Tahsildars Transfer: ರಾಜ್ಯ ಸರ್ಕಾರದಿಂದ ದಿಢೀರ್ 31 ತಹಶೀಲ್ದಾರರ ವರ್ಗಾವಣೆ
Tahsildars Transfer: ರಾಜ್ಯ ಸರ್ಕಾರ ಆಗಾಗ ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ 31 ತಹಶೀಲ್ದಾರರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ಯಾರನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ವರ್ಗಾವಣೆಯ ಮಾಡಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆ ಆದ ಎಲ್ಲಾ ಅಧಿಕಾರಿಗಳು ತಕ್ಷಣವೇ ತಮ್ಮ ನಿಯೋಜಿಸಲಾದ ಹೊಸ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಅಲ್ಲದೆ ಆ ಕುರಿತ ವರದಿಯನ್ನು ಸಲ್ಲಿಕೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಯಾರು ಎಲ್ಲಿಗೆ ವರ್ಗಾವಣೆ ತಿಳಿಯಿರಿ
* ಕೀರ್ತನ ಕೆ.ಆರ್.: ಮೈಸೂರು ವಿಭಾಗದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ್ ಹುದ್ದೆಯಿಂದ ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರ್ಗಾಹಿಸಲಾಗಿದೆ.
* ಮೊಹಮದ್ ಮೊಹಸೀನ್: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಹುದ್ದೆಯಲ್ಲೇ ಮುಂದುವರೆಸಲಾಗಿದೆ.
* ಜಿ. ಗಣೇಶ್ ಸವಣೂರ: ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕುನ ತಹಶೀಲ್ದಾರ್ ಗ್ರೇಡ್-2ಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಜಿ. ರವೀಂದ್ರ ರೆಡ್ಡಿ: ಕಲಬುರಗಿಯ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವಿಶೇಷ ತಹಶೀಲ್ದಾರ್ ಹುದ್ದೆಯಿಂದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾಹಿಸಲಾಗಿದೆ.
* ವೆಂಕನಗೌಡ: ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ತಹಶೀಲ್ದಾರ್ ಗ್ರೇಡ್-2 ಹುದ್ದೆಯಿಂದ ಕಲಬುರಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವಿಶೇಷ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಬಿ.ಆರ್. ಮುನಿವೆಂಕಟಪ್ಪ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಯಲ್ಲಿದ್ದ ಇವರನ್ನು ಇದೀಗ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು ವಿಶೇಷ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ರಾಕೇಶ್ ಫ್ರಾನಿಸ್: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಹುದ್ದಗೆ ವರ್ಗಾವಣೆ ಮಾಡಲಾಗಿದೆ.
* ಹೆಚ್.ಬಿ. ಹಾಲೇಶ್: ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗ್ರೇಡ್ 2ನಿಂದ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಪಿ.ಎಂ. ದೊಡ್ಡಮನಿ: ರಾಣೆಬೆನ್ನೂರಿನ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ತಹಶೀಲ್ದಾರ್ ಗ್ರೇಡ್-2ನಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಜಿ.ಎಸ್. ನಾಯಕ್: ವಿಜಯಪುರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ವಿಜಯಪುರ ಇಂಡಿ ರೈಲ್ವೆ ಸ್ಟೇಷನ್ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ವಿಶೇಷ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ವೆಂಕಟೇಶ್ ಶರಣಪ್ಪ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಭೀಮಣ್ಣ ಗುಂಡಪ್ಪ ಕುದಿ: ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಕಲಬುರಗಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಮುರಳಿಧರ್: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಗಂಗಾಧರ್ ಪಾಟೀಲ್: ಕಲಬುರಗಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಶಿರಾಸ್ತೆದಾರ್ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಕೆ. ಸುರೇಶ್: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಭದ್ರಾವತಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಪರಶುರಾಮಪ್ಪ ಬಿ.: ಹೂವಿನ ಹಡಗಲಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ದಾವಣಗೆರೆ ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ವಿಜಯೇಂದ್ರ ಎಸ್. ಹುಲಿನಾಯಕ: ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಾಮಾಜಿಕ ಭದ್ರತಾ ಯೋಜನೆಯ ತಹಶೀಲ್ದಾರ್ ಗ್ರೇಡ್-2ನಿಂದ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಚಂದ್ರಶೇಖರ್ ಎ.ಎಸ್.: ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಮೈಸೂರು ಖಾದಿ ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಮಹಾದೇವಪ್ಪಗೌಡ ಬಿರಾದಾರ: ಬಾಗಲಕೋಟೆ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಗೀತಾ ಟಿ.ಆರ್.: ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-2ನಿಂದ ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಹನ್ನಾ ಮರಿಯ: ಕೋಲಾರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ನಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2ಗೆ ವರ್ಗಾವಣೆ ಮಾಡಲಾಗಿದೆ.
* ಎಸ್.ಹೆಚ್. ಬಾಲಚಂದ್ರ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಯಲ್ಲಿದ್ದ ಇವರನ್ನು ಹಾಸನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನಾಧಿಕಾರಿಗಳ ಕಚೇರಿ ವಿಶೇಷ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ಚಂದ್ರಕಾಂತ್ ಗಜಾನನ ನಾಯ್ಕ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಹುದ್ದೆಯಲ್ಲಿದ್ದ ಇವರನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಗ್ರೇಡ್-2ಗೆ ವರ್ಗಾವಣೆ ಮಾಡಲಾಗಿದೆ.
* ಡಾ: ದೊಡ್ಡಪ್ಪ ಹೂಗಾರ: ಧಾರವಾಡ ಜಿಲ್ಲೆ ಆಳ್ನಾವರ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ನೇಮಕ ಮಾಡಲಾಗಿದೆ.
* ಡಾ: ಅಶ್ವಥ ಎಂ.ಬಿ.: ಕಿಬೆಂಗಳೂರು ದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆಡಳಿತಾಧಿಕಾರಿ ನೇಮಿಸಲಾಗಿದೆ.
* ಹೆಚ್.ಎನ್. ರಾಮಚಂದ್ರ: ಬೆಂಗಳೂರು ಬಿ.ಎಂ.ಆರ್.ಸಿ.ಎಲ್‌ನ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ಬಿ.ಎಸ್. ಕಡಕಭಾವಿ: ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ.
* ಪ್ರಕಾಶ್ ಹೊಳಪ್ಪಗೋಳ: ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಚೇರಿ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ.
* ಸುರೇಶ್ ಜಿ. ಬಾಲೇಹೊಸೂರ: ಗದಗ ಉಪವಿಭಾಗ ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಗ್ರೇಡ್-2 ಹುದ್ದೆಗೆ ನೇಮಕ ಮಾಡಲಾಗಿದೆ.
* ಎಚ್. ಹೊನ್ನಮ್ಮ: ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ.












Click it and Unblock the Notifications