Namma Metro: ಈ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲೂ ಕ್ಯೂಆರ್‌ ಕೋಡ್‌ ಟಿಕೆಟ್‌ ವ್ಯವಸ್ಥೆ-ಎಲ್ಲೆಲ್ಲಿ? ಮಾಹಿತಿ ತಿಳಿಯಿರಿ

ಬೆಂಗಳೂರು, ಏಪ್ರಿಲ್‌, 25: ಬೆಂಗಳೂರು ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾರ್ಯಗಳು ಆಗುತ್ತಲೇ ಇವೆ. ಹಾಗೆಯೇ ಮೆಟ್ರೋದಲ್ಲಿ ಪ್ರಯಾಣ ಮಾಡಲು ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್‌ ಮೂಲಕ ಟಿಕೆಟ್ ಖರೀದಿಸುವ ಪ್ರಯಾಣಿಕರಲ್ಲಿ ಹೆಚ್ಚಳ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ ಆಗಿದೆ ಎಂದು ಇಲ್ಲಿ ಅಂಕಿಅಂಶಗಳನ್ನು ಗಮನಿಸಿ. ಹಾಗೂ ಇನ್ನು ಯಾವೆಲ್ಲ ಹೊಸ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಯಿರಿ.

ಇತ್ತೀಚೆಗಷ್ಟೇ ನೆರಳೆ ಮಾರ್ಗದ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ನಿಲ್ದಾಣಗಳಲ್ಲಿ ಕ್ಯೂರ್ ಆರ್ ಪೇಪರ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 14 ಕ್ಯೂಆರ್ ಟಿಕೆಟ್ ಮಷಿನ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಕ್ಯೂಆರ್ ಕೋಡ್ ಮುದ್ರಿಸಲಾದ ಪೇಪರ್ ಟಿಕೆಟ್ ಖರೀದಿ ಮಾಡಲು ಒಂದು ನಿಮಿಷ ತೆಗೆದುಕೊಳ್ಳಲಿದ್ದು, ಇದು ಪ್ರಾಯೋಗಿಕ ಯೋಜನೆ ಆಗಿದೆ.

Namma metro QR code ticketing system at stations on this routes as well

ಟೋಕನ್ ಖರೀದಿ ಮಾಡಲು ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ಪ್ರಯಾಣಿಕರು ನಿಲ್ಲುವ ಸಮಯವನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶ ಆಗಿದೆ. ಯಾರೊಬ್ಬರೂ ಕೂಡ ಈ ಯಂತ್ರವನ್ನು ಬಳಕೆ ಮಾಡಿ ಕ್ಯೂರ್ ಟಿಕೆಟ್ ಪ್ರಿಂಟ್ ಪಡೆಯಬಹುದಾಗಿದೆ. ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ 8 ಕಡೆಗಳಲ್ಲಿ ಹಾಗೂ ಎಂಜಿ ರಸ್ತೆಯಲ್ಲಿ 6 ಕಡೆಗಳಲ್ಲಿ ಕ್ಯೂ ಆರ್ ಟಿಕೆಟ್ ಖರೀದಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್‌ಯಶವಂತ ಚವಾಣ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಯಂತ್ರಗಳನ್ನು ಕೇವಲ ಒಂದು ವಾರದ ಹಿಂದೆಯೇ ಸ್ಥಾಪನೇ ಮಾಡಲಾಗಿದೆ. ಇದೀಗ ದಿನಕ್ಕೆ ಸರಾಸರಿ 70ರಿಂದ 80 ಪ್ರಯಾಣಿಕರು ಅವುಗಳನ್ನು ಬಳಕೆ ಮಾಡುತ್ತಾರೆ. ಇನ್ನು ಇತ್ತೀಚಿನ ಐಪಿಎಲ್ ಪಂದ್ಯದ ಸಮಯದಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇದು ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ.

ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೊಬೈಲ್ ಕ್ಯೂಆರ್ ಕೋಡ್ ಟಿಕೆಟ್ ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಜನಪ್ರಿಯವಾಗಿದೆ. ಇದು ವಾರಾಂತ್ಯದಲ್ಲಿ 1 ಲಕ್ಷ ಟಿಕೆಟ್ ಬುಕಿಂಗ್ ಅನ್ನು ದಾಟಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್ ತಿಳಿಸಿದ್ದಾರೆ.

ಮೊಬೈಲ್‌ನಲ್ಲಿ ನೆಟ್‌ವರ್ಕ್ ಕಾರ್ಯನಿರ್ವಹಿಸದಿದ್ದಾಗ ಪ್ರಯಾಣಿಕರು ಕ್ಯೂ ಆರ್‌ ಟಿಕೆಟ್ ಬಳಸಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ, ಬೌತಿಕ ಕ್ಯೂ ಆರ್‌ ಟಿಕೆಟ್ ತುಂಬಾ ಸಹಾಯಕವಾಗಲಿದೆ. ಬೈಯಪ್ಪನಹಳ್ಳಿ ಮತ್ತು ಇಂದಿರಾನಗರ ನಿಲ್ದಾಣಗಳಲ್ಲಿ ವರ್ಷಗಳ ಹಿಂದೆ ಟೋಕನ್ ವೆಂಡಿಂಗ್ ಯಂತ್ರಗಳನ್ನು ಪರಿಚಯಿಸಲಾಯಿತು. ಆದರೆ ಯಂತ್ರಗಳ ಕಾರ್ಯಾಚರಣೆ ನಿಂತುಹೋಗಿದ್ದು, ಇದರತ್ತ ಪ್ರಯಾಣಿಕರು ಅಷ್ಟೇನು ಗಮನಹರಿಸಲಿಲ್ಲ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+