SRH vs RCB: ಟಾಸ್ ಗೆದ್ದರೆ ಆರ್‌ಸಿಬಿ ಫೀಲ್ಡಿಂಗ್ ಮಾತ್ರ ಆಯ್ಕೆ ಮಾಡ ಬೇಡಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೈ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಹತ್ತಿರವಾಗುವ ಬಯಕೆಯನ್ನು ಎಸ್‌ಆರ್‌ಎಚ್ ಮಾಡುತ್ತಿದೆ. ಬೆಂಗಳೂರು ತನ್ನ ಸೋಲಿನ ಸರಪಳಿಯನ್ನು ಕೊನೆಗಳಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ಎಸ್‌ಆರ್‌ಎಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲಾಢ್ಯವಾಗಿದೆ. ಪವರ್ ಪ್ಲೇನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಎಸ್‌ಆರ್‌ಎಚ್ ಬ್ಯಾಟರ್‌ಗಳು ಎದುರಾಳಿ ಬೌಲರ್‌ಗಳನ್ನು ಈ ಐಪಿಎಲ್‌ನಲ್ಲಿ ಕಾಡಿದ್ದಾರೆ. ಹೀಗಾಗೆ ದಾಖಲೆಗಳ ಮುಂದೆ ಈ ಬಾರಿ ಎಸ್‌ಆರ್‌ಎಚ್ ಎಂದೇ ಬರೆಯಲಾಗುತ್ತಿದೆ.

SRH ಅಪ್‌ಡೇಟ್ ವರ್ಷನ್
ಈ ಟೂರ್ನಿಯಲ್ಲಿ ಎಸ್‌ಆರ್‌ಎಚ್ ಫುಲ್ ಅಪ್‌ಡೇಟ್ ವರ್ಷನ್‌ನಲ್ಲಿ ಕಾಣಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿ ಬಂದು ಎಡವಿತ್ತು. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ದಾಖಲೆಯ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತ್ತು. ಮುಂಬೈ ವಿರುದ್ಧ ಎಸ್‌ಆರ್‌ಎಚ್ ಮೊದಲು ಬ್ಯಾಟ್ ಮಾಡಿ 277 ರನ್ ಸೇರಿಸಿತ್ತು. ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 162, ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ 182 ರನ್ ಸೇರಿಸಿತ್ತು.
ದಾಖಲೆಯ ಪುಟಕ್ಕೆ ಪದೇ ಪದೇ ಕೆಲಸ
ಐದನೇ ಪಂದ್ಯದಲ್ಲಿ ಎಸ್‌ಆರ್‌ಎಚ್ ಬೆಂಗಳೂರು ತಂಡದ ಸವಾಲನ್ನು ಎಂ ಚಿನ್ನಸ್ವಾಮಿ ಅಂಗಳದಲ್ಲಿ ಎದುರಿಸಿತು. ಆದರೆ ಈ ಪಂದ್ಯದಲ್ಲಿ ಸನ್ ತಂಡದ ಬ್ಯಾಟರ್‌ಗಳ ಆರ್ಭಟವನ್ನು ಕಂಡಿದ್ದು ಬೇರೆ ಏನು ಕಾಣಲೇ ಇಲ್ಲ. ಈ ಪಂದ್ಯದಲ್ಲಿ ಸನ್ 287 ರನ್ ಸೇರಿಸಿತು. ಈ ಮೂಲಕ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ 275ಕ್ಕೂ ಹೆಚ್ಚು ರನ್‌ಗಳನ್ನು ಎರಡು ಬಾರಿ ಮುಟ್ಟಿದ ಹಿರಿಮೆ ಈ ತಂಡದ್ದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲೂ ಸನ್‌ರೈಸರ್ಸ್ ಮೊದಲು ಬ್ಯಾಟ್ ಮಾಡಿ 266 ರನ್ ಕಲೆ ಹಾಕಿತು. ಈ ಟೂರ್ನಿಯಲ್ಲಿ ಎಸ್‌ಆರ್‌ಎಚ್ ಮೊದಲು ಬ್ಯಾಟ್ ಮಾಡಿದರೆ ದಾಖಲೆ ಪುಟ ಸೇರುವುದು ಫಿಕ್ಸ್..
ಆರ್‌ಸಿಬಿ ಬೌಲರ್‌ಗಳ ದಂಡಿಸಿದ್ದ SRH
ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೇಸಿಸ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ಇವರ ನಿರ್ಣಯವನ್ನು ಸಮರ್ಥಿಸಿಕೊಳ್ಳುವಲ್ಲಿ ಬೌಲರ್‌ಗಳು ಎಡವಿದರು. ಹೀಗಾಗಿ ಸನ್ ತಂಡ ಬಿಗ್ ರನ್ ಟೋಟಲ್ ನೀಡಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವೆಲ್ಲಾ ದಾಖಲೆಗಳು ದಾಖಲಾಗುತ್ತವೆ ಎಂಬುದನ್ನು ಅಭಿಮಾನಿಗಳು ಎದುರು ನೋಡ್ತಾ ಇದ್ದಾರೆ.

ಮೊದಲು ಬ್ಯಾಟ್ ಮಾಡಿದರೆ ಒಳ್ಳೆಯದು
ಅಂದಹಾಗೆ ಆರ್‌ಸಿಬಿ ತಂಡ ಒಂದು ವೇಳೆ ಟಾಸ್ ಗೆದ್ದರೆ ಫೀಲ್ಡಿಂಗ್ ಮಾತ್ರ ತೆಗೆದುಕೊಳ್ಳಬಾರದು. ಏಕೆಂದರೆ ಈ ವರ್ಷ ಎಸ್‌ಆರ್‌ಎಚ್ ತಂಡದ ಆಟಗಾರರು ಇರುವ ಫಾರ್ಮ್ ನೋಡಿದರೆ, ಮತ್ತೊಂದು ದಾಖಲೆಗೆ ಹೆಸರಾಗುವ ಸಾಧ್ಯತೆ ಇದೆ. ಹೀಗಾಗಿ ಫಾಫ್ ಡುಪ್ಲೇಸಿಸ್ ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಇಳಿಯಬೇಕು. ಮೊದಲು ಬ್ಯಾಟ್ ಮಾಡಿ ಎಷ್ಟಾಗುತ್ತದೋ ಅಷ್ಟ ರನ್ ಕಲೆ ಹಾಕಿ, ಎಸ್‌ಆರ್‌ಎಚ್ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಯೋಚಿಸಬೇಕು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬೌಲರ್‌ಗಳು ಬಿಗುವಿನ ದಾಳಿಯನ್ನು ಸಂಘಟಿಸುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಗೆಲುವಿನ ಕನಸು ಈಡೇರುತ್ತದೆ.












Click it and Unblock the Notifications