ಬೀಳಗಿ-ಬೆಂಗಳೂರು ನಡುವೆ ಪಲ್ಲಕ್ಕಿ ಬಸ್: ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 25: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ನಗರಕ್ಕೆ ಮೊತ್ತೊಂದು ಬಸ್ ಸೇವೆಯನ್ನು ಆರಂಭಿಸಿದೆ. ಬೀಳಗಿ-ಬೆಂಗಳೂರು ನಡುವೆ ಈ ಬಸ್ ಸಂಚಾರ ನಡೆಸಲಿದೆ. ಪ್ರಯಾಣಿಕರು ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ವಾ.ಕ.ರ.ಸಾ.ಸಂ. ಬೀಳಗಿ-ಬೆಂಗಳೂರು ನಡುವೆ ಹವಾನಿಯಂತ್ರಣ ರಹಿತ 'ಪಲ್ಲಕ್ಕಿ' ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಸಹ ಟಿಕೆಟ್ ಬುಕ್ ಮಾಡಬಹುದಾಗಿದೆ.

ಬೀಳಗಿಯಿಂದ ಹೊರಡುವ ಬಸ್ ಗದ್ದನಕೇರಿ ಕ್ರಾಸ್, ನವನಗರ ಬಸ್ ನಿಲ್ದಾಣ ಬಾಗಲಕೋಟೆ, ಬಾಗಲಕೋಟೆ ಬಸ್ ನಿಲ್ದಾಣ, ಹುನಗುಂದ, ಇಳಕಲ್, ಕುಷ್ಟಗಿ ಮೂಲಕ ಬೆಂಗಳೂರು ತಲುಪಲಿದೆ.
ಬಸ್ ವೇಳಾಪಟ್ಟಿ: ಬಸ್ ಬೀಳಗಿಯಿಂದ 19:13ಕ್ಕೆ ಹೊರಟು, ಬೆಂಗಳೂರಿಗೆ 6 ಗಂಟೆಗೆ ತಲುಪಲಿದೆ. ಈ ಬಸ್‌ನಲ್ಲಿ ಸಂಚಾರ ನಡೆಸಲು ಜನರು ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಬೀಳಗಿಯಿಂದ ಹೊರಡುವ ಬಸ್ 9.40 ಗದ್ದನಕೇರಿ ಕ್ರಾಸ್, 20:05 ನವನಗರ ಬಸ್ ನಿಲ್ದಾಣ ಬಾಗಲಕೋಟೆ, 20:20 ಬಾಗಲಕೋಟೆ ಬಸ್ ನಿಲ್ದಾಣ, 21:35 ಹುನಗುಂದ, 22:00 ಇಳಕಲ್, 22:35 ಕುಷ್ಟಗಿ ಮೂಲಕ 6 ಗಂಟೆಗೆ ಬೆಂಗಳೂರು ತಲುಪಲಿದೆ.
ಬೀಳಗಿ 🔁 ಬೆಂಗಳೂರು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ
— North Western Karnataka Road Transport Corporation (@nw_krtc) April 25, 2024
ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADJWvu ಗೆ ಭೇಟಿ ನೀಡಿ. #OnlineTicketBooking #Pallakki #NonAc #bus #bagalkote #Hunagunda #Ilkal #Kushtagi #Bengaluru pic.twitter.com/MwACurtjeg
ಕೆಎಸ್ಆರ್‌ಟಿಸಿ ದೂರ ಪ್ರಯಾಣದ ಪ್ರಯಾಣಿಕರ ಅನುಕೂಲಕ್ಕಾಗಿ ನಾನ್ ಎಸಿ ಸ್ಲೀಪರ್ ಬಸ್ ಖರೀದಿ ಮಾಡಿತ್ತು. ಈಗ ವಿವಿಧ ಸಾರಿಗೆ ನಿಗಮಗಳಿಗೆ ಬಸ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. 6 ರಿಂದ 8 ಗಂಟೆಗಳ ಪ್ರಯಾಣದ ನಗರಗಳಿಗೆ ಸಂಪರ್ಕಿಸಲು ಈ ಬಸ್‌ಗಳನ್ನು ಓಡಿಸಲಾಗುತ್ತಿದೆ.
ಮೊದಲು ಕೆಎಸ್ಆರ್‌ಟಿಸಿ 40 ನಾನ್ ಎಸಿ 'ಪಲ್ಲಕ್ಕಿ' ಬಸ್‌ಗಳನ್ನು ಖರೀದಿ ಮಾಡಿತ್ತು. ಬಳಿಕ ಹಂತ-ಹಂತವಾಗಿ ಬಸ್‌ಗಳನ್ನು ಖರೀದಿ ಮಾಡಿದ್ದು, ನಿಗಮಗಳಿಗೆ ಹಂಚಿಕೆ ಮಾಡಿದೆ. ನಿಗಮಗಳು ಯಾವ ಮಾರ್ಗದಲ್ಲಿ ಬಸ್ ಓಡಿಸಬೇಕು ಎಂದು ತೀರ್ಮಾನಿಸಿ ಬಸ್ ಸಂಚಾರವನ್ನು ಆರಂಭಿಸಿವೆ. ಈ ಬಸ್‌ಗಳು 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್ ಲೈನ್ ಹೊಂದಿವೆ.
ಈ 'ಪಲ್ಲಕಿ' ಹೆಸರಿನ ಬಸ್‌ಗಳು 30 ಸೀಟುಗಳನ್ನು ಹೊಂದಿವೆ. ಪ್ರಯಾಣಿಕರು ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವ ಸೌಲಭ್ಯವನ್ನು ಬಸ್ ಹೊಂದಿದೆ. ಚಪ್ಪಲಿ, ಶೂ ಇಡಲು ಸ್ಥಳಾವಕಾಶದ ವ್ಯವಸ್ಥೆ ಇದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಬಸ್ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಹೊಂದಿದೆ. ಅಹಿತಕರ ಘಟನೆ ನಡೆದರೆ ಎಲ್ಲಾ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದೆ. ಅಡಿಯೋ ಸ್ವೀಕರ್ ಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ.












Click it and Unblock the Notifications