Birthday Special: ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್‌ ಬಳಿ ಇರುವು ಐಶಾರಾಮಿ ಕಾರ್‌ಗಳು ಯಾವವು ಗೊತ್ತಾ?

ಭಾರತ ಕಂಡ ಶ್ರೇಷ್ಠ ಬ್ಯಾಟರ್.. ತನ್ನ ಅಘಾದ ಬ್ಯಾಟಿಂಗ್ ಶಕ್ತಿಯಿಂದಲೇ ವಿಶ್ವದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರವ ಮಾಸ್ಟರ್‌ ಬ್ಲಾಸ್ಟರ್‌. ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡೂಲ್ಕರ್‌ಗೆ ಇಂದು (ಏ.24) ಹುಟ್ಟು ಹಬ್ಬದ ಸಂಭ್ರಮ.

ಮೈದಾನದಲ್ಲಿ ಎದುರಾಳಿ ಬೌಲರ್‌ಗಳನ್ನು ಕಾಡಿ ಬೌಂಡರಿ, ಸಿಕ್ಸರ್‌ ಸುರಿ ಮಳೆ ಸುರಿಸುತ್ತಿದ್ದ ಮುಂಬೈಕರ್‌, ಹಲವು ದಾಖಲೆಗಳ ಒಡೆಯ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕವನ್ನು ದಾಖಲಿಸಿದ ಮೊದಲ ಬ್ಯಾಟರ್‌.. 200 ಟೆಸ್ಟ್‌ ಪಂದ್ಯಗಳನ್ನು ಆಡಿರುವ ವಿಶ್ವದ ಏಕೈಕ ಪ್ಲೇಯರ್‌.. ಹೀಗೆ ಹೇಳುತ್ತಾ ಹೊರಟರೆ ಮುಗಿಯದಷ್ಟು ದಾಖಲೆ.

Birthday Special Sachin Tendulkar Expensive Car Collections

ಭಾರತದ ಪೋಸ್ಟರ್‌ ಬಾಯ್‌

ಸಚಿನ್‌ ಮೈದಾನಕ್ಕೆ ಇಳಿಯುತ್ತಿದ್ದಂತೆ ಪ್ರತಿ ಪಂದ್ಯದಲ್ಲೂ ಒಂದೊಂದು ದಾಖಲೆ ಬರೆಯುತ್ತಿದ್ದರು. ಅವರು ಅಂದು ಬಾರಿಸುತ್ತಿದ್ದ ಶಾಟ್‌ಗಳು ಕ್ರಿಕೆಟ್‌ ಅಭಿಮಾನಿಗಳ ಕಣ್ಣಿನಲ್ಲಿ ಇನ್ನು ಹಸಿರಾಗಿವೆ. ಸಚಿನ್‌ ಬ್ಯಾಟಿಗೆ ಮುತ್ತಿಟ್ಟ ಚೆಂಡು ಕವರ್‌ ಬೌಂಡರಿ ಕಡೆಗೆ ಹೋಗುತ್ತಿದ್ದರೆ ನೋಡುವುದು ಕಣ್ಣಿಗೆ ಹಬ್ಬ.. ಇನ್ನು ಸ್ಟ್ರೇಟ್ ಡ್ರೈವ್, ಆನ್ ಶಾಟ್‌ಗಳು, ಹುಕ್‌ ಶಾಟ್‌ಗಳನ್ನು ಕಲಾತ್ಮಕವಾಗಿ ಆಡಬಲ್ಲ ಚತುರ ಬ್ಯಾಟರ್‌ ಸಚಿನ್‌.

ಮೈದಾನದಲ್ಲಿ ಎದುರಾಳಿ ಬೌಲರ್‌ಗಳಿಗೆ ಸಿಂಹ ಸ್ವಪ್ನವಾಗಿದ್ದ ಸಚಿನ್‌, ಸ್ಟೇಡಿಯಂ ಹೊರಗಡೆ ಒಳ್ಳೆಯ ಸ್ನೇಹಿತ. ಅಷ್ಟೇ ಅಲ್ಲ ಇವರು ಒಬ್ಬ ಬೆಸ್ಟ್ ಉದ್ಯಮಿ ಸಹ ಹೌದು. ಇವರಿಗೆ ಮೊದಲಿನಿಂದಲೂ ಕಾರ್‌ಗಳ ಮೇಲೆ ವಿಶೇಷ ಮೋಹ. ಇವರ ಗ್ಯಾರೇಜ್‌ನಲ್ಲಿ ನಿಂತಿರುವ ಕಾರ್‌ ಕಲೆಕ್ಷನ್‌ ಒಮ್ಮೆ ನೋಡಿದರೆ ಶೋ ರೂಮ್‌ಗೆ ಹೋದ ಫೀಲ್ ಆಗುತ್ತದೆ.

ಸಚಿನ್‌ ಬಳಿ ಇವೆ ಐಶಾರಾಮಿ ಕಾರ್‌

ಸಚಿನ್‌ಗೆ ತನ್ನ ಬ್ಯಾಟ್‌ ಮೇಲೆ ಇದ್ದಷ್ಟೇ ಪ್ರೀತಿ ಕಾರ್‌ಗಳ ಮೇಲೂ ಇದೆ. ಇವರ ಬಳಿ ಹಲವು ಐಶಾರಾಮಿ ಕಾರ್‌ಗಳು ಇವೆ. ಇದರಲ್ಲಿ ಎದ್ದು ಕಾಣುವುದು ಎಂದರೆ ಲಾಂಬೊರ್ಗಿನಿ. ಸಚಿನ್‌ ಬಳಿ ಲಾಂಬೊರ್ಗಿನಿ ಉರ್ಸ್‌ ಎಸ್‌ ಸೀರಿಸ್‌ ಕಾರಿದೆ. ಇದರ ಬೆಲೆ 4.18 ಕೋಟಿ ರೂ.

Birthday Special Sachin Tendulkar Expensive Car Collections

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಅವರ ಬಳಿ ಬಿಎಂಡಬ್ಲ್ಯೂ ಕಂಪನಿಯ ಹಲವು ಕಾರ್‌ಗಳು ಇವೆ. ಇದರಲ್ಲಿ ಬಿಎಂಡಬ್ಲ್ಯೂ 7 ಸೀರಿಸ್‌ ಎಲ್‌ಐ, ಬಿಎಂಡಬ್ಲ್ಯೂ ಎಕ್ಸ್‌5ಎಂ, ಬಿಎಂಡಬ್ಲ್ಯೂ ಐ8, ಬಿಎಂಡಬ್ಲ್ಯೂ 5 ಸೀರಿಸ್‌ ನಂತಹ ಐಶಾರಾಮಿ ಕಾರ್‌ಗಳನ್ನು ಹೊಂದಿದ್ದಾರೆ. ಸಚಿನ್‌ ಈ ಕಂಪನಿಯ ರಾಯಭಾರಿ ಆಗುವ ಮುನ್ನವೇ ಈ ಕಂಪನಿಯ ಕಾರ್‌ಗಳನ್ನು ಖರೀದಿಸಿದ್ದರು. ಬುಲೇಟ್‌ ಪ್ರೂಫ್‌ ಕಾರ್‌ಗಳನ್ನು ಸಹ ಇವರು ಹೊಂದಿದ್ದಾರೆ.

ಮುಂಬೈಕರ್‌ ಕಾರ್‌ ಗ್ಯಾರೇಜ್‌ನಲ್ಲಿ ಫೆರಾರೆ ಸಹ ಸ್ಥಾನ ಪಡೆದಿದೆ. ಇನ್ನು ನಿಸಾನ್‌ ಜಿಟಿ ಕಾರ್‌ ಸಹ ಇವರ ಬಳಿ ಇದೆ.

ಬಾಂದ್ರಾದಲ್ಲಿ ಐಶಾರಾಮಿ ಮನೆ

ಮುಂಬೈನ ಬಾಂದ್ರಾದಲ್ಲಿರುವ ಐಷಾರಾಮಿ ಮನೆಯಲ್ಲಿ ಸಚಿನ್ ತೆಂಡೂಲ್ಕರ್ ವಾಸಿಸುತ್ತಿದ್ದಾರೆ. 2007ರಲ್ಲಿ ಈ ಬಂಗಲೆಯನ್ನು 39 ಕೋಟಿ ರೂ.ಗೆ ಖರೀದಿಸಿದ್ದರು. ಸದ್ಯ ಈ ಮನೆಯ ಬೆಲೆ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೇ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಸಚಿನ್ ಫ್ಲಾಟ್ ಕೂಡ ಹೊಂದಿದ್ದಾರೆ. ಇದರ ಬೆಲೆ ಸುಮಾರು ಆರರಿಂದ ಎಂಟು ಕೋಟಿ ರೂಪಾಯಿ. ಮುಂಬೈ ಮಾತ್ರವಲ್ಲದೆ, ಕೇರಳದಲ್ಲಿಯೂ ಮಾಸ್ಟರ್ ಬ್ಲಾಸ್ಟರ್ ಮನೆ ಹೊಂದಿದ್ದು, ಅನೇಕ ಸಂದರ್ಭಗಳಲ್ಲಿ ತಮ್ಮ ಕುಟುಂಬದೊಂದಿಗೆ ಈ ಮನೆಗೆ ಭೇಟಿ ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+