Get Updates
Get notified of breaking news, exclusive insights, and must-see stories!

T20 World Cup: ಓಪನರ್‌ ಸ್ಲಾಟ್‌ಗೆ ರಾಯಲ್‌ ಎಂಟ್ರಿ ನೀಡಿದ ಯಶಸ್ವಿ ಜೈಸ್ವಾಲ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎಲ್ಲರ ಚಿತ್ತವನ್ನು ಕದ್ದಿದ್ದ ರಾಜಸ್ಥಾನ ರಾಯಲ್ಸ್‌ ಪ್ಲೇಯರ್‌ ಯಶಸ್ವಿ ಜೈಸ್ವಾಲ್‌. ಕಳೆದ ಕೆಲವು ದಿನಗಳಿಂದ ಯಶಸ್ವಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಇದರಿಂದ ಇವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬೇಕಾ ಬೇಡವಾ ಎಂಬ ಚರ್ಚೆಗಳು ಆರಂಭವಾಗಿದ್ದವು. ಯಶಸ್ವಿ ಮತ್ತೆ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್‌ ಓಪನರ್‌ ಸ್ಲಾಟ್‌ಗೆ ತಮ್ಮನ್ನು ಸಹ ಪರಿಗಣಿಸುವಂತೆ ಆಯ್ಕೆದಾರರ ಕದ ತಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಜೈಸ್ವಾಲ್‌, ಐಪಿಎಲ್‌ನಲ್ಲೂ ಇದೇ ಪ್ರದರ್ಶನ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಶಸ್ವಿ ಆರಂಭಿಕ ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಆದರೆ ಸೋಮವಾರ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿ ಎಲ್ಲರ ಗಮನ ಸೆಳೆದರು.

T20 World Cup Yashasvi Jaiswal makes a royal entry into the opener s slot

ಫಾರ್ಮ್‌ಗೆ ಮರಳಿದ ಯಶಸ್ವಿ

ಮುಂಬೈ ಇಂಡಿಯನ್ಸ್‌ ಬೌಲರ್‌ಗಳನ್ನು ಮನ ಬಂದಂತೆ ಯಶಸ್ವಿ ದಂಡಿಸಿದರು. ರಾಜಸ್ಥಾನ ತಂಡಕ್ಕೆ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡುವ ವೇಳೆ ಜೈಸ್ವಾಲ್‌ ಧಮಾಕೆದಾರ್ ಬ್ಯಾಟಿಂಗ್ ನಡೆಸಿದರು. 180 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ ಸೊಗಸಾದ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಜೋಶ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್‌ 8 ಓವರ್‌ಗಳಲ್ಲಿ 74 ರನ್‌ ಕಾಣಿಕೆ ನೀಡಿದರು. ಬಟ್ಲರ್‌ 35 ರನ್‌ ಬಾರಿಸಿ ಔಟ್ ಆದರು.

ರನ್‌ ಕಲೆ ಹಾಕಿದ ಜೈಸ್ವಾಲ್‌

ಯಶಸ್ವಿ ಜೈಸ್ವಾಲ್‌ ತಮ್ಮ ನೈಜ ಬ್ಯಾಟಿಂಗ್ ಮಾಡಿ ರನ್‌ ಕಲೆ ಹಾಕಿದರು. ಮುಂಬೈ ತಂಡದ ಸ್ಟಾರ್ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರ 11 ಎಸೆತಗಳನ್ನು ಎದುರಿಸಿ 18 ರನ್‌ ಬಾರಿಸಿದರು. ಅನುಭವಿ ಬೌಲರ್‌ ಪಿಯೂಷ್‌ ಚಾವ್ಲಾ ಅವರಿಗೂ ಯಶಸ್ವಿ ದಂಡಿಸಿದರು. ಇವರ 12 ಎಸೆತಗಳಲ್ಲಿ ಜೈಸ್ವಾಲ್‌ 23 ರನ್‌ ಸಿಡಿಸಿ ಅಬ್ಬರಿಸಿದರು. ಮುಂಬೈ ತಂಡದ ಯಾವೊಬ್ಬ ಬೌಲರ್‌ ಇವರನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

ಮುಂಬೈ ವಿರುದ್ಧ ರಾಜನಂತೆ ಮೆರೆದ ಯಶಸ್ವಿ

ಮುಂಬೈ ಇಂಡಿಯನ್ಸ್‌ ಪಂದ್ಯಕ್ಕೂ ಮುನ್ನ ಫಾರ್ಮ್‌ಗೆ ಪರದಾಡುತ್ತಿದ್ದ ಯಶಸ್ವಿ ಜೈಸ್ವಾಲ್‌, ಜೈಪುರ್‌ ಅಂಗಳದಲ್ಲಿ ರಾಜನಂತೆ ಮೆರೆದರು. 60 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ ಸಹಾಯದಿಂದ ಅಜೇಯ 104 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಲಯಕ್ಕೆ ಮರಳಿದರು.

T20 World Cup Yashasvi Jaiswal makes a royal entry into the opener s slot

ಓಪನರ್ ಸ್ಲಾಟ್‌ಗೆ ರೆಡಿ

ಟಿ20 ವಿಶ್ವಕಪ್‌ಗೆ ಇನ್ನು ತಂಡವನ್ನು ಪ್ರಕಟಿಸಬೇಕಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್‌, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕೋಚ್‌ ರಾಹುಲ್ ದ್ರಾವಿಡ್‌ ಇತ್ತೀಚಿಗೆ ಸಭೆ ನಡೆಸಿದ್ದರು. ಈ ವೇಳೆ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಮೇಲ್ನೋಟಕ್ಕಂತೂ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಬಲ್ಲರು ಎಂದು ನಂಬಲಾಗುತ್ತಿದೆ. ಒಂದು ವೇಳೆ ಈ ರೀತಿಯಾಗಿ ಆದಲ್ಲಿ ಬ್ಯಾಕ್‌ಅಪ್ ಓಪನರ್ ಸ್ಲಾಟ್‌ಗೆ ಒಬ್ಬ ಪ್ಲೇಯರ್ ಅವಶ್ಯಕತೆ ಇದೆ. ಈ ಸ್ಥಾನಕ್ಕಾಗಿ ಯಶಸ್ವಿ ಜೈಸ್ವಾಲ್‌ ದಿಢೀರ್‌ ಎಂಟ್ರಿ ನೀಡಿದ್ದಾರೆ. ಇವರೊಂದಿಗೆ ಈ ಸ್ಥಾನಕ್ಕಾಗಿ ಶುಭಮನ್‌ಗಿಲ್‌ ಪೈಪೋಟಿ ನಡೆಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+