IPL 2024: ಅಂಪೈರ್‌ ಜೊತೆಗಿನ ವಾಗ್ವಾದ ವಿರಾಟ್‌ಗೆ ದುಬಾರಿ: ಬಿಸಿಸಿಐ ದಂಡ

ಭಾನುವಾರ ಈಡನ್‌ ಗಾರ್ಡನ್‌ ಅಂಗಳದಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ನಡುವೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್‌ ಒಂದು ರನ್‌ಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜಯ ಸಾಧಿಸಿ, ಪ್ಲೇ ಆಫ್‌ ಪ್ರವೇಶಿಸುವ ಕನಸನ್ನು ಆರ್‌ಸಿಬಿ ಕಾಣುತ್ತಿತ್ತು. ಆದರೆ, ಸೋಲು ಆರ್‌ಸಿಬಿ ಕನಸಿಗೆ ಪೆಟ್ಟು ನೀಡಿತ್ತು. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೂ, ಈ ಪಂದ್ಯದಲ್ಲಿ ವಿರಾಟ್‌ ಆಗಿರುವ ರೀತಿ ಇನ್ನು ಚರ್ಚೆಗೆ ಗ್ರಾಸವಾಗಿದೆ.

ವಿರಾಟ್ ಕೊಹ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ವಿವಾದತ್ಮಕ ಎಸೆತದಲ್ಲಿ ಔಟ್ ಆದರು. ಹರ್ಷಿತ್ ರಾಣಾ ಎಸೆತದಲ್ಲಿ ಡಿಫೆನ್ಸಿವ್ ಶಾಟ್ ಆಡಲು ಹೋಗಿ ಅವರಿಗೆ ಕ್ಯಾಚ್‌ ನೀಡಿ ಔಟ್ ಆದರು. ಹರ್ಷಿತ್ ರಾಣಾ ಎಸೆದ ಚೆಂಡು ಸೊಂಟಕ್ಕಿಂತ ಮೇಲಿತ್ತೊ ಇಲ್ಲವೋ ಎಂಬುದೇ ದೊಡ್ಡ ಚರ್ಚೆಯ ವಿಷಯವಾಗಿದೆ. ಇದರ ಬೆನ್ನಲ್ಲೆ ಆರ್‌ಸಿಬಿ ಸ್ಟಾರ್ ಪ್ಲೇಯರ್‌ ವಿರಾಟ್‌ ಕೊಹ್ಲಿಗೆ ಬಿಸಿಸಿಐ ಬರೆ ಎಳೆದಿದೆ.

IPL 2024 Virat Kohli Penalized 50 of Match Fees for Breaching Code of Conduct

ವಿರಾಟ್ ಕೊಹ್ಲಿ ನೋಬಾಲ್ ವಿವಾದದಿಂದಲೂ ಈ ಪಂದ್ಯ ಸುದ್ದಿಯಾಗಿದೆ. ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ಕಾರಣ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ಇದರಿಂದಾಗಿ ವಿರಾಟ್ ಕೊಹ್ಲಿ ಪಂದ್ಯ ಶುಲ್ಕದ ಶೇ.50ರಷ್ಟು ದಂಡ ವಿಧಿಸಿದ್ದಾರೆ.

ಆಗಿದ್ದೇನು?

ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 222 ರನ್‌ಗಳ ಬೃಹತ್‌ ಗುರಿಯನ್ನು ಆರ್‌ಸಿಬಿ ತಂಡಕ್ಕೆ ನೀಡಿತ್ತು. ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿ ಪವರ್‌ ಫುಲ್‌ ಆರಂಭವನ್ನೇ ಮಾಡಿತು. ಇನ್ನಿಂಗ್ಸ್‌ ಮೂರನೇ ಓವರ್ ಮಾಡಲು ಬಂದ ಹರ್ಷಿತ್ ರಾಣಾ ಫುಲ್‌ ಟಾಸ್‌ ಬೌಲಿಂಗ್ ಮಾಡಿದರು. ಈ ಚೆಂಡು ಸೊಂಟಕ್ಕಿಂತ ಮೇಲಿದೆ ಎಂದು ಭಾವಿಸಿ ವಿರಾಟ್‌ ಬ್ಯಾಟನ್ನು ಮುಂದೆ ಇಟ್ಟರು. ಆದರೆ ಚೆಂಡು ನೋಬಾಲ್‌ ಆಗಿರಲಿಲ್ಲ ಎಂದು ಹಾಕ್ ಐ ವ್ಯವಸ್ಥೆಯಲ್ಲಿ ತಿಳಿದು ಬಂದಿತು. ಕೊಹ್ಲಿ ಕ್ರೀಸ್‌ನಲ್ಲಿ ನಿಂತಿದ್ದರೆ, ಚೆಂಡು ಅವರ ಸೊಂಟದ ಕೆಳಗೆ ಇರುತ್ತಿತ್ತುಎಂದು ಹಾಕ್‌ ಐ ಕಂಡು ಹಿಡಿದಿದೆ. ಈ ನಿರ್ಧಾರದಿಂದಾಗಿ ಕೊಹ್ಲಿ ಮೈದಾನದಲ್ಲಿರುವ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು.

IPL 2024 Virat Kohli Penalized 50 of Match Fees for Breaching Code of Conduct

ವಿರಾಟ್ ಕೊಹ್ಲಿ ಕೆಲ ಕಾಲ ಅಂಪೈರ್ ಜೊತೆ ವಾದ ಮಾಡಿದರೂ ಇನ್ನೂ ಕೋಪ ತಣ್ಣಗೆ ಆಗಲಿಲ್ಲ. ಡ್ರೆಸ್ಸಿಂಗ್ ರೂಮ್ ತಲುಪಿದ ಕೊಹ್ಲಿ ತಮ್ಮ ಬ್ಯಾಟ್ ಅನ್ನು ನೆಲದ ಮೇಲೆ ಎಸೆದರು. ಇದಾದ ಬಳಿಕ ಡಸ್ಟ್‌ಬಿನ್‌ಗೆ ಬಲವಾಗಿ ಗುದ್ದುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮ್ಯಾಚ್ ರೆಫರಿ ಕೊಹ್ಲಿ ಅವರ ನಡೆಗೆ ಬರೆ ಎಳೆದಿದ್ದಾರೆ. ಕೊಹ್ಲಿ ಸಹ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

IPL 2024 Virat Kohli Penalized 50 of Match Fees for Breaching Code of Conduct

ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟ್ರೆಂಡ್ ಆಗಲು ಪ್ರಾರಂಭಿಸಿತು. ಹಿಂದಿ ಕಾಮೆಂಟರಿ ವೇಳೆ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದನ್ನು ನೋ ಬಾಲ್ ಎಂದು ಕರೆಯಬೇಕಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ನಿಯಮದ ಬಗ್ಗೆ ಆಳವಾದ ಚರ್ಚೆಯ ಅಗತ್ಯವಿದೆ ಎಂದೂ ಸಿದ್ದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+