Get Updates
Get notified of breaking news, exclusive insights, and must-see stories!

Karun Nair: ಆಂಗ್ಲರ ನೆಲದಲ್ಲಿ ಕನ್ನಡಿಗನ ಅಬ್ಬರದ ದ್ವಿಶತಕ

ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕಾಗಿ ತ್ರಿಶತಕ ಗಳಿಸಿರುವ ಎರಡನೇ ಆಟಗಾರ. ವಿರೇಂದ್ರ ಸೆಹ್ವಾಗ್ ಬಿಟ್ಟರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಆದರೂ, ಭಾರತ ತಂಡದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.

ಈ ಬಾರಿ ಐಪಿಎಲ್ ಹರಾಜಿನಲ್ಲಿ ಕೂಡ ಕರುಣ್ ನಾಯರ್ ಯಾವುದೇ ತಂಡಕ್ಕೆ ಮಾರಾಟವಾಗದೆ ಉಳಿದುಕೊಂಡರು. ಐಪಿಎಲ್‌ನಲ್ಲಿ ಅವಕಾಶ ಸಿಗದ ಕಾರಣ ಕರುಣ್, ಇಂಗ್ಲೆಂಡ್‌ನತ್ತ ಮುಖಮಾಡಿದ್ದರು. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅವರು, ಸದ್ಯ ದ್ವಿಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

Karun Nair Hits Double Century in County Championship

ಕೌಂಟಿ ಚಾಂಪಿಯನ್‌ಶಿಪ್ ಎರಡನೇ ಡಿವಿಷನ್‌ 2024 ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸೋಮವಾರ ಮುಕ್ತಾಯವಾದ ಪಂದ್ಯದಲ್ಲಿ ಅವರು, ಗ್ಲಾಮರ್ ಗನ್ ತಂಡದ ವಿರುದ್ಧ ಭರ್ಜರಿ ದ್ವಿಶತಕ ಗಳಿಸಿದರು.

ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ಮೊದಲು ಬೌಲಿಂಗ್ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಗ್ಲಾಮರ್ ಗನ್ ಮೊದಲ ಇನ್ನಿಂಗ್ಸ್‌ನಲ್ಲಿ 271 ರನ್‌ಗಳಿಗೆ ಆಲೌಟ್ ಆಯಿತು. ಸ್ಲಿಪ್‌ನಲ್ಲಿ ಕರುಣ್ ನಾಯರ್ ಅದ್ಭುತ ಕ್ಯಾಚ್ ಕೂಡ ಪಡೆದುಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.

ಅಜೇಯ ದ್ವಿಶತಕ

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ನಾರ್ಥಾಂಪ್ಟನ್‌ಶೈರ್ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 605 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ರಿಕಾರ್ಡೋ ವಾಸ್ಕೊನ್ಸೆಲಾಸ್ 182 ರನ್ ಗಳಿಸಿದರೆ, ಕರುಣ್ ನಾಯರ್253 ಎಸೆತಗಳಲ್ಲಿ 21 ಬೌಂಟರಿ 2 ಸಿಕ್ಸರ್ ಸಹಿತ ಅಜೇಯ 202 ರನ್ ಗಳಿಸಿ ಮಿಂಚಿದರು.

ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಗ್ಲಾಮರ್ ಗನ್ 3 ವಿಕೆಟ್ ಕಳೆದುಕೊಂಡು 104 ರನ್ ಗಳಿಸುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಈ ವರ್ಷ ಕೌಂಟಿ ಕ್ರಿಕೆಟ್‌ನಲ್ಲಿ ಮೂರು ಪಂದ್ಯಗಳನ್ನಾಡಿರುವ ಕರುಣ್ ನಾಯರ್ 4 ಇನ್ನಿಂಗ್ಸ್‌ಗಳಲ್ಲಿ 101 ರನ್ ಸರಾಸರಿಯಲ್ಲಿ 303 ರನ್ ಕಲೆಹಾಕಿದ್ದಾರೆ.

ವಿದರ್ಭ ಪರ ಕಣಕ್ಕೆ

ರಣಜಿಯಲ್ಲಿ ಕರ್ನಾಟಕ ತಂಡದ ಪರವಾಗಿ ಆಡುತ್ತಿದ್ದ ಕರುಣ್ ನಾಯರ್, 2023-24 ರ ಸಾಲಿನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸಿದರು. ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಕಾರಣ ಅವರು ವಿದರ್ಭ ಪರವಾಗಿ ಕಣಕ್ಕಿಳಿದರು. ರಣಜಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು, ವಿದರ್ಭ ತಂಡ ಈ ಬಾರಿ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಫೈನಲ್ ತಲುಪಿತ್ತು, ಆದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+