ಆರ್‌ಸಿಬಿ ತಂಡಕ್ಕೆ ಮೋಸ? ಪದೇ ಪದೇ ಯಾಕೆ ಆರ್‌ಸಿಬಿ ಟಾರ್ಗೆಟ್? ಅಂತಿದ್ದಾರೆ ಫ್ಯಾನ್ಸ್!

ಆರ್‌ಸಿಬಿ ತಂಡ ಸಾಲು ಸಾಲು ಸೋಲು ಅನುಭವಿಸಿದೆ, ಹೀಗಿದ್ದಾಗ ನಿನ್ನೆ ಕೂಡ ಕೊಲ್ಕತ್ತಾ ತಂಡದ ಎದುರು ನಮ್ಮ ಬೆಂಗಳೂರು ಐಪಿಎಲ್ ತಂಡ ಆರ್‌ಸಿಬಿ ಸೋಲು ಕಂಡಿದೆ. ಹೀಗೆ ಆರ್‌ಸಿಬಿ ಅಭಿಮಾನಿಗಳು ಸೋಲಿನ ನೋವಿನಲ್ಲಿ ಇರುವಾಗಲೇ, ಆರ್‌ಸಿಬಿ ತಂಡಕ್ಕೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದರೆ ಆರ್‌ಸಿಬಿ ಕ್ರಿಕೆಟ್ ಟೀಂಗೆ ಮೋಸ ಆಗಿದ್ದು ಹೇಗೆ? ಮೋಸ ಮಾಡಿದ್ದು ಯಾರು? ಮುಂದೆ ಓದಿ.

ಆರ್‌ಸಿಬಿ ಟೀಂ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್​​ (KKR vs RCB) ಎದುರು ಸೋಲುವ ಮೂಲಕ ಫ್ಯಾನ್ಸ್‌ಗೆ ದೊಡ್ಡ ಆಘಾತ ನೀಡಿದೆ. ಈ ನಡುವೆ ಸತತ 6ನೇ ಸೋಲನ್ನು ಕಂಡಿದೆ. ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಆರ್‌ಸಿಬಿ. ಇನ್ನುಳಿದ 7ರಲ್ಲಿ ಸೋತು ಕೇವಲ 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಗಳಿಸಿದೆ. ಈ ಮೂಲಕ ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಕೊನೇ ಸ್ಥಾನದಲ್ಲಿ ಇದೆ. ಪರಿಸ್ಥಿತಿ ಹೀಗಿದ್ದಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ನಿನ್ನೆಯ ಆರ್‌ಸಿಬಿ ಪಂದ್ಯದಲ್ಲಿ, ಆರ್‌ಸಿಬಿ ತಂಡಕ್ಕೆ ಮಹಾಮೋಸ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಹಾಗಿದ್ರೆ ಏನದು ಮಹಾಮೋಸ? ಅಭಿಮಾನಿಗಳ ಆರೋಪದ ವಿಡಿಯೋ ನೋಡಲು ಮುಂದೆ ಓದಿ.

What happened in 16 5 Overs During KKR vs RCB Match Did Suyash Prabhudessai hit 4 or 6 Fact Check

ನಮ್ಮ RCB ತಂಡಕ್ಕೆ ಮೋಸ?

ಆರ್‌ಸಿಬಿಗೆ ಮಹಾಮೋಸ ಮಾಡಿದ್ದಾರೆ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕಲು ಕಾರಣ ಆಗಿದ್ದು ಅದೊಂದು ತೀರ್ಪು. ನಿನ್ನೆ ಕೊಟ್ಟಿರುವ ಅದೊಂದು ತೀರ್ಪು ಈಗ ಕಿಚ್ಚು ಹೊತ್ತಿಸಿದೆ. ನಿನ್ನೆ ಆರ್‌ಸಿಬಿ ತಂಡ ಬ್ಯಾಟಿಂಗ್ ಆಡುವಾಗ 16.5ನೇ ಓವರ್‌ನಲ್ಲಿ, ಆರ್‌ಸಿಬಿ ತಂಡದ ಸುಯಾಶ್ ಪ್ರಭುದೇಸಾಯಿ ಅವರು ಭರ್ಜರಿ ಹೊಡೆತ ಬಾರಿಸಿದ್ದರು. ಆಗ ಬಾಲ್ ಗಾಳಿಯಲ್ಲಿ ಹಾರಿಕೊಂಡು ಹೋಗಿ ಬೌಂಡರಿ ಲೈನ್ ಬಳಿ ಬಿತ್ತು.

ಆಗ 4 ರನ್ ನೀಡಿ ಮೋಸ ಮಾಡಿದ್ದಾರೆ, ಎಂದು ಆರೋಪ ಮಾಡಲಾಗುತ್ತಿದೆ. ಯಾಕಂದ್ರೆ ಆಗ ಬಾಲ್ ಬೌಂಡರಿ ಗೆರೆ ದಾಟಿ ಹೋಗಿತ್ತು, ಹೀಗಾಗಿ ಅದು 6 ರನ್ ಆಗಬೇಕಿತ್ತು. ಆದ್ರೆ 4 ರನ್ ನೀಡಿ ಮೋಸ ಮಾಡಿದ್ದಾರೆ ಇದು ಆರ್‌ಸಿಬಿ ತಂಡಕ್ಕೆ ಮಾಡುತ್ತಿರುವ ಮೋಸ ಅಂತಾ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೇವಲ 1 ರನ್ ಅಂತರದಲ್ಲಿ ಸೋಲು ಕಂಡಿತ್ತು.

ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗುತ್ತಾ?

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಆರ್‌ಸಿಬಿ ತಂಡ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ, ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲೂ ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್​ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ.

ಈ ಮೂಲಕ ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತೆ. ಆದ್ರೆ ನಿನ್ನೆ ಪಂದ್ಯದಲ್ಲಿ, ಕೇವಲ 1 ರನ್‌ ಅಂತರದಲ್ಲಿ ಆರ್‌ಸಿಬಿ ತಂಡವು ಸೋತಿದೆ. ಹೀಗಾಗಿ ಇದೀಗ 6 ರನ್ ಅಂದ್ರೆ ಸಿಕ್ಸ್ ನೀಡುವ ಬದಲು ಕೇವಲ 4 ನೀಡಿದ್ದೇ ಸೋಲಿಗೆ ಕಾರಣ ಆಯ್ತು ಅಂತಾ ಅಭಿಮಾನಿಗಳು ಆಕ್ರೋಶ ಹೊರಹಾಕ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿ ನಡೆಯುತ್ತಿದೆ.

ಸಂಕಷ್ಟದಲ್ಲಿ ಜೊತೆಗಿರುವ ಅಭಿಮಾನಿಗಳು!

'ಐಪಿಎಲ್' ಟೂರ್ನಿ ಭಾರತೀಯರ ಭಾವನೆಗಳ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದ್ರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿ ಶುರುವಾಗಿದ್ದು ಆರ್‌ಸಿಬಿ ತಂಡಕ್ಕೆ ದೊಡ್ಡ ಸಪೋರ್ಟ್ ಸಿಕ್ಕಿದೆ. ಆದರೂ ಆರ್‌ಸಿಬಿ (RCB Team) ಸಾಲು ಸಾಲು ಪಂದ್ಯದಲ್ಲಿ ಸೋಲು ಅನುಭವಿಸಿ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಅಭಿಮಾನಿ ದೇವರುಗಳು ಆರ್‌ಸಿಬಿ ತಂಡಕ್ಕೆ ಧೈರ್ಯ ತುಂಬುತ್ತಾ ಮತ್ತೆ ತಮ್ಮ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+