ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ರಹಸ್ಯ ಕಡತ ಬಹಿರಂಗಪಡಿಸಿದ್ದ ಎಡ್ವರ್ಡ್ ಸ್ನೋಡನ್‌ಗೆ ಪೌರತ್ವ ನೀಡಿದ ರಷ್ಯಾ

|
Google Oneindia Kannada News

ಮಾಸ್ಕೋ, ಸೆ. 26: ಅಮೆರಿಕದ ರಹಸ್ಯ ಭದ್ರತಾ ಕಡತಗಳನ್ನು ಬಹಿರಂಗಗೊಳಿಸಿದ್ದ ಎಡ್ವರ್ಡ್ ಸ್ನೋಡನ್‌ಗೆ ರಷ್ಯಾ ಪೌರತ್ವ ಸಿಕ್ಕಿದೆ. ಅಮೆರಿಕ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಸೆಕ್ಯೂರಿಟಿ ಕಾಂಟ್ರಾಕ್ಟರ್ ಆಗಿದ್ದ ಎಡ್ವರ್ಡ್ ಸ್ನೋಡನ್‌ಗೆ ಪೌರತ್ವ ನೀಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. ಎಡ್ವರ್ಡ್ ಸ್ನೇಡನ್ ಸೇರಿದಂತೆ 75 ವಿದೇಶೀ ಪ್ರಜೆಗಳಿಗೆ ರಷ್ಯಾ ಪೌರತ್ವ ಸಿಕ್ಕಿದೆ.

ಅಮೆರಿಕ ಸರಕಾರದ ಬಹಳ ಸೂಕ್ಷ್ಮ ಮತ್ತು ರಹಸ್ಯವಾಗಿರುವ ಸರ್ವೇಕ್ಷಣ ಯೋಜನೆಗಳ ವಿವರಗಳಿರುವ ಕಡತಗಳನ್ನು ಬಹಿರಂಗಗೊಳಿಸಿದ ಕಾರಣಕ್ಕೆ ಅವರ ವಿರುದ್ಧ ಅಮೆರಿಕದ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಎಡ್ವರ್ಡ್ ಸ್ನೋಡೆನ್ 2013ರಿಂದಲೂ ರಷ್ಯಾದಲ್ಲೇ ಇದ್ದಾರೆ.

ಬಿಕಿನಿಯಿಂದ ಬುರ್ಖಾ; ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿದ್ದೇಗೆ?ಬಿಕಿನಿಯಿಂದ ಬುರ್ಖಾ; ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಆಗಿದ್ದೇಗೆ?

ಹವಾಯಿ ದ್ವೀಪ ಪ್ರದೇಶದಲ್ಲಿರುವ ಅಮೆರಿಕ ಎನ್‌ಎಸ್‌ಎ ಕಚೇರಿಯಲ್ಲಿನ ತನ್ನ ಉದ್ಯೋಗವನ್ನು ಬಿಟ್ಟ ಸ್ನೋಡನ್ 2013 ಮೇ 20ರಂದು ಹಾಂಕಾಂಗ್‌ಗೆ ತೆರಳಿದ್ದರು. ಅಲ್ಲಿ ಗ್ಲೆನ್ ಗ್ರೀನ್‌ವಾಲ್ಡ್ ಸೇರಿದಂತೆ ಕೆಲ ಪತ್ರಕರ್ತರಿಗೆ ಎನ್‌ಎಸ್‌ಎಯ ಸಾವಿರಾರು ಕ್ಲಾಸಿಫೈಡ್ ಡಾಕುಮೆಂಟ್‌ಗಳನ್ನು ಬಹಿರಂಗ ಮಾಡಿದ್ದರು. ಇವೇ ಕಡತಗಳನ್ನು ಆಧರಿಸಿ ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್ ಮೊದಲಾದ ಪತ್ರಿಕೆಗಳಲ್ಲಿ ಸರಣಿಗಳಾಗಿ ಸ್ಫೋಟಕ ಸುದ್ದಿಗಳು ಪ್ರಕಟವಾಗಿದ್ದವು.

Russia Grants Citizenship To US Whistleblower Edward Snowden

ಆಗಿನಿಂದಲೂ ರಷ್ಯಾದಲ್ಲೇ ಆಶ್ರಯ ಪಡೆದಿರುವ ಎಡ್ವರ್ಡ್ ಸ್ನೋಡನ್ ಅವರಿಗೆ 2020ರಲ್ಲಿ ಖಾಯಂ ನಿವಾಸ ಹಕ್ಕು ಸಿಕ್ಕಿತ್ತು. ಅಮೆರಿಕದ ಪೌರತ್ವ ತ್ಯಜಿಸದೆಯೇ ರಷ್ಯಾ ಪೌರತ್ವ ಪಡೆಯಲು ಆಗಲೇ ಅವರು ಪ್ರಯತ್ನ ಶುರು ಮಾಡಿದ್ದರು. ಎರಡು ವರ್ಷಗಳ ಬಳಿಕ ಅವರಿಗೆ ರಷ್ಯಾ ಪೌರತ್ವ ದಯಪಾಲಿಸಿದೆ.

Russia Grants Citizenship To US Whistleblower Edward Snowden

ಇದೇ ವೇಳೆ, ಎಡ್ವರ್ಡ್ ಸ್ನೋಡೆನ್ ಅವರ ಅಮೆರಿಕನ್ ಪತ್ನಿ ಕೂಡ ಜೊತೆಯಲ್ಲಿದ್ದು ಅವರೂ ಕೂಡ ರಷ್ಯಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇಬ್ಬರಿಗೂ 2020 ಡಿಸೆಂಬರ್‌ನಲ್ಲಿ ಮಗುವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Russia president Vladimir Putin has signed for a decree to grant citizenship for 75 foreign nationals, including former US security contractor Edward Snowden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X