3ನೇ ಮಹಾಯುದ್ಧ ಫಿಕ್ಸ್: ಪರಮಾಣು ಅಸ್ತ್ರ ಬಳಕೆ ಗ್ಯಾರಂಟಿ?

ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಗ್ರರು ದಾಳಿ ಮಾಡಿದ ಬಳಿಕ ಜಗತ್ತಿನಲ್ಲಿ ಈಗ 3ನೇ ಮಹಾಯುದ್ಧದ ಭಯ ಆವರಿಸಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಗಂಭೀರ ಆರೋಪ ಮಾಡಿದ ಬಳಿಕ ಆತಂಕ ಮತ್ತಷ್ಟು ಆವರಿಸಿದೆ. ಯಾಕಂದ್ರೆ ಉಕ್ರೇನ್‌ನ ಸಹಾಯದಿಂದ ಐಎಸ್ ಉಗ್ರರು ರಷ್ಯಾ ರಾಜಧಾನಿ ಮೇಲೆ ದಾಳಿ ಮಾಡಿದ್ದಾರೆ ಅಂತಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಬೆಳಗವಣಿಗೆ ನಡುವೆ ರಷ್ಯಾ ಸೇನೆ ಉಕ್ರೇನ್ ಮೇಲೆ ಘೋರವಾದ ದಾಳಿ ಆರಂಭಿಸಿದೆ. ಹಾಗೇ ಪರಮಾಣು ಅಸ್ತ್ರ ಬಳಕೆಯ ಭಯ ಆವರಿಸಿದೆ.

ಉಕ್ರೇನ್ & ರಷ್ಯಾ ಸಂಬಂಧ ಹಳಸಿ ಹೋಗಿ ಈಗಾಗಲೇ 2 ವರ್ಷ ಕಳೆದಿದೆ. ಇಬ್ಬರೂ ಈಗ ಘೋರ ಯುದ್ಧ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಯಲ್ಲಿ ರಷ್ಯಾ ರಾಜಧಾನಿ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದೆ. ಇದೇ ಕಾರಣಕ್ಕೆ ಭೀಕರ ದಾಳಿ ನಡೆಸಿದ ಉಗ್ರರ ಪಡೆ, ನೂರಾರು ಜನ ಸಾಯುವಂತೆ ದಾಳಿ ಮಾಡಿದೆ. ಆ ನಂತರ ರಷ್ಯಾ ಸೇನೆ ಕೂಡ ರೊಚ್ಚಿಗೆದ್ದು ಉಕ್ರೇನ್ ಮೇಲೆ ಮಾರಣಾಂತಿಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿದೆ. ನಿನ್ನೆ & ಮೊನ್ನೆ ಇದೇ ರೀತಿಯ ದಾಳಿಗಳನ್ನು ರಷ್ಯಾ ನಡೆಸಿತ್ತು. ಈಗ ನೋಡಿದರೆ ಮತ್ತೊಮ್ಮೆ ಅದೇ ರೀತಿಯ ಅಟ್ಯಾಕ್‌ನ ಮಾಡಿದೆ ರಷ್ಯಾ. ಅಲ್ಲದೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ಅಸ್ತ್ರ ಬಳಕೆಯ ಭಯ ಕಾಡ್ತಿದೆ.

Russian Military Started Deadly Attack On Ukraine After Moscow Attack

ಉಕ್ರೇನ್ ನಗರಗಳು ಉಡೀಸ್!

ಹೌದು, ಉಕ್ರೇನ್ ದೇಶದ ರಾಜಧಾನಿ ಕೀವ್‌ ಗುರಿ ಮಾಡಿ ರಷ್ಯಾ ಸೇನೆ ವಿಪರೀತವಾಗಿ ದಾಳಿ ಮಾಡುತ್ತಿದೆ. ಈಗ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದ ಪರಿಣಾಮ ಉಕ್ರೇನ್ ನೆಲವು ನಡುಗಿ ಹೊಗಿದೆ, ಈ ಬಗ್ಗೆ ಉಕ್ರೇನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಕ್ರೇನ್‌ ದೇಶದ ಪ್ರಮುಖ ನಗರಗಳನ್ನು ಗುರಿ ಮಾಡಿ ರಷ್ಯಾ ಹಾರಿಸಿದ್ದ ಕ್ರೂಸ್‌ ಕ್ಷಿಪಣಿ ವಾಯು ಪ್ರದೇಶವನ್ನ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ ರಷ್ಯಾದ ವಾಯು ಸೇನೆ ನಡೆಸುತ್ತಿರುವ ದಾಳಿಗೆ ಉಕ್ರೇನ್ ಈಗ ಬೆಚ್ಚಿಬಿದ್ದಿದೆ.

ಐಎಸ್ ಉಗ್ರರ ಫೋಟೋ ರಿಲೀಸ್!

ರಷ್ಯಾ ರಾಜಧಾನಿ ಮಾಸ್ಕೊ ನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿ, 143 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಉಗ್ರರ ಚಿತ್ರವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ರಿಲೀಸ್ ಮಾಡಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಐಎಸ್ ಉಗ್ರರ ಕೈವಾಡ ಇದೆ ಅನ್ನೋದನ್ನ ಹೇಳಿದ್ದರು. ಇದೀಗ ಅಧಿಕೃತವಾಗಿ ಉಗ್ರರೇ ಈ ಬಗ್ಗೆ ಫೋಟೋ ರಿಲೀಸ್ ಮಾಡಿ ಬೆಂಕಿ ಹೊತ್ತಿಸಿದ್ದಾರೆ.

ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾಗೆ ಐಎಸ್ ಉಗ್ರರು ದಾಳಿ ಹೊಣೆ ಹೊತ್ತುಕೊಂಡ ನಂತರ ಮತ್ತೆ ಪಿತ್ತ ನೆತ್ತಿಗೇರಿದೆ. ಅಲ್ಲದೆ ಈ ಉಗ್ರರಿಗೆ ಉಕ್ರೇನ್ ದೇಶ ನೆರವು ನೀಡಿದೆ ಎಂಬ ಆರೋಪವನ್ನು ಕೂಡ ರಷ್ಯಾ ಈಗ ಮಾಡುತ್ತಿದೆ. ಹೀಗಾಗಿ ಉಕ್ರೇನ್ ವಿರುದ್ಧ ತನ್ನಲ್ಲಿರುವ ಪರಮಾಣು ಅಸ್ತ್ರಗಳನ್ನು ರಷ್ಯಾ ಬಳಕೆ ಮಾಡುತ್ತಾ? ಎಂಬ ಆತಂಕ ಕಾಡುತ್ತಿದೆ. ಆದರೆ, ಪುಟಿನ್ ಅವರು ಇಂತಹ ನಿರ್ಣಯ ಕೈಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+