ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಚುನಾವಣಾ ತಂತ್ರಕ್ಕೆ ದೇವೇಗೌಡರ ಜೆಡಿಎಸ್ ಮಾದರಿ! ಹೇಗೆ ?
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಕಾರ್ಯತಂತ್ರವನ್ನೇ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅನುಸರಿಸುತ್ತಿದ್ದಾರೆ ಎನ್ನುವ ವಿಷಯವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ದೀರ್ಘಕಾಲದಿಂದ ಇಸ್ರೇಲ್ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಬೆಂಜಮಿನ್ ನೆತನ್ಯಾಹು ಅವರು ಈಚೆಗೆ ಕೆಲವೊಂದು ವಿಚಿತ್ರ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಭಾರತೀಯರ ಬೆಂಬಲವಿದೆ ಎನ್ನುವುದು ಸಹ ಒಂದು. ಬೆಂಜಮಿನ್ ನೆತನ್ಯಾಹು ಅವರು, ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ತಮ್ಮದೇ ದೇಶದಲ್ಲಿ ಹೊಸ ಸವಾಲನ್ನು ಎದುರಿಸುತ್ತಿದ್ದಾರೆ. ಗಾಜಾ ಯುದ್ಧದಲ್ಲಿ ತಮ್ಮ ಪುತ್ರನನ್ನು ಕಳೆದುಕೊಂಡಿರುವ ಮಾಜಿ ಸೇನಾ ಜನರಲ್‌ಗೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಇದು ಮುಂದೆ ನೆತನ್ಯಾಹು ಅವರ ರಾಜಕೀಯದ ಮೇಲೆ ಪರಿಣಾಮ ಬೀರುವ ಆತಂಕ ಶುರುವಾಗಿದೆ.
ಇಸ್ರೇಲ್ ಮಿಲಿಟರಿಯ ಮಾಜಿ ಉನ್ನತ ಕಮಾಂಡರ್ ಗಡಿ ಐಸೆನ್‌ಕೋಟ್ ಅವರ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಸ್ರೇಲ್‌ನ ಮಧ್ಯಮಪಂಥೀಯ ಯಶರ್ ಎನ್ನುವ ಪಕ್ಷಕ್ಕೆ ಸಿಗುತ್ತಿರುವ ಬೆಂಬಲವು ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಎಂಬ ಪಕ್ಷಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಸಮಾನವಾಗಿದೆ ಎಂದು ಸಮೀಕ್ಷೆಯ ವರದಿಗಳು ಉಲ್ಲೇಖಿಸಿವೆ. 2023ರಲ್ಲಿ ಹಮಾಸ್ ನೇತೃತ್ವದಲ್ಲಿ ನಡೆದ ದಾಳಿ, ಇದಾದ ನಂತರ ನಿರಂತರವಾಗಿ ಗಾಜಾ, ಲೆಬನಾನ್ ಮತ್ತು ಇರಾನ್‌ನಲ್ಲಿ ನಡೆದ ಯುದ್ಧಗಳ ನಂತರ ಇದೇ ಮೊದಲ ಬಾರಿ ಇಸ್ರೇಲ್‌ನಲ್ಲಿ ಚುನಾವಣೆ ನಡೆಯಲಿದೆ. ಇದೇ ವರ್ಷ ಅಕ್ಟೋಬರ್ ಅಂತ್ಯದೊಳಗೆ ಮತದಾನ ನಡೆಯುವ ನಿರೀಕ್ಷೆಯಿದೆ.

ಇಸ್ರೇಲ್‌ನ ಪ್ರಧಾನಿಯಾಗಿ ಬೆಂಜಮಿನ್ ನೆತನ್ಯಾಹು ಸುದೀರ್ಘ 19 ವರ್ಷಗಳ ಆಡಳಿತ ನಡೆಸಿದ್ದಾರೆ. ಈ ಬಾರಿ ಇಸ್ರೇಲ್‌ನಲ್ಲಿ ಗೆಲ್ಲುವುದು ಬೆಂಜಮಿನ್ ನೆತನ್ಯಾಹು ಖಂಡಿತವಾಗಿಯೂ ಸುಲಭವಾಗಿಲ್ಲ. ವಿಶೇಷವಾಗಿ ಈಚೆಗೆ ನಡೆದ ಇರಾನ್ ವಿರುದ್ಧದ ಯುದ್ಧದ ಬಗ್ಗೆ ಇಸ್ರೇಲಿಗರಿಗೆ ಅಸಮಾಧಾನವಿದೆ. ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನಡೆದ ಯುದ್ಧದಲ್ಲಿ ಇಸ್ರೇಲ್ ನಿರೀಕ್ಷಿತ ಗೆಲುವು ಸಾಧಿಸಿಲ್ಲ, ಇರಾನ್ ಮುಂಚೂಣಿಯಲ್ಲಿದೆ ಎನ್ನುವ ಅಭಿಪ್ರಾಯ ಹಲವರಲ್ಲಿ ಇದೆ. ಇದನ್ನು ಇಸ್ರೇಲ್‌ನ ಸೋಲು ಎಂದು ಭಾವಿಸಿದ್ದಾರೆ. ಸುಮಾರು 92% ಇಸ್ರೇಲಿಗಳು ಇರಾನ್ - ಇಸ್ರೇಲ್ ನಡುವೆ ಈಗೆ ನಡೆದ ಯುದ್ಧದಲ್ಲಿ ಇರಾನ್ ಗೆದ್ದಿದೆ ಅಥವಾ ಲಾಭ ಗಳಿಸಿದೆ ಎಂದು ಹೇಳುತ್ತಾರೆ ಎಂದು ಆಗಮ್ ಲ್ಯಾಬ್ಸ್ ಜೂನ್‌ನಲ್ಲಿ ನಡೆಸಿದ ಸಮೀಕ್ಷೆ ತಿಳಿಸಿದೆ.
ಐಸೆನ್‌ಕೋಟ್ ಅವರು ಜನರಿಗೆ ಹತ್ತಿರವಾಗುತ್ತಿದ್ದರೆ, ಬೆಂಜಮಿನ್ ನೆತನ್ಯಾಹು ಜನರಿಂದ ದೂರವಾಗುವ ಆತಂಕ ಎದುರಿಸುತ್ತಿದ್ದಾರೆ. ಅಕ್ಟೋಬರ್ 7, 2023 ರಂದು ನಡೆದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ ನಂತರ, ಜನರಲ್ ಅವರು ನೆತನ್ಯಾಹು ಅವರ ಒಕ್ಕೂಟಕ್ಕೆ ಸೇರಿದರು. ಆದರೆ ಯುದ್ಧವನ್ನು ಪ್ರಧಾನಿ ನಿರ್ವಹಿಸಿದ್ದನ್ನು ಪ್ರತಿಭಟಿಸಿ, ಎಂಟು ತಿಂಗಳ ನಂತರ ಅವರು ರಾಜೀನಾಮೆ ನೀಡಿದರು. ಅವರು ಹೋರಾಟವನ್ನು ಮುಂದುವರಿಸಿದ್ದಾರೆ ಮತ್ತು ದಾಳಿಯಲ್ಲಿ ಸೆರೆಹಿಡಿಯಲಾದ ಒತ್ತೆಯಾಳುಗಳನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಐಸೆನ್‌ಕೋಟ್ ಅವರ ಕಿರಿಯ ಮಗ 25 ವರ್ಷ ವಯಸ್ಸಿನ ಗಾಲ್, ಯುದ್ಧದ ಆರಂಭಿಕ ತಿಂಗಳುಗಳಲ್ಲಿ ಗಾಜಾದಲ್ಲಿ ಕೊಲ್ಲಲ್ಪಟ್ಟರು. ಸಾಮಾನ್ಯವಾಗಿ ಶಾಂತವಾಗಿದ್ದ ಜನರಲ್ ಅಂತ್ಯಕ್ರಿಯೆಯಲ್ಲಿ ತನ್ನ ಮಗನನ್ನು ಶ್ಲಾಘಿಸುತ್ತಾ ಕಣ್ಣೀರು ಹಾಕಿದರು. ಐಸೆನ್‌ಕೋಟ್ ಅವರ ಮಗನ ಸಾವು ಇಸ್ರೇಲ್‌ನಲ್ಲಿರುವ ಕಡ್ಡಾಯ ಮಿಲಿಟರಿ ಸೇವೆ ಅಥವಾ ಮೀಸಲು ಕರ್ತವ್ಯವನ್ನು ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟ ಯುವ ಸೈನಿಕರ ಪ್ರತಿಧ್ವನಿ ಎಂದೇ ಪರಿಗಣಿಸಲಾಗಿದೆ.
ಯಹೂದಿ ಮೊರೊಕ್ಕೊ ಮೂಲದ ಐಸೆನ್‌ಕೋಟ್, ಇಸ್ರೇಲ್‌ನ ಹೊರವಲಯದಲ್ಲಿರುವ ಕಾರ್ಮಿಕ ವರ್ಗದ ನಗರವಾದ ಐಲಾಟ್‌ನಲ್ಲಿ ಬಾಲ್ಯವನ್ನು ಕಳೆದರು. ಅವರ ದೀರ್ಘ ಮಿಲಿಟರಿ ವೃತ್ತಿಜೀವನವು ಗೋಲಾನಿ ಪದಾತಿ ದಳದಲ್ಲಿ ಸೈನಿಕನಾಗಿ ಪ್ರಾರಂಭವಾಗಿತ್ತು. ನಂತರ ಇಸ್ರೇಲ್ ಸೇನೆಯ ಅತ್ಯುನ್ನತ ಹುದ್ದೆಯಾದ ಮುಖ್ಯಸ್ಥರ ಸ್ಥಾನರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಬೆಂಜಮಿನ್ ನೆತನ್ಯಾಹು ಅವರು, ಸುಶಿಕ್ಷಿತರ ಕುಟುಂಬದಲ್ಲಿ ಜನಿಸಿದರು. ತಮ್ಮ ಯೌವನವನ್ನು ಅವರು ಬಹುತೇಕ ಅಮೆರಿಕದಲ್ಲಿಯೇ ಕಳೆದಿದ್ದಾರೆ. ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಶಿಕ್ಷಣ ಪಡೆದಿದ್ದಾರೆ. ಯುದ್ಧದ ಸಂದರ್ಭದಲ್ಲಿ ನೆತನ್ಯಾಹು ಅವರ ಪುತ್ರರು ಮೀಸಲು ಪಡೆಗಳಲ್ಲಿ ಸೇವೆ ಸಲ್ಲಿಸಿಲ್ಲ. ಅಲ್ಲದೆ ಅವರ ಹಿರಿಯ ಪುತ್ರ ಮಿಯಾಮಿಯಲ್ಲಿ ಐಷಾರಾಮಿ ಜೀವನಶೈಲಿ ನಡೆಸುತ್ತಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಅವರ ಪುತ್ರ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯ ಪ್ರಕಾರ, 120 ಸ್ಥಾನಗಳ ಇಸ್ರೇಲ್ ಸಂಸತ್ತಿನಲ್ಲಿ ನೆಸ್ಸೆಟ್‌ನಲ್ಲಿ ನೆತನ್ಯಾಹು ಮತ್ತು ಐಸೆನ್‌ಕೋಟ್ ತಲಾ 23 ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಅಂದಾಜಿಸಲಾಗಿದೆ. ನೆತನ್ಯಾಹು ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮತ್ತೊಂದು ವಿರೋಧ ಪಕ್ಷದ ನಾಯಕ ನಫ್ತಾಲಿ ಬೆನೆಟ್ 16 ಸ್ಥಾನಗಳಲ್ಲಿ ಗೆಲ್ಲಲ್ಲಿದ್ದಾರೆ ಎಂದು ಸಮೀಕ್ಷೆಯು ತೋರಿಸಿದೆ. ಪ್ರಧಾನಿಯಾಗಲು ಯಾರು ಹೆಚ್ಚು ಸೂಕ್ತರು ಎಂಬ ಪ್ರಶ್ನೆಗೆ, ಐಸೆನ್‌ಕೋಟ್ 41% ಮತ್ತು ನೆತನ್ಯಾಹು 40% ಪಡೆದಿದ್ದಾರೆ.
ಗಾಜಾದ ಭವಿಷ್ಯ ಸೇರಿದಂತೆ ಹಲವಾರು ರಾಷ್ಟ್ರೀಯ-ಭದ್ರತಾ ವಿಷಯಗಳ ಬಗ್ಗೆ ಐಸೆನ್‌ಕೋಟ್ ಇನ್ನೂ ಸ್ಪಷ್ಟ ನಿಲುವುಗಳನ್ನು ವ್ಯಕ್ತಪಡಿಸಿಲ್ಲ. ಆದರೆ ಅವರು ಮಾಜಿ ಜನರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಉಗ್ರಗಾಮಿ ಸಂಘಟನೆಗಳನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ನಗರ ಪ್ರದೇಶಗಳ ಮೇಲೆ ಭಾರೀ ಮಿಲಿಟರಿ ಬಲವನ್ನು ಬಳಸುವ ಇಸ್ರೇಲ್‌ನ ಕಾರ್ಯತಂತ್ರದ ಭಾಗವಾಗಿಯೂ ಇವರು ಗುರುತಿಸಿಕೊಂಡಿದ್ದರು. ಈ ತಂತ್ರವನ್ನು 2006ರ ಲೆಬನಾನ್ ಯುದ್ಧದ ವೇಳೆ ಬಳಸಲಾಗಿತ್ತು.
ಸಮೀಕ್ಷೆಗಳು ವಿಶ್ವಾದ್ಯಂತ ಇಸ್ರೇಲ್‌ಗೆ ಬೆಂಬಲ ಕ್ಷೀಣಿಸುತ್ತಿದೆ ಎಂದು ಸಮೀಕ್ಷೆಗಳು ತೋರಿಸುತ್ತವೆ. ಫೆಬ್ರವರಿಯಲ್ಲಿ ನಡೆದ ಗ್ಯಾಲಪ್ ಸಮೀಕ್ಷೆಯಲ್ಲಿ, ಮೊದಲ ಬಾರಿಗೆ ಹೆಚ್ಚಿನ ಅಮೆರಿಕನ್ನರು ಇಸ್ರೇಲಿಗಳಿಗಿಂತ ಪ್ಯಾಲೆಸ್ಟೀನಿಯಾದವರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ ಎಂದು ಕಂಡುಬಂದಿದೆ - ಈ ಬದಲಾವಣೆಯು ಕೆಲವು ಇಸ್ರೇಲಿ ಮತದಾರರಲ್ಲಿ ನಿರೀಕ್ಷೆ ಮತದಾನಕ್ಕಿಂತಲೂ ಭಿನ್ನವಾಗಿ ಇರಬಹುದು ಎಂದೂ ಹೇಳಲಾಗಿದೆ.
ಆದಾಗ್ಯೂ, ನೆತನ್ಯಾಹು ಒಬ್ಬ ಅನುಭವಿ ರಾಜಕೀಯ ನಾಯಕರಾಗಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರು ಅನಿಕ್ಷೀತ ಸವಾಲುಗಳನ್ನು ಈ ಹಿಂದೆಯು ಎದುರಿಸಿರುವುದು ಇದೆ. ಮತ್ತೊಂದೆಡೆ, ಐಸೆನ್‌ಕೋಟ್ ಅವರು ಈಚೆಗೆ ಅಂದರೆ 2022ರಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. ಬೆಂಜಮಿನ್ ನೆತನ್ಯಾಹು ಅವರಿಗೆ ಹೋಲಿಕೆ ಮಾಡಿದರೆ ತುಂಬಾ ಹೊಸಬರು.
ಇತ್ತೀಚಿನ ಸಮೀಕ್ಷೆಗಳು ನೆತನ್ಯಾಹು ಆಡಳಿತ ಬಹುಮತವನ್ನು ಪಡೆಯಲು ವಿಫಲರಾಗಿದ್ದಾರೆ ಎಂದೇ ಹೇಳುತ್ತಿವೆ. ಆದರೆ ಅವರು ಅಧಿಕಾರದಲ್ಲಿ ಉಳಿಯಲು ಸಂಪೂರ್ಣ ಗೆಲುವು ಅಗತ್ಯವಿಲ್ಲ ಎನ್ನುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಇನ್ನು ಇಸ್ರೇಲ್‌ನ ರಾಜಕೀಯ ವ್ಯವಸ್ಥೆಯು ಅನೇಕ ಪಕ್ಷಗಳ ವಿಭಜನೆಯಾಗಿದೆ. ವಿವಿಧ ಪಕ್ಷಗಳಿಂದ ಹಲವು ನಾಯಕರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. 2019ರಿಂದ 2022ರ ನಡುವೆ ಇಸ್ರೇಲ್‌ನಲ್ಲಿ ಹಲವು ಬಾರಿ ಚುನಾವಣೆಗಳು ನಡೆದಿವೆ. ಇದಕ್ಕೆ ಮುಖ್ಯ ಕಾರಣ ಬೆಂಜಮಿನ್ ನೆತನ್ಯಾಹು ಅವರ ಪರ ಅಥವಾ ವಿರೋಧಿ ಬಣವಾಗಲಿ ಸರ್ಕಾರ ರಚಿಸಲು ಅಗತ್ಯವಾದ ಬಹುಮತ ಪಡೆಯದೆ ಇರುವುದಕ್ಕೆ ಪದೇ ಪದೇ ಚುನಾವಣೆ ನಡೆದಿದೆ. ಇಸ್ರೇಲ್‌ನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿಯೇ ಐದು ಬಾರಿ ಚುನಾವಣೆ ನಡೆದಿವೆ.
Benjamin Netanyahu: ದೇವೇಗೌಡ ತಂತ್ರ: ಪ್ರಯೋಗಿಸಿದ ನೆತನ್ಯಾಹು
ಇನ್ನು ಬೆಂಜಮಿನ್ ನೆತನ್ಯಾಹು ಅವರು ಎಚ್.ಡಿ ದೇವೇಗೌಡ ಅವರ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ನೆತನ್ಯಾಹು ಅವರ ತಂತ್ರವು ಚುನಾವಣೆಯಲ್ಲಿ ಗೆಲ್ಲುವುದಲ್ಲ, ಬದಲಾಗಿ ಇನ್ನೊಂದು ಕಡೆ ಬಹುಮತವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಎಂದು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕ ಗಾಯಿಲ್ ತಲ್ಶೀರ್ ಹೇಳಿದ್ದಾರೆ.
ದೇವೇಗೌಡರ ಜೆಡಿಎಸ್‌ನಂತೆ ಇದರ ಏಕೈಕ ಗುರಿ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆಯುವುದನ್ನು ತಡೆಯುವುದು, ಇದು ಕಿಂಗ್ ಮೇಕರ್ ಆಗುವುದು ಮತ್ತು ಹಲವಾರು ಸಂದರ್ಭಗಳಲ್ಲಿ ಕಡಿಮೆ ಸ್ಥಾನಗಳನ್ನು ಗೆದ್ದರೂ ಮುಖ್ಯಮಂತ್ರಿ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದೇ ಹೇಳಲಾಗುತ್ತಿದೆ.












Click it and Unblock the Notifications