ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್? ಆರ್‌ಸಿಬಿ ಆಡಳಿತ ಮಂಡಳಿ ನಿರ್ಧಾರ ಏನು?
ಆರ್‌ಸಿಬಿ ತಂಡ ಸಾಲು ಸಾಲು ಸೋಲುಗಳನ್ನ ನೋಡಿ ಕಂಗೆಟ್ಟು ಹೋಗಿದೆ. ಮುಂದೆಯೂ ಇದೇ ರೀತಿಯಲ್ಲಿ ಸೋಲು ಕಾಣುತ್ತಿದ್ದರೆ ಪರಿಸ್ಥಿತಿ ಏನು? ಅನ್ನೋ ಚಿಂತೆ ಶುರುವಾಗಿದ್ದು, ಆರ್‌ಸಿಬಿ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಅವರು ಮತ್ತೆ ಕ್ಯಾಪ್ಟನ್ ಅಂದ್ರೆ ನಾಯಕ ಆಗ್ತಾರಾ? ಎಂಬ ಪ್ರಶ್ನೆ ಮೂಡಿರುವಾಗ ಸಖತ್ ಸುದ್ದಿ ಸಿಕ್ಕಿದೆ ಈ ಸುದ್ದಿಯಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಖುಷಿ ಖುಷಿಯಾಗಿ ಕುಣಿದಾಡಿದ್ದಾರೆ.
ಆರ್‌ಸಿಬಿ ಕಪ್ ಗೆಲ್ಲಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆಯಾಗಿದೆ. ಆದರೂ ಅದು ಈಡೇರುತ್ತಿಲ್ಲ ಆರ್‌ಸಿಬಿ ಕಪ್ ಗೆಲ್ಲುತ್ತಿಲ್ಲ. ಇತ್ತೀಚೆಗೆ ಕೂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ ರೋಚಕ ಸೋಲು ಕಂಡಿತ್ತು. ಈ ಮೂಲಕ ಸತತ 6 ಸೋಲು ಕಂಡು ಆರ್‌ಸಿಬಿ ಕಂಗಾಲಾಗಿ ಕುಳಿತಿದೆ. ಈ ಸಮಯದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಅನುಮಾನ ಮೂಡಿರುವಾಗ ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ನಾಳೆ ನಡೆಯುವ ಆರ್‌ಸಿಬಿ VS ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ಎಂಟ್ರಿ ಕೊಡ್ತಾರಾ? ಮುಂದೆ ಓದಿ.

16 ವರ್ಷ ಕಳೆದರೂ ಆರ್‌ಸಿಬಿ...
ಆರ್‌ಸಿಬಿ ಬೆಂಗಳೂರು ತಂಡಕ್ಕೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿಗಳು ಇದ್ದು, ಹೀಗಾಗಿ ನಮ್ಮ ಆರ್‌ಸಿಬಿ ತಂಡ ದೊಡ್ಡ ಹೆಸರು ಸಂಪಾದನೆ ಮಾಡಿದೆ. ಆದರೆ ಏನ್ ಮಾಡೋದು ಐಪಿಎಲ್ ಶುರುವಾಗಿ 16 ವರ್ಷ ಕಳೆದರೂ ನಮ್ಮ ಆರ್‌ಸಿಬಿ ಕಪ್ ಗೆದ್ದೇ ಇಲ್ಲ. ಈ ಕಾರಣಕ್ಕೆ ಆರ್‌ಸಿಬಿ ಅಭಿಮಾನಿಗಳು ಕೂಡ ಬೇಸರದಲ್ಲಿ ಇದ್ದಾರೆ. ಇನ್ನು 2024ರ ಐಪಿಎಲ್ ಟೂರ್ನಿ ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಆರ್‌ಸಿಬಿ ಈ ಬಾರಿ ತೊಡೆತಟ್ಟಿ ಅಖಾಡಕ್ಕೆ ಬಂದಿತ್ತು.
ಆದರೆ ಈಗ ಆಗಿರುವುದೇ ಬೇರೆ, ಆರ್‌ಸಿಬಿ ತಂಡ ಸತತವಾಗಿ 6 ಮ್ಯಾಚ್ ಸೋತು ನರಳಾಡಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಕ್ಯಾಪ್ಟನ್ ಆಗಿ, ಆರ್‌ಸಿಬಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಫ್ಯಾನ್ಸ್ ಪಾಲಿನ ಈ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಲು ಮುಂದೆ ಓದಿ.
ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟಿದ್ದು ಯಾಕೆ?
ವಿರಾಟ್ ಕೊಹ್ಲಿ ಅಂದ್ರೆ ಆರ್‌ಸಿಬಿ ಫ್ಯಾನ್ಸ್‌ಗೆ ಮಾತ್ರವಲ್ಲ ಇಡೀ ಭಾರತಕ್ಕೆ ಅಚ್ಚುಮೆಚ್ಚು ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಅಂತ ವಿರಾಟ್ ಕೊಹ್ಲಿ ಅವ್ರನ್ನು ಕರೆಯುತ್ತಾರೆ ಅಭಿಮಾನಿಗಳು. ಹೀಗಿದ್ದರೂ ವಿರಾಟ್ ಕೊಹ್ಲಿ ಅವರ ಬಗ್ಗೆ ಟೀಕೆ ಮಾಡುವವರಿಗೆ ಕಡಿಮೆ ಏನೂ ಇಲ್ಲ. ಹೀಗೆಯೆ ಹಲವಾರು ಟೀಕೆಗಳು ಕೇಳಿಬಂದ ಕಾರಣದಿಂದ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದ, ನಾಯಕತ್ವ ಸ್ಥಾನ ತ್ಯಜಿಸಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಪರಿಸ್ಥಿತಿಯೆ ಬದಲಾಗಿ ಹೊಗಿದೆ.

ಯಾಕಂದ್ರೆ ವಿರಾಟ್ ಕೊಹ್ಲಿ ಅವರಿಗೆ ಮತ್ತೆ ಆರ್‌ಸಿಬಿ ನಾಯಕತ್ವದ ಸ್ಥಾನ ಕೊಡಿ ಅಂತಾ ಅಭಿಮಾನಿಗಳು ಕೇಳುತ್ತಿದ್ದಾರೆ. ಈ ಹಿನ್ನೆಲೆ ನಾಳಿನ ಹೈದರಾಬಾದ್ ತಂಡದ ವಿರುದ್ಧ ಆರ್‌ಸಿಬಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿನ ನಾಳಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆದ್ದೇ ಗೆಲ್ಲಬೇಕು. ಸೋಲು ಕಂಡರೆ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಗ್ಯಾರಂಟಿ.
ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗುತ್ತಾ?
ಈಗಿನ ಸ್ಥಿತಿ ನೋಡುತ್ತಿದ್ರೆ ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡವೇ ನಡೆಯಬೇಕಿದೆ. ಯಾಕಂದ್ರೆ ಆರ್‌ಸಿಬಿ ಈಗಾಗಲೇ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದು ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿಯೇ ಆರ್‌ಸಿಬಿ ಮುಂದಿನ 6 ಪಂದ್ಯದಲ್ಲು ಗೆಲ್ಲಬೇಕು ಅಷ್ಟೇ ಅಲ್ಲದೆ ದೊಡ್ಡ ಅಂತರದಲ್ಲಿ ಗೆಲುವು ಕೂಡ ಸಾಧಿಸಬೇಕು. ಆಗ ಅಂತಿಮವಾಗಿ 6 ಪಂದ್ಯ ಗೆದ್ದರೆ ಲೀಗ್ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ.
ಈ ಮೂಲಕ ಲೀಗ್ ಹಂತದ ಪಂದ್ಯಗಳು ಮುಗಿದಾಗ ಆರ್‌ಸಿಬಿ ಒಟ್ಟಾರೆ 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತೆ. ಆದ್ರೆ ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ, ಕೇವಲ 1 ರನ್ ಅಂತರದಲ್ಲಿ ಆರ್‌ಸಿಬಿ ತಂಡ ಸೋತಿದ್ದು ಹೀಗಾಗಿ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಆರ್‌ಸಿಬಿ ಎದುರು ಇದೀಗ ದೊಡ್ಡ ಸವಾಲು ನಿಂತಿದೆ. ಹಾಗೇ ಕೊಹ್ಲಿ ಅವರು ಈ ಸಮಯದಲ್ಲಿ ಆರ್‌ಸಿಬಿಗೆ ಮತ್ತಷ್ಟು ಬೆಂಬಲವಾಗಿ ನಿಲ್ಲಬೇಕಿದೆ.












Click it and Unblock the Notifications