ಕೋಟಿ, ಕೋಟಿ ಲಾಭ: ರೀಲ್ಸ್ ಸ್ಟಾರ್ಸ್ ಕ್ರಿಕೆಟ್ ಕಾಮೆಂಟರಿಯ ಅಸಲಿ ಕಹಾನಿ ಇಲ್ಲಿದೆ ತಿಳಿಯಿರಿ!

ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಈಗ ಬರೀ ರೀಲ್ಸ್ ಸ್ಟಾರ್ಸ್ ಹಾವಳಿ ಶುರುವಾಗಿದ್ದು, ಬಹುತೇಕರಿಗೆ ರೀಲ್ಸ್ ಅನ್ನೋದೆ ಚಟವಾಗಿ ಹೋಗಿದೆ. ಹೀಗೆ ರೀಲ್ಸ್ ಹಿಂದೆ ಬಿದ್ದು ಒದ್ದಾಡಿ ಕೆಲವರು ಅವಮಾನ ಕೂಡ ಎದುರಿಸಿದ್ದಾರೆ. ಟ್ರೋಲ್ ಮಾಡುವವರು ರೀಲ್ಸ್ ಮಾಡೋರ ಅಕೌಂಟ್‌ಗಳನ್ನೇ ಟಾರ್ಗೆಟ್ ಮಾಡ್ತಾರೆ ಅನ್ನೋ ಆರೋಪ ಇದ್ದು, ಹಾಗೇ ರೀಲ್ಸ್ ಮಾಡುವ ಸೋಷಿಯಲ್ ಮೀಡಿಯಾ ಸ್ಟಾರ್‌ಗಳನ್ನ ಸೆಡೆಗಳು, ಕಮಂಗಿಗಳು ಅಂತೆಲ್ಲಾ ಬೈಯುತ್ತಾರೆ. ಆದರೆ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ಈ ರೀಲ್ಸ್ ಮಾಡುವವರನ್ನೇ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ!

ಹೌದು, ಆಧುನಿಕ ಕಾಲದಲ್ಲಿ ಸೋಷಿಯಲ್ ಮೀಡಿಯಾ ಅನ್ನೋದೆ ಒಂದು ಅಸ್ತ್ರವಾಗಿದೆ. ಹೀಗೆ ರೀಲ್ಸ್ ಮಾಡುತ್ತಲೇ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸುಲಭವಾಗಿ ದುಡಿಯುತ್ತಿದ್ದಾರೆ ಕೆಲವರು. ಇಂತಿಪ್ಪ ರೀಲ್ಸ್ ಸ್ಟಾರ್ಸ್ ಪೈಕಿ ಹಲವರು ಹೆಸರು ಕೆಡಿಸಿಕೊಂಡರೆ, ಇನ್ನೂ ಕೆಲ ಮಂದಿ ಲೈಫ್ ಸೆಟಲ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕ್ರಿಕೆಟ್ ಅಖಾಡಕ್ಕೂ ರೀಲ್ಸ್ ಮತ್ತು ವ್ಲಾಗ್ಸ್ ಮಾಡುವವರು ಎಂಟ್ರಿ ಕೊಡುತ್ತಿದ್ದು, ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲು ಕಾಮೆಂಟರಿ ಹೇಳುತ್ತಾ ಕೈತುಂಬಾ ಕಾಸು ಮಾಡುತ್ತಿದ್ದಾರೆ. ಹಾಗಾದರೆ ಇವರನ್ನು ಇದೀಗ, ದೊಡ್ಡ ದೊಡ್ಡ ಚಾನೆಲ್‌ಗಳು ಏಕೆ ಸೆಳೆಯುತ್ತಿವೆ? ಬನ್ನಿ ತಿಳಿಯೋಣ.

IPL 2024 This Is The Reason Why Social Media Stars Are Doing Cricket Commentary

ಅತಿ ಸುಲಭವಾಗಿ ಸಿಗುವ ಪ್ರಚಾರ!

ನಿಮಗೆಲ್ಲ ಗೊತ್ತಿರಬೇಕು, ಈ ಮೊದಲು ಅಂದ್ರೆ 2010ಕ್ಕಿಂತ ಮೊದಲು ಯಾವುದೇ ದೊಡ್ಡ ಸೋಷಿಯಲ್ ಮೀಡಿಯಾಗಳು ಭಾರತದಲ್ಲಿ ಖ್ಯಾತಿ ಪಡೆದಿರಲಿಲ್ಲ. ಹೀಗಾಗಿ 2010ಕ್ಕಿಂತಲು ಮೊದಲು ಟಿವಿ, ರೇಡಿಯೋ ಹಾಗೂ ನ್ಯೂಸ್ ಪೇಪರ್ ಮೂಲಕ ಜಾಹೀರಾತು ನೀಡುತ್ತಿದ್ದ ಕಂಪನಿಗಳು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಎಲ್ಲವನ್ನೂ ಮುಗಿಸುತ್ತವೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಜನರನ್ನೇ ಕರೆದುಕೊಂಡು ಬಂದು ತಮ್ಮ ಬ್ರ್ಯಾಂಡ್ ಪ್ರಮೋಷನ್ ಮಾಡಿಸುತ್ತವೆ. ಹೀಗೆ ಕ್ರಿಕೆಟ್ ಜಗತ್ತಿಗೆ ಸೋಷಿಯಲ್ ಮೀಡಿಯಾ, ರೀಲ್ಸ್ ಸ್ಟಾರ್ಸ್ ಎಂಟ್ರಿ ಕೊಟ್ಟು ಕಾಮೆಂಟರಿ ಹೇಳುತ್ತಿದ್ದಾರೆ.

ಹೊಸ ತಲೆಮಾರನ್ನು ಸೆಳೆಯುವ ತಂತ್ರ

2023ರ ಸಾಲಿನ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಕೂಡ ಡಾ. ಬ್ರೋ ಅವರು ಇದೇ ರೀತಿಯ ಕ್ರಿಕೆಟ್ ಕಾಮೆಂಟರಿ ಮಾಡಿ ಗಮನ ಸೆಳೆದಿದ್ದರು. ಈಗ ಮತ್ತೊಬ್ಬ ಸೋಷಿಯಲ್ ಮೀಡಿಯಾ ಸ್ಟಾರ್‌ಗೂ ಮಣೆ ಹಾಕಲಾಗಿದೆ. ಈ ಮೂಲಕ ಆಧುನಿಕ ಕಾಲದ ಕ್ರಿಕೆಟ್ ಅಭಿಮಾನಿಗಳನ್ನ ಸೆಳೆಯುವ ತಂತ್ರ ಕೂಡ ಇದರಲ್ಲಿ ಇದೆ ಅಂತಿದ್ದಾರೆ ಮಾರುಕಟ್ಟೆ ತಜ್ಞರು. ಇದೆಲ್ಲಾ ಏನೇ ಇದ್ದರೂ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಕ್ರಿಕೆಟ್ ಕಮೆಂಟರಿ ಹೇಳುತ್ತಿರುವುದು ಹೊಸ ತಲೆಮಾರಿನ ಗಮನ ಸೆಳೆಯುತ್ತಿದೆ.

ಅಭಿಮಾನಿಗಳಿಂದ ಭರ್ಜರಿ ಬೆಂಬಲ

ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು & ಆರ್‌ಸಿಬಿ ತಂಡಕ್ಕೆ ಕಪ್ ಬರಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆಯಾಗಿದೆ. ಆದ್ರೂ ಈ ಆಸೆಯು ಈಡೇರುತ್ತಿಲ್ಲ. ಆರ್‌ಸಿಬಿ ತಂಡ ಕಪ್‌ ಗೆಲ್ಲುತ್ತಿಲ್ಲ. ಇತ್ತೀಚೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಟೀಂ ವಿರುದ್ಧ ಆರ್‌ಸಿಬಿ ತಂಡ ರೋಚಕ ಸೋಲು ಕಂಡಿದೆ. ಈ ಮೂಲಕ ಸತತ 6 ಸೋಲು ಕಂಡು ಆರ್‌ಸಿಬಿ ಕಂಗಾಲಾಗಿ ಕುಳಿತಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಡೌಟ್ ಕೂಡ ಕಾಡುತ್ತಿದೆ. ಅಭಿಮಾನಿಗಳು ಮಾತ್ರ ನಮ್ಮ ಆರ್‌ಸಿಬಿ ನಮ್ಮ ಹೆಮ್ಮೆ ಅನ್ನೋ ಮಾತನ್ನು ಹೇಳುತ್ತಾ ಮತ್ತೊಮ್ಮೆ ಆರ್‌ಸಿಬಿ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+