ಆರ್‌ಸಿಬಿ ಚೆಲುವೆ ಇವಳೆ ನೋಡಿ! ಇವಳಂದಕೆ ಸಾಟಿ ಎಲ್ಲೂ ಇಲ್ಲ...

ಆರ್‌ಸಿಬಿ ಕ್ರಿಕೆಟ್ ತಂಡಕ್ಕೆ ಕೋಟಿ ಕೋಟಿ ಅಭಿಮಾನಿಗಳು ಇದ್ದು, ಅದರಲ್ಲೂ ಮಹಿಳಾ ಅಭಿಮಾನಿಗಳ ದಂಡೇ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡು, ಕೇರಳ ಹಾಗೇ ಆಂಧ್ರ ಪ್ರದೇಶದಲ್ಲೂ ಆರ್‌ಸಿಬಿ ಕ್ರಿಕೆಟ್ ತಂಡಕ್ಕೆ ಮಹಿಳಾ ಅಭಿಮಾನಿಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಇದೇ ರೀತಿ ತಮಿಳುನಾಡು ರಾಜಧಾನಿ ಚೆನ್ನೈ ನಗರದಲ್ಲಿ, ಒಬ್ಬ ವಿಶೇಷ ಮಹಿಳಾ ಅಭಿಮಾನಿ ಆರ್‌ಸಿಬಿ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಸಪೋರ್ಟ್ ಮಾಡ್ತಾ ಇದ್ದಾರೆ.

'ಐಪಿಎಲ್' ಟೂರ್ನಿ ಭಾರತೀಯರ ಭಾವನೆ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯುತ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿ ಶುರುವಾಗಿದ್ದು, ಆರ್‌ಸಿಬಿ ತಂಡಕ್ಕೆ ದೊಡ್ಡ ಸಪೋರ್ಟ್ ಸಿಗುತ್ತಿದೆ. ಆದ್ರೂ ಆರ್‌ಸಿಬಿ (RCB Team) ಸಾಲು ಸಾಲು ಪಂದ್ಯದಲ್ಲಿ ಸೋಲು ಅನುಭವಿಸಿ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಮಹಿಳಾ ಅಭಿಮಾನಿ ಒಬ್ಬರು, ಆರ್‌ಸಿಬಿ ತಂಡಕ್ಕೆ ಧೈರ್ಯ ತುಂಬುತ್ತಿದ್ದಾರೆ.

Support From Beautiful RCB Female Fan Videos Are Going Viral In Social Media

ಬೆಂಗಳೂರು ತಂಡಕ್ಕೆ ಬೆಂಬಲ!

ಆರ್‌ಸಿಬಿ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್​​ (KKR vs RCB) ಎದುರು ಸೋಲುವ ಮೂಲಕ, ಅಭಿಮಾನಿಗಳಿಗೆ ಕೂಡ ದೊಡ್ಡ ಆಘಾತ ನೀಡಿದೆ. ಇದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆರ್‌ಸಿಬಿ ತಂಡ ನಿನ್ನೆಯ ಸೋಲಿನ ಮೂಲಕ, ಸತತ 6ನೇ ಸೋಲನ್ನ ಕಂಡಿದೆ. ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಆರ್‌ಸಿಬಿ. ಇನ್ನು ಉಳಿದ 7ರಲ್ಲಿ ಸೋತಿದ್ದು, 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಪಡೆದಿದ್ದು. ಈ ಮೂಲಕ ಆರ್‌ಸಿಬಿ, 2024ರ ಐಪಿಎಲ್ ಟೂರ್ನಿಯಲ್ಲಿ ಕೊನೇ ಸ್ಥಾನದಲ್ಲಿ ಇದೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡದ ಫೀಮೇಲ್ ಅಭಿಮಾನಿ ಒಬ್ಬರು ಬೆಂಗಳೂರು ತಂಡಕ್ಕೆ ಧೈರ್ಯ ತುಂಬಿದ್ದಾರೆ.

ಆರ್‌ಸಿಬಿ ತಂಡಕ್ಕೆ ಸೋಲು ಅಥವಾ ಗೆಲುವು ಹೊಸದಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ, ನಮ್ಮ ಆರ್‌ಸಿಬಿ ತಂಡಕ್ಕೆ ಬೆಂಬಲ ಸಿಗುತ್ತಿದ್ದು. ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿ ಬಳಗ ಪ್ರತಿ ಪಂದ್ಯದಲ್ಲೂ ಆರ್‌ಸಿಬಿ ಪರ ನಿಲ್ಲುತ್ತಿದೆ. ಹೀಗಾಗಿ ಆರ್‌ಸಿಬಿ ತಂಡದ ಪ್ಲೇಯರ್ಸ್ ಸಿಕ್ಕಾಪಟ್ಟೆ ಜೋಶ್‌ನಲ್ಲಿ, ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೂ ಅವರಿಗೆ ಗೆಲುವು ಸಿಗುತ್ತಿಲ್ಲ. ಹೀಗಿದ್ದಾಗ ಆರ್‌ಸಿಬಿ ತಂಡಕ್ಕೆ ಮಹಿಳಾ ಅಭಿಮಾನಿ ನೀಡುತ್ತಿರುವ ಬೆಂಬಲವೂ ವೈರಲ್ ಆಗುತ್ತಿದೆ.

ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗುತ್ತಾ?

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ, ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲೂ ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್​ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ.

ಈ ಮೂಲಕ ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತೆ. ಆದ್ರೆ ನಿನ್ನೆ ಪಂದ್ಯದಲ್ಲಿ, ಕೇವಲ 1 ರನ್‌ ಅಂತರದಲ್ಲಿ ಆರ್‌ಸಿಬಿ ತಂಡವು ಸೋತಿದೆ. ಹೀಗಾಗಿ ಇದೀಗ 6 ರನ್ ಅಂದ್ರೆ ಸಿಕ್ಸ್ ನೀಡುವ ಬದಲು ಕೇವಲ 4 ನೀಡಿದ್ದೇ ಸೋಲಿಗೆ ಕಾರಣ ಆಯ್ತು ಅಂತಾ ಅಭಿಮಾನಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+