ಇಂಗ್ಲೆಂಡ್ ಹೆಣೆದ ಚಕ್ರವ್ಯೂಹದಿಂದ ಹೊರಬರಬೇಕಂದ್ರೆ ವೈಭವ್ ಈ ಕೆಲ್ಸ ಮಾಡ್ಲೇಬೇಕು: ಆರ್‌ಸಿಬಿ ಮಾಜಿ ಆಟಗಾರ ಮಹತ್ವದ ಸಲಹೆ

Vaibhav Sooryavanshi: ಭಾರತ-ಇಂಗ್ಲೆಂಡ್ ನಡುವಿನ ಟಿ20 ಸರಣಿಯು ಮುಕ್ತಾಯದ ಹಂತದಲ್ಲಿದೆ. ಗುರುವಾರ (ಜುಲೈ 09) ನಾಲ್ಕನೇ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಟೀಮ್ ಇಂಡಿಯಾ ಯುವ ಆಟಗಾರ ವೈಭವ್ ಸೂರ್ಯವಂಶಿ ಫಾರ್ಮ್ ಮತ್ತು ಅವರ ವಿರುದ್ಧ ಎದುರಾಳಿ ತಂಡ ರೂಪಿಸುತ್ತಿರುವ ರಣತಂತ್ರಗಳ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ಮಾಜಿ ಕ್ರಿಕೆಟರ್ ಅಚ್ಚರಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ಸರಣಿಯ ಆರಂಭಿಕ ಪಂದ್ಯಗಳಲ್ಲಿ ಭರ್ಜರಿ ಸಿಕ್ಸರ್‌ಗಳನ್ನ ಸಿಡಿಸಿ ಮಿಂಚಿದ್ದ ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ಬೌಲರ್‌ಗಳು ಸಖತ್ ತಯಾರಿ ನಡೆಸಿದ್ದಾರೆ ಎಂದು ಭಾರತ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

India vs England 4th T20I RCB Former Player Parthiv Patel Big Advice for Vaibhav Sooryavanshi

ಪಾರ್ಥಿವ್ ಪಟೇಲ್ ಹೇಳಿದ್ದೇನು?

'ಇಂಗ್ಲೆಂಡ್ ತಂಡದ ಬೌಲರ್‌ಗಳು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಸಿದ್ದಾರೆ. ಯಾವುದೇ ಒಬ್ಬ ಯುವ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ, ಆರಂಭದಲ್ಲಿ ಅವರ ತಂತ್ರಗಳು ಎದುರಾಳಿಗಳಿಗೆ ತಿಳಿದಿರುವುದಿಲ್ಲ. ಆದರೆ ಎರಡ್ಮೂರು ಪಂದ್ಯಗಳು ಮುಗಿದ ಬಳಿಕ ಆಧುನಿಕ ಕ್ರಿಕೆಟ್‌ನ ತಂತ್ರಜ್ಞಾನ ಮತ್ತು ವಿಡಿಯೋ ವಿಶ್ಲೇಷಣೆಗಳ ಸಹಾಯದಿಂದ ಆಟಗಾರನ ಬಲ ಮತ್ತು ದೌರ್ಬಲ್ಯಗಳನ್ನು ಪತ್ತೆಹಚ್ಚಲಾಗುತ್ತದೆ. ಇಂಗ್ಲೆಂಡ್ ತಂಡ ಈಗ ಸೂರ್ಯವಂಶಿ ವಿರುದ್ಧ ಅದನ್ನೇ ಮಾಡುತ್ತಿದೆ,' ಎಂದು ಅವರು ಹೇಳಿದ್ದಾರೆ.

ವೈಭವ್ ಕಟ್ಟಿಹಾಕಲು ಇಂಗ್ಲೆಂಡ್‌ ರಣತಂತ್ರ

'ವೈಭವ್ ಅವರಿಗೆ ಆಫ್-ಸ್ಟಂಪ್‌ಗಿಂತ ಹೊರಗೆ ಹೋಗುವ ಚೆಂಡುಗಳನ್ನು ಆಡಲು ಹಾಗೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸಲು ಇರುವ ಹಿಂಜರಿಕೆಯನ್ನ ಇಂಗ್ಲೆಂಡ್ ಬೌಲರ್‌ಗಳು ಟಾರ್ಗೆಟ್ ಮಾಡುತ್ತಿದ್ದಾರೆ. ವಿಶೇಷವಾಗಿ ಪವರ್‌ಪ್ಲೇ ಅವಧಿಯಲ್ಲಿ ಅವರ ರನ್ ವೇಗಕ್ಕೆ ಬ್ರೇಕ್ ಹಾಕಲು ಆಫ್-ಸೈಡ್‌ನಲ್ಲಿ ಫೀಲ್ಡಿಂಗ್ ಅನ್ನು ಬಿಗಿಗೊಳಿಸಿ, ಆ ಲೈನ್‌ನಲ್ಲೇ ಬೌಲಿಂಗ್ ಮಾಡುವ ವ್ಯವಸ್ಥಿತ ಯೋಜನೆಯನ್ನು ಇಂಗ್ಲೆಂಡ್ ಹಾಕಿಕೊಂಡಿದೆ. ಇದನ್ನು ಅವರು ಹೇಗೆ ಎದುರಿಸಲಿದ್ದಾರೆ ಎಂದು ಕಾದುನೋಡಬೇಕು,' ಎಂದು ಹೇಳಿದ್ದಾರೆ.

ವೈಭವ್‌ ಸೂರ್ಯವಂಶಿಗೆ ಮಹತ್ವದ ಸಲಹೆಗಳು

ಮುಂದಿನ ಮಹತ್ವದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಈ ಚಕ್ರವ್ಯೂಹದಿಂದ ಹೊರಬರಲು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಅಂತಲೂ ಸಲಹೆ ನೀಡಿದ್ದಾರೆ. 'ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗದೆ, ಇಂಗ್ಲೆಂಡ್ ಬೌಲರ್‌ಗಳ ಆರಂಭಿಕ ಓವರ್‌ಗಳನ್ನು ಮತ್ತು ಅವರ ಲೈನ್-ಲೆಂತ್ ಅನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು,' ಎಂದು ತಿಳಿಸಿದ್ದಾರೆ.

'ಎದುರಾಳಿಗಳು ಆಫ್-ಸ್ಟಂಪ್‌ನ ಹೊರಗಿನ ಎಸೆತಗಳ ಮೂಲಕ ವಿಕೆಟ್ ಪಡೆಯಲು ಕಾಯುತ್ತಿರುತ್ತಾರೆ. ಆದ್ದರಿಂದ ವೈಭವ್ ತಮ್ಮ ತಂತ್ರವನ್ನು ಬದಲಾಯಿಸಿಕೊಳ್ಳಬೇಕು ಬಳಸಿಕೊಂಡು ಜಾಗರುಕತೆಯಿಂದ ಆಡಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಸವಾಲುಗಳು ಸಾಮಾನ್ಯ. ಯಶಸ್ವಿ ಕ್ರಿಕೆಟಿಗ ಆಗಬೇಕಾದರೆ ಎದುರಾಳಿಗಳ ತಂತ್ರಕ್ಕೆ ತಕ್ಕಂತೆ ತಕ್ಷಣವೇ ಬದಲಾಗುವ ಸಾಮರ್ಥ್ಯ ಹೊಂದಿರಬೇಕು,' ಎಂದು ಸಲಹೆ ನೀಡಿದ್ದಾರೆ.

ಟೀಮ್‌ ಇಂಡಿಯಾಗೆ ಮಹತ್ವದ ಪಂದ್ಯ

ಟೀಮ್ ಇಂಡಿಯಾಗೆ ಈ ಸರಣಿಯು ಮುಂಬರುವ ದೊಡ್ಡ ಟೂರ್ನಿಗಳಿಗೆ ಯುವ ಆಟಗಾರರನ್ನು ಸಿದ್ಧಪಡಿಸುವ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ವೈಭವ್ ಸೂರ್ಯವಂಶಿ ಅವರಂತಹ ಪ್ರತಿಭಾವಂತ ಆಟಗಾರರು ಇಂತಹ ಕಠಿಣ ಸನ್ನಿವೇಶಗಳನ್ನು ಎದುರಿಸಿ ರನ್ ಗಳಿಸಿದಾಗ ಮಾತ್ರ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂಗ್ಲೆಂಡ್ ತಂಡವು ಸರಣಿಯಲ್ಲಿ ಕಠಿಣ ಪೈಪೋಟಿ ನೀಡುತ್ತಿರುವುದರಿಂದ, ಇಂದಿನ ಅಂದರೆ ನಾಲ್ಕನೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗವು ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗಿದೆ.

ಯುವ ಆಟಗಾರರ ಹಾದಿ ಯಾವಾಗಲೂ ಸುಲಭವಾಗಿರುವುದಿಲ್ಲ ಎಂಬುದಕ್ಕೆ ವೈಭವ್ ಸೂರ್ಯವಂಶಿ ವಿರುದ್ಧ ಇಂಗ್ಲೆಂಡ್ ರೂಪಿಸಿರುವ ತಂತ್ರವೇ ಸಾಕ್ಷಿ. ಒಟ್ಟಿನಲ್ಲಿ ನಾಲ್ಕನೇ ಟಿ20 ಪಂದ್ಯದಲ್ಲಿ ಈ ಬಾಲಕ ಇಂಗ್ಲೆಂಡ್‌ನ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ದೊಡ್ಡ ಇನ್ನಿಂಗ್ಸ್‌ ಆಡಿ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇನ್ನೂ ಬೇಬಿ ಬಾಸ್ ಬ್ಯಾಟಿಂಗ್‌ ನೋಡಲು ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಭಾರತ ಸಂಭಾವ್ಯ ಪ್ಲೆಯಿಂಗ್ 11: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್‌ ಅಯ್ಯರ್ (ನಾಯಕ), ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಪ್ರಿನ್ಸ್‌ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+