ಒಂದಲ್ಲ.. ಎರಡಲ್ಲ.. ಬರೋಬ್ಬರಿ 99 ಡ್ರೋನ್‌ಗಳ ಮೂಲಕ ಡೆಡ್ಲಿ ಅಟ್ಯಾಕ್!

ರಷ್ಯಾ & ಉಕ್ರೇನ್ ನಾಯಕರಿಗೆ ಬುದ್ಧಿ ಬರುವಂತೆ ಕಾಣುತ್ತಿಲ್ಲ, ಇದೇ ಕಾರಣಕ್ಕೆ ಇಬ್ಬರೂ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿದ್ದಾರೆ. ಜಗತ್ತು ಈ ಇಬ್ಬರ ಕಿತ್ತಾಟ ನೋಡಿ ಭಯದಲ್ಲಿ ಮುಳುಗಿರುವ ಸಮಯದಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಅದು ಏನಂದ್ರೆ, ಉಕ್ರೇನ್ ದೇಶದ ಮೀಟರ್ ಆಫ್ ಮಾಡುವ ಕೆಲಸಕ್ಕೆ ರಷ್ಯಾ ಸೇನೆ ರಣಕಹಳೆ ಮೊಳಗಿಸಿದೆ.

ಹೌದು, ಕೆಲವು ದಿನಗಳ ಹಿಂದಷ್ಟೇ ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಭೀಕರ ದಾಳಿ ನಡೆದಿತ್ತು. ಉಗ್ರರು ರಷ್ಯಾ ರಾಜಧಾನಿಗೆ ನುಗ್ಗಿ ಕಂಡ ಕಂಡವರ ಮೇಲೆ ಗುಂಡಿನ ದಾಳಿಯ ನಡೆಸಿ, ಸುಮಾರು 143 ಜನರನ್ನ ಹತ್ಯೆ ಮಾಡಿದ್ದರು. ಹೀಗಿದ್ದಾಗ ರಷ್ಯಾ ಕೂಡ ರೊಚ್ಚಿಗೆದ್ದು ಆ ಉಗ್ರರನ್ನ ಎತ್ತಾಕ್ಕೊಂಡು ಬಂದಿದೆ. ಆದರೆ ಈ ದಾಳಿಯ ಹಿಂದೆ ಉಗ್ರರು ಮಾತ್ರ ಇಲ್ಲ, ಬದಲಾಗಿ ಉಕ್ರೇನ್ ಸೇನೆಯ ಕೈವಾಡ ಕೂಡ ಇದೆ ಎಂದು ರಷ್ಯಾ ಗಂಭೀರ ಆರೋಪವನ್ನ ಮಾಡುತ್ತಿದೆ. ಈ ಆರೋಪಗಳ ಬೆನ್ನಲ್ಲೇ ಉಕ್ರೇನ್ ವಿರುದ್ಧ ರಷ್ಯಾ ಇದೀಗ ಭೀಕರ ದಾಳಿನ ನಡೆಸಿದೆ.

Ukraine Alleged That Russia Attacked With 99 Drones And The Missiles

99 ಡ್ರೋನ್‌ & ಕ್ಷಿಪಣಿ ಉಡೀಸ್?

ಅಂದಹಾಗೆ ಈಗ ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿರುವ ಪ್ರಕಾರ, ಉಕ್ರೇನ್‌ನ ಇಂಧನ ಮೂಲ ಸೌಕರ್ಯದ ಮೇಲೆ ದೊಡ್ಡ ದಾಳಿ ಆಗಿದೆಯಂತೆ. ಆ ಪ್ರಕಾರ ರಷ್ಯಾ ಸೇನೆಯು, 99 ಡ್ರೋನ್‌ & ಕ್ಷಿಪಣಿಗಳ ಮೂಲಕ ಉಕ್ರೇನ್‌ನ ಹಲವೆಡೆ ಭಾರಿ ದಾಳಿ ನಡೆಸಿದೆ ಎಂಬ ಆರೋಪವು ಕೇಳಿಬಂದಿದೆ. ಹಾಗೇ ಹಲವು ಸೂಕ್ಷ್ಮ ಪ್ರದೇಶದಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಹೀಗೆ ಉಕ್ರೇನ್ ಮಾಡಿರುವ ಆರೋಪದ ಬಗ್ಗೆ ರಷ್ಯಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಹೀಗಿದ್ದರೂ ಉಕ್ರೇನ್ ಮಾತ್ರ ಸಾಲು ಸಾಲು ಆರೋಪ ಮಾಡುತ್ತಲೇ ಇದೆ. ಹೀಗಾಗಿ ಈ ಇಬ್ಬರ ನಡುವೆ ಪರಮಾಣು ಯುದ್ಧ ನಡೆಯುತ್ತಾ? ಎಂಬ ಭಯ ಕಾಡುತ್ತಿದೆ.

ಅಬ್ಬಬ್ಬಾ.. ಏನಿದು ಭೀಕರ ದಾಳಿ?

ಇದೀಗ ಉಕ್ರೇನ್‌ನಲ್ಲಿ 60 ಶಾಹೆದ್‌ ಡ್ರೋನ್‌ಗಳು & 39 ವಿವಿಧ ಕ್ಷಿಪಣಿ ಮೂಲಕ ದಾಳಿಯನ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹೀಗೆ ಉಕ್ರೇನ್ ಒಳಗೆ ಬಂದ ಕ್ಷಿಪಣಿ & ಡ್ರೋನ್ ಪೈಕಿ, 58 ಡ್ರೋನ್‌ & 26 ಕ್ಷಿಪಣಿಗಳನ್ನು ಉಕ್ರೇನ್‌ನ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂಬ ಮಾಹಿತಿಯನ್ನ ಉಕ್ರೇನ್ ಪಡೆಗಳು ನೀಡಿವೆ. ಹೀಗಾಗಿ, ಪರಿಸ್ಥಿತಿ ಸೂಕ್ಷ್ಮವಾಗಿ ಜನರು ಜೀವ ಉಳಿಸಿಕೊಳ್ಳಲು ನರಳುತ್ತಿದ್ದಾರೆ. ಕೇಂದ್ರ ಮತ್ತು ಪಶ್ಚಿಮ ಪ್ರದೇಶಗಳಲ್ಲಿನ ಉಷ್ಣ ಮತ್ತು ಜಲವಿದ್ಯುತ್‌ ಸ್ಥಾವರಗಳನ್ನು ಒಳಗೊಂಡಂತೆ ಇಂಧನ ಮೂಲ ಸೌಕರ್ಯ ಗುರಿಯಾಗಿಸಿ ರಷ್ಯಾ ಈ ದಾಳಿ ಮಾಡಿದೆ ಎಂಬುದು ಉಕ್ರೇನ್ ಆರೋಪ. ಈ ದಾಳಿಯಲ್ಲಿ ಸಾವು & ನೋವು ಕೂಡ ಸಂಭವಿಸಿದೆ.

Ukraine Alleged That Russia Attacked With 99 Drones And The Missiles

ಯುದ್ಧ ಶುರುವಾಗಿದ್ದು ಎಲ್ಲಿಂದ?

2022ರ ಫೆಬ್ರವರಿ 24ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧವನ್ನ ಘೋಷಣೆ ಮಾಡಿತ್ತು. ಹೀಗೆ ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದರೂ ಯುದ್ಧವನ್ನು ನಿಲ್ಲಿಸಲು ರಷ್ಯಾ ತಯಾರಿಲ್ಲ. ಹಾಗೇ ಉಕ್ರೇನ್ ಕೂಡ ಹಠ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಆರೋಪಿಸುತ್ತಿದೆ. ಹೀಗಿದ್ದಾಗ 3ನೇ ಮಹಾಯುದ್ಧ ನಡೆಯುವುದು ಪಕ್ಕಾ? ಎಂಬ ಮಾತುಗಳು ಓಡಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+