Daily Horoscope: ಈ ರಾಶಿಯವರಿಗೆ ಹೊಸ ಅವಕಾಶ ಒಲಿದು ಬರುವುದು, ಮಾತೇ ನಿಮಗೆ ವರವಾಗುವ ದಿನ

Horoscope July 12: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ಸಂಜೆ 4:30 ರಿಂದ 6:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಮಾಡುವ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಮತ್ತು ಮಾನಸಿಕ ಶಾಂತಿ ಸಿಗುತ್ತದೆ.

Horoscope July 12

ವೃಷಭ ರಾಶಿ (Taurus):

ಆತ್ಮವಿಶ್ವಾಸದಿಂದ ಕೂಡಿರುವ ದಿನವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಆದರೂ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಆರೋಗ್ಯ ಉತ್ತಮವಾಗಿರುವುದು.

ಮಿಥುನ ರಾಶಿ (Gemini):

ಈ ದಿನ ಉತ್ಸಾಹ, ಸೃಜನಶೀಲತೆ ಮತ್ತು ಹೊಸ ವಿಚಾರಗಳಿಂದ ತುಂಬಿರುತ್ತದೆ. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಕೆಲಸದ ಹೊರೆ ಹೆಚ್ಚುವುದರಿಂದ ಮಾನಸಿಕ ಒತ್ತಡ ಕೂಡಾ ಹೆಚ್ಚಾಗುವುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕರ್ಕಾಟಕ ರಾಶಿ (Cancer):

ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆರೋಗ್ಯ ಸುಧಾರಿಸುವುದು.

ಸಿಂಹ ರಾಶಿ (Leo):

ಆತ್ಮವಿಶ್ವಾಸದಿಂದ ತುಂಬಿರುವ ದಿನ. ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿನ ಸಂತೋಷ ಹೆಚ್ಚುವುದು. ಹೊಸ ವ್ಯಕ್ತಿಗಳ ಪರಿಚಯವಾಗುವುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಕೊಡಿ.

ಕನ್ಯಾ ರಾಶಿ (Virgo):

ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವ ದಿನ. ನಿಂತು ಹೋಗಿರುವ ಕೆಲಸ ಪೂರ್ಣವಾಗುವುದು. ಮಕ್ಕಳಿಂದ ಸಿಹಿ ಸುದ್ದಿ ಸಿಗುವುದು. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಸಂಗಾತಿಯೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ತುಲಾ ರಾಶಿ (Libra):

ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಸಾಲ ನೀಡುವ ವಿಚಾರಕ್ಕೆ ಕೈ ಹಾಕಬೇಡಿ. ಮಾತಿನಲ್ಲಿ ಮಾಧುರ್ಯತೆ ಇರಲಿ. ಹಳೆ ಸ್ನೇಹಿತರ ಭೇಟಿ ಸಂತೋಷ ತರುವುದು. ಆರೋಗ್ಯದತ್ತ ಗಮನಹರಿಸಿ.

ವೃಶ್ಚಿಕ ರಾಶಿ (Scorpio):

ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಪ್ರಗತಿಯಾಘುವುದು. ಭಾವನೆಗಳ ಮೇಲೆ ನಿಯಂತ್ರಣವಿರಲಿ. ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬೇಡಿ. ಹಣದ ಲಾಭವಾಗುವುದು. ಹೂಡಿಕೆ ಮಾಡಲು ಇದು ಸರಿಯಾದ ಸಮಯ.

ಧನು ರಾಶಿ (Sagitarius):

ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗುವುದು.ಮಕ್ಕಳ ಸಾಧನೆ ಖುಷಿ ತರುವುದು. ಕಡಿದು ಹೋದ ಸಂಬಂಧ ಮತ್ತೆ ಬೆಸೆದುಕೊಳ್ಳುವುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಮಕರ ರಾಶಿ (Capricorn):

ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗುರಿಗಳತ್ತ ಗಮನಹರಿಸಿ ಕಷ್ಟಪಟ್ಟು ಕೆಲಸ ಮಾಡಿದರೆ, ಉತ್ತಮ ಪ್ರಗತಿ ಸಿಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ.

ಕುಂಭ ರಾಶಿ (Aquarius):

ಹೊಸ ಆಲೋಚನೆಗಳೊಂದಿಗೆಯೇ ದಿನ ಆರಂಭವಾಗುವುದು. ಹೊಸ ಅವಕಾಶಗಳು ಒಲಿದು ಬರುವುದು. ಎಚ್ಚರಿಕೆಯಿಂದ ತೆಗೆದುಕೊಂಡ ನಿರ್ಧಾರಗಳು ಭವಿಷ್ಯದಲ್ಲಿ ಲಾಭ ನೀಡುವುದು. ಮಾನಸಿಕ ಶಾಂತಿಯತ್ತ ಗಮನ ಹರಿಸಿ.

ಮೀನ ರಾಶಿ (Pisces):

ಕುಟುಂಬ ಸದಸ್ಯರೊಂದಿಗಿನ ಬಾಂಧವ್ಯವು ಬಲಗೊಳ್ಳುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+