ಶ್ರೇಯಾಂಕಾ ಪಾಟೀಲ್ ಗೆಲುವಿನ ಗುಟ್ಟು ಇಲ್ಲಿದೆ!

ಶ್ರೇಯಾಂಕಾ ಪಾಟೀಲ್ ಈಗ ಮಹಿಳಾ ಕ್ರಿಕೆಟ್ ಜಗತ್ತಿಗೆ ಹೊಸ ಹೆಸರನ್ನು ತಂದುಕೊಟ್ಟು, ಕೋಟ್ಯಂತರ ಭಾರತೀಯರಿಗೆ ಸ್ವಂತ ತಂಗಿಯಂತೆ ಆಗಿದ್ದಾರೆ. ಅದ್ರಲ್ಲೂ ಆರ್‌ಸಿಬಿ ಫ್ಯಾನ್ಸ್ ಪಾಲಿಗೆ ಇದೇ ಶ್ರೇಯಾಂಕಾ ಪಾಟೀಲ್ 'ಲೆಜೆಂಡ್' ಎನಿಸಿಕೊಳ್ಳುತ್ತಿದ್ದಾರೆ. ಹೀಗೆ ಆರ್‌ಸಿಬಿ ಆಟಗಾರ್ತಿ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶ್ರೇಯಾಂಕಾ ಪಾಟೀಲ್ ಗೆಲುವಿನ ಗುಟ್ಟು ಏನು ಗೊತ್ತಾ?

ಅಷ್ಟಕ್ಕೂ ಶ್ರೇಯಾಂಕಾ ಪಾಟೀಲ್ ಅವರಿಗೆ ಕನ್ನಡಿಗರು 'ಟಗರು ಪುಟ್ಟಿ' ಅನ್ನೋ ಮುದ್ದು ಮುದ್ದಾದ ಹೆಸರು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಹಿಡಿದು, ಎಲ್ಲೆ ನೋಡಿದ್ರು ಶ್ರೇಯಾಂಕಾ ಪಾಟೀಲ್ ಅವರ ಹೆಸರು ರಾರಾಜಿಸುತ್ತಿದೆ. ಹೀಗೆ ಶ್ರೇಯಾಂಕಾ ಎಲ್ಲರಿಗು ಈಗ ಫೆವರಿಟ್ ಆಗಿದ್ದಾರೆ. ಹಾಗಾದರೆ ಶ್ರೇಯಾಂಕಾ ಪಾಟೀಲ್ ಅವರ ಗೆಲುವಿನ ಗುಟ್ಟು ಏನು? 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರ ಅಭಿಮಾನಿಗಳಿಗೆ ಸರ್ಪ್ರೈಸಿಂಗ್ ಮಾಹಿತಿ, ಈ ಸ್ಟೋರಿಯಲ್ಲಿ ಇದೆ, ಬನ್ನಿ ಮುಂದೆ ಓದಿ ತಿಳಿಯೋಣ.

Shreyanka Patil s Secret Way To The Success In Cricket

ಶ್ರೇಯಾಂಕಾ ಪಾಟೀಲ್ ಸೀಕ್ರೆಟ್!

ಹೌದು, ಕ್ರಿಕೆಟ್ ಜಗತ್ತಿನಲ್ಲಿ ಅತಿ ಚಿಕ್ಕ ವಯಸ್ಸಿಗೆ ಶ್ರೇಯಾಂಕಾ ಪಾಟೀಲ್ ಅವರು ಇಷ್ಟು ದೊಡ್ಡ ಹೆಸರು ಮಾಡಲು ಕಾರಣವೇ ಅವರ ವರ್ಕೌಟ್. ಜಿಮ್‌ನಲ್ಲಿ ಬೆವರು ಹರಿಸುತ್ತಾ, ತಮ್ಮ ಗುರಿ ತಲುಪಲು ಗಂಟೆಗಟ್ಟಲೇ ಕಷ್ಟಪಡುವ ಶ್ರೇಯಾಂಕಾ ಪಾಟೀಲ್ ಯುವ ಜನರಿಗೆ ಮಾದರಿ ಆಗುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್ ಅವರು ತಮ್ಮ ಸೋಷಿಯಲ್ ಮೀಡಿಯಾದ ಅಕೌಂಟ್‌ಗಳಲ್ಲು ಹೀಗೆ ತಮ್ಮ ವರ್ಕೌಟ್ ವಿಡಿಯೋಗಳನ್ನ ಹಾಕಿಕೊಂಡು, ತಾವು ಎಷ್ಟು ಕಷ್ಟಪಡುತ್ತಿದ್ದಾರೆ ಅನ್ನೋದನ್ನ ಕೂಡ ತಿಳಿಸಿದ್ದಾರೆ. ಇಷ್ಟೆಲ್ಲಾ ಶ್ರದ್ಧೆ ಮತ್ತು ಶಿಸ್ತು ಇದ್ದ ಕಾರಣಕ್ಕೆ ಶ್ರೇಯಾಂಕಾ ಪಾಟೀಲ್ ಇಷ್ಟು ದೊಡ್ಡ ಸಾಧನೆಯನ್ನ ಚಿಕ್ಕ ವಯಸ್ಸಿಗೆ ಮಾಡಿ, ಜಗತ್ತಿಗೆ ಮಾದರಿ ಆಗಿದ್ದಾರೆ ಅಂತಿದ್ದಾರೆ ಫ್ಯಾನ್ಸ್.


ಶ್ರೇಯಾಂಕಾ ಕೋಟಿ.. ಕೋಟಿ..

ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಆದ್ರೂ ಅವರು ಮಾಡಿರುವ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ತಂಡಕ್ಕೂ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ. ಚಿಕ್ಕ ವಯಸ್ಸಿಗೆ ಅವರು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳ ಗಳಿಸಿದ್ದಾರೆ, ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್. ಹಾಗಾದ್ರೆ ಇದೀಗ ಶ್ರೇಯಾಂಕಾ ಪಾಟೀಲ್ ಅವರ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ ಆಗಿರಬಹುದು? ಮಾಹಿತಿ ಇಲ್ಲಿದೆ ಮುಂದೆ ಓದಿ.

ಈಗಿರುವ ಮಾಹಿತಿಗಳ ಪ್ರಕಾರ, ಆರ್‌ಸಿಬಿ ಡಬ್ಲ್ಯೂಪಿಎಲ್ (WPL Cup) ಗೆಲ್ಲುವ ಮೊದಲು ಶ್ರೇಯಾಂಕಾ ಪಾಟೀಲ್ ಅವರ ಒಟ್ಟು ಆಸ್ತಿ 35 ಲಕ್ಷ ರೂಪಾಯಿಗೂ ಹೆಚ್ಚಾಗಿತ್ತು ಎಂಬ ಮಾಹಿತಿ ಇದೆ. ಆದರೆ ಇದೀಗ ಆರ್‌ಸಿಬಿ ಡಬ್ಲ್ಯೂಪಿಎಲ್ (WPL Cup) ಗೆದ್ದ ನಂತರದಲ್ಲಿ, ಒಟ್ಟು 6 ಕೋಟಿ ರೂಪಾಯಿ ಬಹುಮಾನದ ಮೊತ್ತದಲ್ಲಿ ಶ್ರೇಯಾಂಕಾ ಪಾಟೀಲ್‌ಗೆ ಕೂಡ ದೊಡ್ಡ ಶೇರ್ ಸಿಕ್ಕಿದೆ. ಈ ಮೂಲಕ ಶ್ರೇಯಾಂಕಾ ಪಾಟೀಲ್ ಅವರ ಸ್ವಂತ ಆಸ್ತಿಯೇ ಈಗ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ತಮ್ಮ ಆಸ್ತಿಯ ಬಗ್ಗೆ ಶ್ರೇಯಾಂಕಾ ಪಾಟೀಲ್ ಅಧಿಕೃತ ಹೇಳಿಕೆ ನೀಡಿಲ್ಲ.

ಅಭಿಮಾನಿಗಳಿಂದ ಭರ್ಜರಿ ಬೆಂಬಲ

ಆರ್‌ಸಿಬಿ ತಂಡ ಕಪ್ ಗೆಲ್ಲಬೇಕು & ಆರ್‌ಸಿಬಿ ತಂಡಕ್ಕೆ ಕಪ್ ಬರಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆಯಾಗಿದೆ. ಆದ್ರೂ ಈ ಆಸೆಯು ಈಡೇರುತ್ತಿಲ್ಲ. ಆರ್‌ಸಿಬಿ ತಂಡ ಕಪ್‌ ಗೆಲ್ಲುತ್ತಿಲ್ಲ. ಇತ್ತೀಚೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಟೀಂ ವಿರುದ್ಧ ಆರ್‌ಸಿಬಿ ತಂಡ ರೋಚಕ ಸೋಲು ಕಂಡಿದೆ. ಈ ಮೂಲಕ ಸತತ 6 ಸೋಲು ಕಂಡು ಆರ್‌ಸಿಬಿ ಕಂಗಾಲಾಗಿ ಕುಳಿತಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುತ್ತಾ? ಎಂಬ ಡೌಟ್ ಕೂಡ ಕಾಡುತ್ತಿದೆ. ಅಭಿಮಾನಿಗಳು ಮಾತ್ರ ನಮ್ಮ ಆರ್‌ಸಿಬಿ ನಮ್ಮ ಹೆಮ್ಮೆ ಅನ್ನೋ ಮಾತನ್ನು ಹೇಳುತ್ತಾ ಮತ್ತೊಮ್ಮೆ ಆರ್‌ಸಿಬಿ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+