138 ದಿನ ಈ ರಾಶಿಯವರಿಗೆ ಅದೃಷ್ಟದ ಹೊನಲು ಹರಿಸುವನು ಶನಿದೇವ : ಮನದ ಆಸೆ ಈಡೇರುವ ಪರ್ವಕಾಲ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯನ್ನು ಕರ್ಮಫಲದಾತ ಅಂದರೆ ಕರ್ಮಕ್ಕೆ ತಕ್ಕ ಫಲ ನೀಡುವವನು ಅಥವಾ ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಗ್ರಹವು ತನ್ನ ಪಥವನ್ನು ಬದಲಾಯಿಸಿದಾಗಲೆಲ್ಲಾ ಅದರ ಪರಿಣಾಮ ಎಲ್ಲಾ ದ್ವಾದಶ ರಾಶಿಯವರ ಜೀವನದ ಮೇಲೂ ಆಗುತ್ತದೆ. ಪಂಚಾಂಗದ ಪ್ರಕಾರ, ಜುಲೈ 27, 2026 ರಂದು, ಶನಿಯು ಮೀನ ರಾಶಿಯಲ್ಲಿ ತನ್ನ ವಕ್ರ ಸಂಚಾರವನ್ನು ಪ್ರಾರಂಭಿಸುತ್ತಾನೆ. ಅಂದರೆ ಶನಿ ಗ್ರಹವು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ವಕ್ರ ಸಂಚಾರವು ಡಿಸೆಂಬರ್ 11, 2026 ರವರೆಗೆ ಅಂದರೆ ಒಟ್ಟು 138 ದಿನಗಳವರೆಗೆ ಮುಂದುವರಿಯುತ್ತದೆ.
ಶನಿ ಎಂದ ತಕ್ಷಣ ಎಲ್ಲರಿಗೂ ಕಷ್ಟವನ್ನೇ ನೀಡುತ್ತಾನೆ ಎಂದೇನಿಲ್ಲ. ಶನಿಯ ಸಂಚಾರಕ್ಕೆ ಅನುಗುಣವಾಗಿ ಕೆಲವೊಂದು ರಾಶಿಯವರು ಅದೃಷ್ಟವನ್ನೂ ಪಡೆಯುತ್ತಾರೆ. ಹಾಗೆಯೇ ಶನಿಯ ಸಂಚಾರವು ಎಲ್ಲಾ ರಾಶಿಯವರಿಗೂ ನಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಕೆಲವರಿಗೆ, ಈ ಅವಧಿಯು ಶುಭ ಫಲಿತಾಂಶಗಳನ್ನು ಸಹ ನೀಡುತ್ತದೆ. ಇದೀಗ ವಕ್ರ ಸಂಚಾರ ಆರಂಭಿಸುವ ಶನಿದೇವ ಈ ಐದು ತಿಂಗಳ ಅವಧಿಯು ವಿಶೇಷವಾಗಿ ನಾಲ್ಕು ರಾಶಿಯವರಿಗೆ ತುಂಬಾ ಅನುಕೂಲಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಾನೆ. ಉದ್ಯೋಗ, ವ್ಯವಹಾರ, ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬ ಜೀವನದಲ್ಲಿ ಉತ್ತಮ ಬದಲಾವಣೆಗಳ ಸಾಧ್ಯತೆಯಿದೆ.

ವೃಷಭ ರಾಶಿ (Taurus):
ಶನಿಯ ಸಂಚಾರವು ವೃಷಭ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರಬಹುದು. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಂಭವವೂ ಇದೆ. ಆರ್ಥಿಕ ಲಾಭಗಳಾಗುವುದು. ಹೂಡಿಕೆ ಮಾಡಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಆದಾಯ ಹೆಚ್ಚಾಗುವ ಸಾಧ್ಯತೆಯ ಜೊತೆಗೆ, ಆರ್ಥಿಕ ಪರಿಸ್ಥಿತಿಯೂ ಬಲಗೊಳ್ಳಬಹುದು. ಈ ಸಮಯದಲ್ಲಿ ಕೆಲವು ಬಹುನಿರೀಕ್ಷಿತ ಕಾರ್ಯಗಳು ಪೂರ್ಣಗೊಳ್ಳಬಹುದು.
ಮಿಥುನ ರಾಶಿ (Gemini):
ಮಿಥುನ ರಾಶಿಯವರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ಸಾಧ್ಯತೆಯಿದೆ. ಹಿಂದೆ ಮಾಡಿದ ಕಠಿಣ ಪರಿಶ್ರಮದ ಫಲ ಈಗ ಸಿಗಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಬಹುದು. ಬಡ್ತಿ ಅಥವಾ ವೇತನ ಹೆಚ್ಚಳಕ್ಕೆ ಅವಕಾಶಗಳೂ ಇರಬಹುದು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. ಉದ್ಯಮಿಗಳು ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಅವಕಾಶವನ್ನೂ ಪಡೆಯುತ್ತಾರೆ.
ಸಿಂಹ ರಾಶಿ (Leo):
ಸಿಂಹ ರಾಶಿಯವರು ಶನಿಯ ಪ್ರಭಾವದಿಂದಾಗಿ ಎದುರಿಸುತ್ತಿರುವ ಕೆಲವು ತೊಂದರೆಗಳು ಈ ಅವಧಿಯಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತದೆ ಜ್ಯೋತಿಷ್ಯ ಲೆಕ್ಕಾಚಾರ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ನ್ಯಾಯಾಲಯದ ಪ್ರಕರಣಗಳು ಅಥವಾ ಕಾನೂನು ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳು ಬರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿಯೂ ಪ್ರಗತಿ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ ಹೊಸ ಅವಕಾಶಗಳೂ ಸಿಗುವುದು.
ಧನು ರಾಶಿ (Sagitarius):
ಈ ಸಂಚಾರವು ಧನು ರಾಶಿಯವರಿಗೆ ಶುಭಕರವಾಗಿರುತ್ತದೆ. ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಬಹುದು. ಅದೃಷ್ಟ ಹೆಚ್ಚಾಗುವ ಸಾಧ್ಯತೆಗಳಿವೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು. ಮನೆ ಖರೀದಿ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರಬಹುದು. ಭವಿಷ್ಯಕ್ಕೆ ಉಪಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವಿರುತ್ತದೆ.
ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಜಾತಕ, ರಾಶಿ, ನಕ್ಷತ್ರ, ರಾಶಿ ಮತ್ತು ನಕ್ಷತ್ರದ ಪಾದ, ಹಂತ, ಗ್ರಹಗಳ ಸಂಚಾರ ಇತ್ಯಾದಿಗಳನ್ನು ಅವಲಂಬಿಸಿ ಫಲಿತಾಂಶಗಳು ಬದಲಾಗಬಹುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications