ನಿಮ್ಮ ರಾಶಿಯ ರಹಸ್ಯ ಇಲ್ಲಿದೆ: ಅವಮಾನವಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?

ಅವಮಾನ ಎನ್ನುವುದು ಪ್ರತಿಯೊಬ್ಬರಿಗೂ ನೋವೇ. ಆದರೆ ಅದನ್ನು ಸ್ವೀಕರಿಸುವ ರೀತಿ ಮಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಜ್ಯೋತಿಷ್ಯದ ಪ್ರಕಾರವೂ ಪ್ರತಿಯೊಂದು ಜನ್ಮರಾಶಿಯವರು ಅವಮಾನವನ್ನು ವಿಭಿನ್ನವಾಗಿ ಅನುಭವಿಸುತ್ತಾರೆ. ಇದರ ಜೊತೆಗೆ ಬೆಳವಣಿಗೆ, ಕುಟುಂಬ, ಶಿಕ್ಷಣ, ಜೀವನಾನುಭವ, ವ್ಯಕ್ತಿತ್ವ ಮತ್ತು ಭಾವನಾತ್ಮಕ ಪ್ರಬುದ್ಧತೆ ಇವೆಲ್ಲವೂ ಅವಮಾನವನ್ನು ಎದುರಿಸುವ ರೀತಿಯನ್ನು ಬಹಳ ಮಟ್ಟಿಗೆ ಪ್ರಭಾವಿಸುತ್ತವೆ. ಹಾಗಾದರೆ ಬನ್ನಿ, ನಿಮ್ಮ ಜನ್ಮರಾಶಿಯವರು ಅವಮಾನವನ್ನು ಹೇಗೆ ಎದುರಿಸುತ್ತೀರಿ ನೋಡೋಣ.

ಮೇಷ (Aries)

ತಮ್ಮ ಧೈರ್ಯ ಅಥವಾ ನಾಯಕತ್ವವನ್ನು ಯಾರಾದರೂ ಪ್ರಶ್ನಿಸಿದರೆ ಹೆಚ್ಚು ಅವಮಾನ ಅನುಭವಿಸುತ್ತಾರೆ. ತಕ್ಷಣ ಕೋಪಗೊಳ್ಳುತ್ತಾರೆ, ಎದುರೇ ಉತ್ತರ ಕೊಡುತ್ತಾರೆ. ಸೇಡು ತೀರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಯಶಸ್ಸಿನ ಮೂಲಕ ತಾವು ಯಾರು ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಅವಮಾನದ ಮುಂದೆ ಮಂಕಾಗುವುದಿಲ್ಲ.

Zodiac Sign Handle Insults

ವೃಷಭ (Taurus)

ಹೆಚ್ಚು ಅವಮಾನ ಆಗುವುದು ನಂಬಿಕೆಗೆ ದ್ರೋಹ ಮಾಡುವುದರಿಂದ, ಸಾರ್ವಜನಿಕವಾಗಿ ಗೌರವ ಕಳೆಯುವುದರಿಂದ. ಹೊರಗೆ ಶಾಂತವಾಗಿದ್ದರೂ, ಒಳಗೆ ನೋವು ಅನುಭವಿಸುತ್ತಾರೆ. ನೇರವಾಗಿ ಸೇಡು ತೀರಿಸಿಕೊಳ್ಳದಿದ್ದರೂ ತಮ್ಮ ಸ್ಥಿರತೆ ಮತ್ತು ಯಶಸ್ಸಿನ ಮೂಲಕ ಉತ್ತರಿಸುತ್ತಾರೆ. ನೋವು ಸ್ವಲ್ಪ ಕಾಲ ಮನಸ್ಸಿನಲ್ಲಿ ಇಟ್ಟುಕೊಳ್ಳಬಹುದು.

ಮಿಥುನ (Gemini)

ತಮ್ಮ ಬುದ್ಧಿವಂತಿಕೆಯನ್ನು ಅಥವಾ ಮಾತಿನ ಚಾತುರ್ಯವನ್ನು ಯಾರಾದರೂ ಹೀಯಾಳಿಸಿದರೆ ಹೆಚ್ಚು ಅವಮಾನ ಹೊಂದುವರು. ಅದಕ್ಕೆ ಮಾತಿನಲ್ಲೇ ಪ್ರತಿಕ್ರಿಯೆ ಕೊಡುತ್ತಾರೆ. ಸೇಡನ್ನೂ ವ್ಯಂಗ್ಯ ಅಥವಾ ಹಾಸ್ಯದ ಮೂಲಕವೇ ಮಾಡುತ್ತಾರೆ. ಆದರೆ ಮಂಕಾಗುವುದಿಲ್ಲ. ಬೇಗ ಮರೆತು ಮುಂದುವರಿಯುತ್ತಾರೆ.

138 ದಿನ ಈ ರಾಶಿಯವರಿಗೆ ಅದೃಷ್ಟದ ಹೊನಲು ಹರಿಸುವನು ಶನಿದೇವ : ಮನದ ಆಸೆ ಈಡೇರುವ ಪರ್ವಕಾಲ
138 ದಿನ ಈ ರಾಶಿಯವರಿಗೆ ಅದೃಷ್ಟದ ಹೊನಲು ಹರಿಸುವನು ಶನಿದೇವ : ಮನದ ಆಸೆ ಈಡೇರುವ ಪರ್ವಕಾಲ

ಕಟಕ (Cancer)

ತಮ್ಮ ಕುಟುಂಬ ಅಥವಾ ಭಾವನೆಗಳನ್ನು ನೋಯಿಸುವುದರಿಂದ ಇವರು ಹೆಚ್ಚು ಅವಮಾನ ಹೊಂದುತ್ತಾರೆ. ಇವರ ಪ್ರತಿಕ್ರಿಯೆ ಸಾಮಾನ್ಯವಾಗಿ ಕಠೋರ ಮೌನ. ಸೇಡು ತೀರಿಸಿಕೊಳ್ಳುವ ಸ್ವಭಾವ ತೀರ ಅಪರೂಪ. ಮಂಕಾಗುವರು. ಬಹಳ ದಿನ ಮನಸ್ಸಿನಲ್ಲಿ ಇಟ್ಟುಕೊಳ್ಳಬಹುದು.

ಸಿಂಹ (Leo)

ಹೆಚ್ಚು ಅವಮಾನ ಆಗುವ ಸನ್ನಿವೇಶ ಎಂದರೆ ಗೌರವ ಕಳೆದುಕೊಳ್ಳುವುದು, ಎಲ್ಲರ ಮುಂದೆ ಹೀಯಾಳಿಸುವುದು. ಇವರ ಅಹಂಕಾರಕ್ಕೆ ಅದು ದೊಡ್ಡ ಪೆಟ್ಟು.
ಯಶಸ್ಸಿನ ಮೂಲಕ ಗೌರವ ಮರಳಿ ಪಡೆಯಲು ಪ್ರಯತ್ನಿಸುವುದೇ ಇವರು ಸೇಡು ತೀರಿಸಿಕೊಳ್ಳುವ ಕ್ರಮ. ಅವಮಾನವಾದಾಗ ಮಂಕಾಗುತ್ತಾರೆ. ಸ್ವಲ್ಪ ಕಾಲ, ನಂತರ ಎದ್ದು ನಿಲ್ಲುತ್ತಾರೆ.

ಶುಕ್ರನ ನಕ್ಷತ್ರ ಸಂಕ್ರಮಣ ಈ ರಾಶಿಯವರಿಗೆ ಅಶುಭ :ಕಾಡುವುದು ಸೋಲಿನ ಭೀತಿ, ಸಂಬಂಧಗಳಲ್ಲಿ ಮೂಡುವುದು ಬಿರುಕು
ಶುಕ್ರನ ನಕ್ಷತ್ರ ಸಂಕ್ರಮಣ ಈ ರಾಶಿಯವರಿಗೆ ಅಶುಭ :ಕಾಡುವುದು ಸೋಲಿನ ಭೀತಿ, ಸಂಬಂಧಗಳಲ್ಲಿ ಮೂಡುವುದು ಬಿರುಕು

ಕನ್ಯಾ (Virgo)

ತಮ್ಮ ಕೆಲಸದಲ್ಲಿ ಯಾರಾದರೂ ತಪ್ಪು ಹುಡುಕಿದರೆ, ದೋಷ ಬೊಟ್ಟು ಮಾಡಿ ತೋರಿಸಿದರೆ, ಅವಮಾನ ಅನುಭವಿಸುತ್ತಾರೆ. ಇದಕ್ಕೆ ಇವರ ಪ್ರತಿಕ್ರಿಯೆ ಆತ್ಮವಿಮರ್ಶೆ. ಇವರ ಸೇಡು ಹೇಗೆ? ಇನ್ನೂ ಉತ್ತಮ ಕೆಲಸ ಮಾಡಿ ತೋರಿಸುತ್ತಾರೆ. ಕೆಲವೊಮ್ಮೆ ಆತ್ಮವಿಶ್ವಾಸ ಕಡಿಮೆಯಾಗಬಹುದು. ಆದರೆ ಮಂಕಾಗಿ ಕೂರುವುದಿಲ್ಲ.

ತುಲಾ (Libra)

ಸಂಬಂಧಗಳಲ್ಲಿ ಅವಗಣನೆ ಆಗುವುದೇ ಇವರಿಗೆ ಹೆಚ್ಚು ಅವಮಾನ ಆಗುವ ಸಂಗತಿ. ಪ್ರತಿಕ್ರಿಯೆ ಮುಕ್ತವಾಗಿ ನೀಡರು. ಜಗಳ ತಪ್ಪಿಸಲು ಪ್ರಯತ್ನ ಮಾಡುತ್ತಾರೆ. ಸಾಮಾನ್ಯವಾಗಿ ಸೇಡು ತೀರಿಸಿಕೊಳ್ಳುವ ಸ್ವಭಾವ ಇಲ್ಲ. ಸಂಬಂಧದ ಬಗ್ಗೆ ಹೆಚ್ಚು ಯೋಚಿಸುತ್ತಾರೆ, ವಿಷಾದಪಡುತ್ತಾರೆ.

ವೃಶ್ಚಿಕ (Scorpio)

ಹೆಚ್ಚು ಅವಮಾನ ಅನುಭವಿಸುವುದು ಯಾವಾಗ ಎಂದರೆ ನಂಬಿದವರಿಂದ ದ್ರೋಹ, ಮೋಸ, ಗೌರವಕ್ಕೆ ಧಕ್ಕೆ ಆದಾಗ. ಅಂಥ ಸನ್ನಿವೇಶದಲ್ಲಿ ಹೊರಗೆ ಮೌನವಾಗಿದ್ದರೂ, ಒಳಗೆ ತೀವ್ರ ನೋವು ಪಟ್ಟುಕೊಳ್ಳುತ್ತಾರೆ. ಜ್ಯೋತಿಷ್ಯದ ಪ್ರಕಾರ ಇವರು ಹೆಚ್ಚು ಸೇಡು ತೀರಿಸಿಕೊಳ್ಳುವ ರಾಶಿಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಸರಿಯಾದ ಸಮಯಕ್ಕಾಗಿ ಕಾಯಬಹುದು.

ಧನು (Sagittarius)

ಇವರ ಸ್ವಾತಂತ್ರ್ಯವನ್ನು ಕಸಿದುಕೊಂಡಾಗ, ಕಟ್ಟಿಹಾಕಿದಂತೆ ಆದಾಗ ಹೆಚ್ಚು ಅವಮಾನ ಪಟ್ಟುಕೊಳ್ಳುತ್ತಾರೆ. ಅಲ್ಲಿಂದ ದೂರ ಸರಿಯುತ್ತಾರೆ. ಹೆಚ್ಚಾಗಿ ಸೇಡು ತೀರಿಸಿಕೊಳ್ಳುವವರಲ್ಲ. ಸ್ವಲ್ಪ ಮಂಕಾಗಬಹುದು. ಆದರೆ ಬೇಗ ಚೇತರಿಸಿಕೊಳ್ಳುತ್ತಾರೆ. ನೋವನ್ನು ಶಕ್ತಿಯನ್ನಾಗಿ ಮಾಡಿಕೊಳ್ಳುವ ಪ್ರವೃತ್ತಿ ಇದೆ.

ಮಕರ (Capricorn)

ತಮ್ಮ ಸಾಮರ್ಥ್ಯವನ್ನು ಕೀಳಾಗಿ ನೋಡುವುದೇ ಇವರಿಗೆ ಆಗುವ ದೊಡ್ಡ ಅವಮಾನ. ಪ್ರತಿಕ್ರಿಯೆ ನೀಡಲಾರರು. ಮೌನವಾಗಿ ಗುರಿಯತ್ತ ಗಮನ ಹರಿಸುವರು. ಸಾಧನೆಯ ಮೂಲಕ ಉತ್ತರಿಸುತ್ತಾರೆ. ನೋವು ಇದ್ದರೂ ಅದನ್ನು ಪ್ರೇರಣೆಯನ್ನಾಗಿ ಮಾಡಿಕೊಳ್ಳುತ್ತಾರೆ.

ಕುಂಭ (Aquarius)

ತಮ್ಮ ಆಲೋಚನೆಗಳನ್ನು ಯಾರಾದರೂ ತಿರಸ್ಕರಿಸುವುದು, ತಳ್ಳಿಹಾಕುವುದು ಮಾಡಿದಾಗ ಇವರಿಗೆ ಅವಮಾನ ಆಗುತ್ತದೆ. ಹಾಗಂತ ತಕ್ಷಣವೇ ತಮ್ಮ ಭಾವನೆ ತೋರಿಸುವುದಿಲ್ಲ. ಹೊಸ ಸಾಧನೆಗಳಿಂದ ಉತ್ತರಿಸುತ್ತಾರೆ. ಹೊರಗೆ ತಮ್ಮ ಕ್ರೋಧ ಕಾಣಿಸದಿದ್ದರೂ ಒಳಗೆ ಯೋಚಿಸುತ್ತಾರೆ.

ಮೀನ (Pisces)

ಹೆಚ್ಚು ಅವಮಾನ ಅನುಭವಿಸುವುದು ಎಂದರೆ ತಮ್ಮ ಪ್ರೀತಿ ಮತ್ತು ಕರುಣೆಯನ್ನು ಯಾರಾದರೂ ದುರ್ಬಲತೆ ಎಂದು ಕಂಡಾಗ. ಪ್ರತಿಕ್ರಿಯೆಯಾಗಿ ಮೌನ, ಏಕಾಂತ ಅನುಭವಿಸುತ್ತಾರೆ. ಸಾಮಾನ್ಯವಾಗಿ ಸೇಡು ತೀರಿಸಿಕೊಳ್ಳುವ ಸ್ವಭಾವ ಅಲ್ಲ. ಮಂಕಾಗುವುದು ಇದೆ. ಆದರೆ ಸಮಯದೊಂದಿಗೆ ಮತ್ತೆ ಚೇತರಿಸಿಕೊಳ್ಳುತ್ತಾರೆ.

ಈ ರಾಶಿಗಳು ಅವಮಾನವನ್ನು ಸಾಧನೆಯಾಗಿ ಪರಿವರ್ತಿಸುತ್ತಾರೆ: ಮೇಷ, ಸಿಂಹ, ಕನ್ಯಾ, ಮಕರ, ಕುಂಭ, ವೃಶ್ಚಿಕ

ಇವರು ಅವಮಾನದಿಂದ ಹೆಚ್ಚು ಮಂಕಾಗುತ್ತಾರೆ: ಕಟಕ, ತುಲಾ, ಮೀನ, ವೃಷಭ

ಇವರು ಸೇಡು ತೀರಿಸಿಕೊಳ್ಳುತ್ತಾರೆ: ವೃಶ್ಚಿಕ (ಸರಿಯಾದ ಸಮಯಕ್ಕಾಗಿ ಕಾಯುವವರು). ಮೇಷ (ತಕ್ಷಣವೇ ಪ್ರತಿಕ್ರಿಯಿಸುವವರು). ಸಿಂಹ (ಗೌರವವನ್ನು ಯಶಸ್ಸಿನ ಮೂಲಕ ಮರಳಿ ಪಡೆಯುವವರು). ಮಕರ (ಕಠಿಣ ಪರಿಶ್ರಮ ಮತ್ತು ಸಾಧನೆಯ ಮೂಲಕ ಉತ್ತರಿಸುವವರು).

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+