Viral Post: ಬೆಂಗಳೂರಿನಲ್ಲಿ ಪ್ರತಿ ತಿಂಗಳ ಖರ್ಚು ₹1.2 ಲಕ್ಷ ಆಗ್ತಿದೆ ಎಂದ ಯುವತಿ, ಇಷ್ಟೊಂದು ಖರ್ಚು ಆಗುತ್ತಾ ಎಂದ ನೆಟ್ಟಿಗರು

Viral Post: ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಹಾಗೂ ಬೆಂಗಳೂರಿನ ಬಾಡಿಗೆ ಮನೆ, ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆ ಹೆಚ್ಚಾಗುತ್ತಿದೆ. ಆಹಾರ ಹಾಗೂ ಪ್ರಯಾಣಕ್ಕೆ ಹೆಚ್ಚು ವೆಚ್ಚವಾಗುತ್ತಿದೆ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಈಚೆಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದೀಗ ಯುವತಿಯೊಬ್ಬರು ಬೆಂಗಳೂರು ನಗರದ ಜೀವನ ವೆಚ್ಚದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದೀಗ "ಬೆಂಗಳೂರು ನನಗೆ ಜೀವನದ ದೊಡ್ಡ ಪಾಠ ಕಲಿಸಿದೆ" ಎನ್ನುವ ಸಾಲುಗಳೊಂದಿಗೆ ಹಂಚಿಕೊಂಡಿರುವ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಜನ ತಮ್ಮ ಜೀವನ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಹಾಗೂ ಎಷ್ಟು ವೆಚ್ಚ ಮಾಡುತ್ತಿದ್ದಾರೆ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಇದೆ. ಇದೀಗ ಶಾಲಿನಿ (@Shalini70856041) ಎನ್ನುವ ಯುವತಿಯು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಅವರು ಎಷ್ಟು ಖರ್ಚು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಬರೆದುಕೊಂಡಿದ್ದಾರೆ. ಬೆಂಗಳೂರು ನನ್ನನ್ನು ವಿನಮ್ರನನ್ನಾಗಿ ಮಾಡಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.

Viral Post

ಬೆಂಗಳೂರು ನನ್ನನ್ನು ವಿನಮ್ರನನ್ನಾಗಿ ಮಾಡಿದೆ. ಇಲ್ಲಿವರೆಗೆ ನಾನು ಮಾಡಿದ ಖರ್ಚು:

ಸೆಕ್ಯುರಿಟಿ ಡೆಪಾಸಿಟ್: ₹67,000

ಮನೆ ಬಾಡಿಗೆ: ₹17,500

ಮನೆಯ ಖರ್ಚು: ₹10,000

ಇತರೆ: ₹7,500

ದಿನಸಿ ಸಾಮಾನು: ₹5,000

ಮನೆ ಕೆಲಸದವರ ಸಂಬಳ: ₹1,000

ವೈಯಕ್ತಿಕ ಬಳಕೆಯ ವಸ್ತುಗಳು: ₹1,000

ಮೊದಲ 20 ದಿನಗಳ ಬಾಡಿಗೆ: ₹11,700

ಒಟ್ಟು ಖರ್ಚು: ಸುಮಾರು ₹1.2 ಲಕ್ಷ.

ಅಯ್ಯೋ! ಈಗಿನ ಕಾಲದಲ್ಲಿ ₹1 ಲಕ್ಷ ಅಂತ ಹೇಳಿದ್ರೂ ಈ ಹಿಂದಿನ ₹30 ಸಾವಿರ ರೂಪಾಯಿ ಮೌಲ್ಯಕ್ಕೆ ಸಮನಾಗಿದೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಮುಂದುವರಿದು ಬೆಂಗಳೂರಿನಲ್ಲಿ ವೆಚ್ಚದ ಬಗ್ಗೆ ಅವರು ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆಫೀಸ್ ಕೇವಲ 4 ಕಿ.ಮೀ ದೂರದಲ್ಲಿದೆ, ಟ್ರಾಫಿಕ್ ಇಲ್ಲದೆ 15-20 ನಿಮಿಷಗಳು ಮತ್ತು ಟ್ರಾಫಿಕ್ ಇದ್ದರೆ 35-45 ನಿಮಿಷಗಳು ಬೇಕಾಗುತ್ತದೆ. ಇನ್ನೊಂದು ವಿಷಯವೆಂದರೆ ನಾನು ಇರುವುದು 3BHK ಮನೆ. ಆದ್ದರಿಂದ ವಾಸ್ತವವಾಗಿ ಸೆಕ್ಯುರಿಟಿ ಡೆಪಾಸಿಟ್ ₹2 ಲಕ್ಷ. ಆದರೆ ಅದನ್ನು ಮೂವರು ಹಂಚಿಕೊಂಡಿದ್ದೇವೆ. ಹಾಗೆಯೇ, ಮನೆಕೆಲಸದವರ ಸಂಬಳ ₹4 ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಅಡುಗೆ ಮಾಡುವವರು ಕೇವಲ 1,000 ರೂಪಾಯಿಗೆ ಸಿಗುತ್ತಾರೆಯೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಟಯರ್ ಟು ಸಿಟಿಗಳಲ್ಲೂ ಸಹ ಅಡುಗೆ ಮಾಡುವವರು ಸಿಗುತ್ತಿಲ್ಲ. ಬೆಂಗಳೂರಿನಂತಹ ನಗರದಲ್ಲಿ ಸಿಗುತ್ತಾರೆಯೇ ಎನ್ನುವುದು ವಿಶೇಷವಾಗಿದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ. ನೀವು ಪಿಜಿಗೆ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸಿದ್ದೀರಾ, ಹಾಗಿದ್ದರೆ ಏಕೆ ಮಾಡಬಾರದು. ಪಿಜಿ ಒಂದು ಬಾರಿಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+