WWE ಕುಸ್ತಿ ಅಖಾಡದಲ್ಲಿ ಸಂಚಲನ, ರಾಕ್ ಫೈಟಿಂಗ್ ಮಾಡಲು ವಾಪಸ್!
ಕುಸ್ತಿ ಎಂಬ ಕ್ರೀಡೆಗೆ ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ. ಜಗತ್ತಿನ ಪ್ರತಿಯೊಂದು ದೇಶದಲ್ಲೂ ಅವರದ್ದೇ ಆದ ಕುಸ್ತಿ ಕ್ರೀಡೆಗಳು ಇವೆ. ಅದೇ ರೀತಿ ಈ ಆಧುನಿಕ ಜಗತ್ತಿನಲ್ಲಿ ದೊಡ್ಡಣ್ಣ ಅಮೆರಿಕದಲ್ಲಿ ಡಬ್ಲ್ಯೂಡಬ್ಲ್ಯೂಇ (WWE) ಮಾದರಿಯ ಕುಸ್ತಿ, ಭಾರಿ ಜನಪ್ರಿಯತೆ ಗಳಿಸಿದೆ. ಹೀಗಿದ್ದಾಗ WWE ಕ್ರೀಡೆಯಲ್ಲಿ 'ದಿ ರಾಕ್' ಎಂಬ ಆಸಾಮಿಯ ಹೆಸರು ಕೇಳೆ ಕೇಳಿರುತ್ತೀರಿ. ಈ ವ್ಯಕ್ತಿ ಕುಸ್ತಿ ಬಿಟ್ಟು ಸಿನಿಮಾ ಪ್ರಪಂಚಕ್ಕೆ ಹೋದ ನಂತರ ಕೂಡ, ಮತ್ತೊಮ್ಮೆ WWE ಅಖಾಡದಲ್ಲಿ ಕುಸ್ತಿ ಮಾಡಲು ವಾಪಸ್ ಬರುತ್ತಿದ್ದಾರೆ.
1980ರಲ್ಲಿ ಶುರುವಾದ WWE ಎಂಬ ವಿಶಿಷ್ಟವಾದ ಕುಸ್ತಿ, ಕಾಲಕ್ಕೆ ತಕ್ಕಂತೆ ತನ್ನ ಹೆಸರು ಕೂಡ ಬದಲಾವಣೆ ಮಾಡಿಕೊಂಡು ಬಂದಿದೆ. ಆರಂಭದಲ್ಲಿ ಟೈಟಾನ್ ಸ್ಪೋರ್ಟ್ಸ್ (Titan Sports) ಹೆಸರಲ್ಲಿ ಶುರುವಾಗಿದ್ದ WWE, 1980 ರಿಂದ 1999ರ ತನಕ ಇದೇ ಹೆಸರಲ್ಲಿ ಇತ್ತು. ಆದರೆ, 1999 ರಲ್ಲಿ ತನ್ನ ಹೆಸರು ಬದಲಾವಣೆ ಮಾಡಿಕೊಂಡು WWF ಆಗಿತ್ತು ಆ ನಂತರ 2002ರಿಂದ ತನ್ನ ಹೆಸರನ್ನು WWE ಎಂದು ಬದಲಾವಣೆ ಮಾಡಿಕೊಂಡಿತು. ಹೀಗೆ 1990-2000ರ ನಡುವೆ 'ದಿ ರಾಕ್' ಎಂಬ ಹೆಸರಲ್ಲಿ ಅಖಾಡಕ್ಕೆ ಬಂದು ಸದ್ದು ಮಾಡಿದ್ದ ಡ್ವೇನ್ ಜಾನ್ಸನ್ ಅವರು ಕುಸ್ತಿ ಬಿಟ್ಟು ಸಿನಿಮಾಗೆ ಹೋಗಿದ್ದರು. ಆದರೆ ಇದೀಗ ಮತ್ತೆ 'ದಿ ರಾಕ್' ವಾಪಸ್ ಬರ್ತಾ ಇದ್ದಾರಂತೆ. ವಿಡಿಯೋ ನೋಡಲು ಮುಂದೆ ಓದಿ.

'ದಿ ರಾಕ್' ಕುಸ್ತಿ ಅಖಾಡಕ್ಕೆ ವಾಪಸ್!
ಇತ್ತೀಚೆಗಷ್ಟೇ ದಿ ರಾಕ್ ಅವರು WWE ಅಖಾಡದಲ್ಲಿ ರೋಮನ್ ರೇನ್ಸ್ ಜೊತೆಗೆ ಸೇರಿ ಕೋಡಿ ರೋಡ್ಸ್‌ನ ಸೋಲಿಸಿದ್ದರು. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ರೆಸಲ್‌ಮೇನಿಯಾ 41ರಲ್ಲಿ ಅಂದ್ರೆ 2024ರ ಅಂತ್ಯಕ್ಕೆ ಮತ್ತೊಮ್ಮೆ 'ದಿ ರಾಕ್' ರೀ ಎಂಟ್ರಿ ಕೊಡುವುದು ಪಕ್ಕಾ ಎಂಬ ಮಾಹಿತಿ ಹೊರಬೀಳುತ್ತಿದೆ. ಇತ್ತೀವೆಗೆ 'ಥ್ರಿಪಲ್ ಎಚ್' ನೀಡಿದ್ದ ಹೇಳಿಕೆಯಿಂದ ಈ ರೀತಿಯ ಸಂಚಲನ ಸೃಷ್ಟಿಯಾಗಿದೆ. ಅಲ್ಲದೆ ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಇದೀಗ ಸಿನಿಮಾ ರಂಗ ಪೂರ್ತಿ ಬಿಟ್ಟು, ಮತ್ತೊಮ್ಮೆ ಕುಸ್ತಿ ಅಖಾಡದಲ್ಲಿ ಮಿಂಚುತ್ತಾರಾ? ಎನ್ನುವ ಬಗ್ಗೆ ಕೂಡ ಚರ್ಚೆ ಶುರುವಾಗಿದೆ.
Cody Rhodes vs The Rock ending spoilerpic.twitter.com/i7XGHreC08
— Deadshot (@RKODeadshot) April 14, 2024
ಒಟ್ನಲ್ಲಿ 2001 ರಲ್ಲಿ ಸಿನಿಮಾ ಅಖಾಡ ಪ್ರವೇಶ ಮಾಡಿದ್ದ ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಅವರು, 50ಕ್ಕೂ ಹೆಚ್ಚು ಹಾಲಿವುಡ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹೀಗೆ ಹಾಲಿವುಡ್ ಅಂಗಳದಲ್ಲಿ ದಿ ರಾಕ್ ಅಲಿಯಾಸ್ ಡ್ವೇನ್ ಜಾನ್ಸನ್ ಹವಾ ಬಲು ಜೋರಿದೆ. ಆಗಾಗ WWE ಅಖಾಡಕ್ಕೆ ಸರ್ಪ್ರೈಸ್ ಎಂಟ್ರಿ ಕೊಡುವ 'ದಿ ರಾಕ್' ಅವರು ಅಭಿಮಾನಿಗಳನ್ನ ರಂಜಿಸುತ್ತಾರೆ. 2024 ಅಂತ್ಯಕ್ಕೆ ಅಥವಾ 2025ರ ಆರಂಭದಲ್ಲಿ ಮತ್ತೊಮ್ಮೆ ದಿ ರಾಕ್ ಅವರ ಕುಸ್ತಿಯನ್ನು ಅಭಿಮಾನಿಗಳು WWE ಅಖಾಡದಲ್ಲಿ ನೋಡಬಹುದು ಎನ್ನಲಾಗುತ್ತಿದ್ದು. ಇದೇ ಮಾತು ಸತ್ಯವಾಗಲಿ ಅಂತಿದ್ದಾರೆ ದಿ ರಾಕ್ ಅಭಿಮಾನಿಗಳು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications