ಚಾಣಕ್ಯ ನೀತಿ: ಸಮಾಜದಲ್ಲಿ ಗೌರವ ಸಿಗಬೇಕೆ? ಹಾಗಾದರೆ ಜೀವನದಲ್ಲಿ ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂಬದು ಬಹುತೇಕರ ಅಭಿಪ್ರಾಯ ಆಗಿರುತ್ತದೆ. ಆದರೆ ಆ ಗೌರವ ಹಣ ಅಥವಾ ಅಧಿಕಾರದಿ೦ದ ನಾವು ಪಡೆಯುತ್ತೆವೆ ಎಂಬುದು ಸುಳ್ಳು. ಯಾಕೆಂದರೆ ಗೌರವ ನಮ್ಮ ನಡೆ-ನುಡಿ, ಮಾತು ಮತ್ತು ಗುಣಗಳಿಂದಲೇ ಸಿಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಹಾಗಾದರೆ ನಾವು ಸಮಾಜದಲ್ಲಿ ಎಲ್ಲರಿಂದಲೂ ಗೌರವ ಪಡೆಯಬೇಕಾದರೆ ಚಾಣಕ್ಯನ ಯಾವ ಏಳು ಗುಣಗಳನ್ನು ಬೆಳೆಸಿಕೊಳ್ಳುಬೇಕು ಎಂಬುದನ್ನು ತಿಳಿಯೋಣ.

1. ಕೊಟ್ಟ ಮಾತು ಉಳಿಸಿಕೊಳ್ಳಿ
ಮಾತು ಕೊಡುವುದು ತುಂಬಾ ಸುಲಭ ಆದರೆ ಕೊಟ್ಟ ಮಾತು ಉಳಿಸಿಕೊಳ್ಳವುದು ಅಷ್ಟೆ ಕಷ್ಟಕರ. ಕೊಟ್ಟ ಮಾತನ್ನು ಪಾಲಿಸುವುದು ವ್ಯಕ್ತಿತ್ವದ ದೊಡ್ಡ ಗುಣ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು, ರಹಸ್ಯ ಕಾಪಾಡುವುದು ಹಾಗೂ ಜವಾಬ್ದಾರಿ ನಿಭಾಯಿಸುವುದು ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದ ಸಮಾಜದಲ್ಲಿ ಸಹಜವಾಗಿಯೇ ಗೌರವ ಸಿಗುತ್ತದೆ.
2. ಮಾತಾನಾಡುವುದು ಕಡಿಮೆ ಮಾಡಿ ಕೇಳುವುದನ್ನು ಕಲಿಯಿರಿ
ಒಳ್ಳೆಯ ಸಂವಹ ಎಂದರೆ ಅತಿಯಾಗಿ ಮಾತನಾಡುವುದಲ್ಲ, ಎದುರುಗಡೆ ಇದ್ದವರ ಮಾತನ್ನು ಮಧ್ಯದಲ್ಲಿ ಅಡ್ಡಿಪಡಿಸದೆ ಗಮನದಿಂದ ಕೇಳುವುದು ಮುಖ್ಯ. ಇನ್ನಿತರರ ಅಭಿಪ್ರಾಯಕ್ಕೆ ಗೌರವ ನೀಡುವುದರಿಂದ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಜನರು ಹೆಚ್ಚು ಬೆಲೆ ನೀಡುತ್ತಾರೆ.
3. ಎಲ್ಲರೊಂದಿಗೆ ನಮ್ರತೆಯಿಂದ ವರ್ತಿಸಿ
ವ್ಯಕ್ತಿಯ ಯಾವುದೆ ಹುದ್ದೆ ಆಗಿರಲಿ ಅಥವಾ ಅವರ ಸ್ಥಿತಿ ನೋಡದೆ ಎಲ್ಲರೊಂದಿಗೆ ವಿನಯದಿಂದ ನಡೆದುಕೊಳ್ಳುಬೇಕು. ಸಹಾಯ ಮಾಡುವುದು, ಧನ್ಯವಾದ ಹೇಳುವುದು ಅನೇಕ ಸಣ್ಣ ಸಣ್ಣ ಒಳ್ಳೆಯ ಅಭ್ಯಾಸಗಳು ಬೆಳೆಸಿಕೊಳ್ಳುಬೇಕು ಇದರಿಂದ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡುತ್ತದೆ.
4. ಸಂಕಷ್ಟದ ಸಮಯದಲ್ಲಿ ಶಾಂತವಾರಿ
ತೊಂದರೆಗಳು ಬಂದಾಗ ಆತುರಪಡದೆ ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳವ ವ್ಯಕ್ತಿಗಳನ್ನು ಕಂಡರೆ ಜನರು ಹೆಚ್ಚು ಗೌರವ ನೀಡುತ್ತಾರೆ. ಇದು ಪ್ರಬುದ್ಧತೆ ಮತ್ತು ನಮ್ಮಲಿರುವ ನಾಯಕತ್ವದ ಗುಣವನ್ನು ತೋರಿಸುತ್ತದೆ.
5. ಯಾವಾಗಲೂ ಹೊಸದನ್ನು ಕಲಿಯಿರಿ
ಕಲಿಯುವುದನ್ನು ನಾವು ಎಂದಿಗೂ ನಿಲ್ಲಿಸಬಾರದು. ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ನಿರಂತರ ಪ್ರಯತ್ನ ಮಾಡಬೇಕು ಇದರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನ ಮತ್ತು ಗೌರವ ಸಿಗುತ್ತದೆ. ಆತ್ಮ ನಿಯಂತ್ರಣ ಮತ್ತು ಪ್ರಾಮಾಣಿಕತೆಯಿಂದ ಬದುಕಿದರೆ ಗೌರವ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
6. ಅಹಂಕಾರ/ಗರ್ವ/ಸೊಕ್ಕು ಈತರಹದ ನಡುವಳಿಕೆ ಒಳ್ಳೆಯದಲ್ಲ
ಜ್ಞಾನ, ಯಶಸ್ಸು ಮತ್ತು ಸಂಪತ್ತು ಬಂದರೆ ಅಹಂಕಾರ ಬೆಳೆಸಿಕೊಳ್ಳಬಾರದು. ನಯವಿನಯದಿಂದ ವ್ಯಕ್ತಿತ್ವವು ಜನರ ಮನಸ್ಸು ಗೆಲ್ಲಲು ಸಾಧ್ಯವಾಗುತ್ತದೆ. ಎಲ್ಲರ ಜೊತೆ ಸಮಾನವಾಗಿ ನಡೆದುಕೊಳ್ಳುವದರಿಂದ ಗೌರವ ಹೆಚ್ಚುತ್ತದೆ.
7. ಪ್ರಾಮಾಣಿಕತೆ ಮತ್ತು ವಾಸ್ತವ ಪಾಲಿಸಿ
ಯಾವ ಸಂದರ್ಭದಲ್ಲಿಯೂ ಸತ್ಯ ಮತ್ತು ಪ್ರಮಾಣಿಕತೆಯನ್ನು ಬಿಟ್ಟುಕೊಡಬಾರದು. ಸುಳ್ಳು ಅಥವಾ ಮೋಸದಿಂದ ಗೌರವ ಸಿಕ್ಕರೆ ಅದು ಶಾಶ್ವತವಲ್ಲ. ಪ್ರಾಮಾಣಿಕತೆಯಿಂದ ಜೀವನ ನಡೆಸುವವರು ಯಾವಾಗಲೂ ವಿಶ್ವಾಸ ಮತ್ತು ಗೌರವವನ್ನು ಗಳಿಸುತ್ತಾರೆ.














Click it and Unblock the Notifications