಿಬಿ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.












Click it and Unblock the Notifications