ನೀತಿ ಸಂಹಿತೆ ಉಲ್ಲಂಘನೆ: ಕರ್ನಾಟಕದಲ್ಲಿ ದಾಖಲಾದ ಪ್ರಕರಣಗಳೆಷ್ಟು? EC ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 25: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೂ ಮೊದಲೇ ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದನ್ನು ಚುನಾವಣೆ ಆಯೋಗ ಬಹಿರಂಗಪಡಿಸಿದೆ.
ನಾಳೆ ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ.

ಇದಕ್ಕು ಮೊದಲೇ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಪ್ರಕರಣಗಳಡಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ಧ 189 ಪ್ರಕರಣಗಳು (ಬುಧವಾರವರೆಗೆ) ದಾಖಲಾಗಿವೆ ಎಂದು ರಾಜ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರು ದಾಖಲಾಗಲು ಕಾರಣಗಳೇನು?
ಒಟ್ಟು ಪ್ರಕರಣಗಳ ಪೈಕಿ 23 ದೂರುಗಳು ದ್ವೇಷ ಭಾಷಣ ಮಾಡಿದ್ದಕ್ಕಾಗಿ ದಾಖಲಾಗಿವೆ. ಮತದಾರರನ್ನು ಪ್ರಚೋದಿಸಿದಕ್ಕಾಗಿ ಒಟ್ಟು 28 ಪ್ರಕರಣ, ಧಾರ್ಮಿಕ ಸ್ಥಳಗಳ ದುರ್ಬಳಕೆಗಾಗಿ 15 ಕೇಸು, ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡು ನಿಯಮ ಮೀರಿದ್ದಕ್ಕಾಗಿ 15 ಪ್ರಕರಣಗಳು ದಾಖಲಾಗಿವೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪ್ರಮುಖ ಪಕ್ಷಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅವುಗಳ ಪರಿಶೀಲನೆ ನಡೆಯುತ್ತಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಇದು ಶೂನ್ಯ ಸಹಿಷ್ಣುತೆಯನ್ನು ತೋರಿಸಿದೆ. ಇಂತಹ ನೀತಿ ನಿಯಮ ಉಲ್ಲಂಘನೆ ಆದಲ್ಲಿ ಅದರ ಮೇಲ್ವಿಚಾರಣೆಗೆಂದೇ ಕರ್ನಾಟಕದಲ್ಲಿ ವಿಶೇಷ ವೀಕ್ಷಕರು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗಿದೆ ಎಂದು ಇಸಿ ತಿಳಿಸಿದರು.

ದ್ವೇಷದ ಮಾತುಗಳು, ಮತದಾರರಿಗೆ ಆಮೀಷ, ಪ್ರಭಾವ ಬೀರುವಂತಹ ಕೆಲಸಗಳು, ಧಾರ್ಮಿಕ ಸ್ಥಳ, ಇನ್ನಿತರ ಚಿಹ್ನೆಗಳ ದುರುಪಯೋಗ, ಚುನಾವಣಾ ಪ್ರಚಾರದಂತಹ ಕಾರ್ಯಗಳಲ್ಲಿ ಮಕ್ಕಳ ಬಳಕೆ ಸಂಬಂಧಿದಂತೆ ರಾಜಕಾರಣಗಳು ಮತ್ತವರ ಪಕ್ಷಗಳ ವಿರುದ್ಧ ದೂರು ದಾಖಲಾಗಿದೆ.
ಸಾವಿರಾರು ಪ್ರಕರಣಗಳು ದಾಖಲು
ಇದಷ್ಟೇ ಅಲ್ಲದೇ ದಾಖಲೆಯೇ ಇಲ್ಲದ ಅಕ್ರಮ ನಗದು/ಹಣ, ವಸ್ತುಗಳ ಸಾಗಾಣೆ, ಆಮಿಷ ಒಡ್ಡುವುದು, ಮದ್ಯೆ, ಚಿನ್ನಾಭರಣಗಳನ್ನು ಅಧಿಕಾರಿಗಳು ತಪಾಸಣೆ ವೇಳೆ ವಶಕ್ಕೆ ಪಡೆದರು ಸಾವಿರಾರು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರಿಯಲಿದೆ.
ನಾಳೆ ಶುಕ್ರವಾರ ಏಪ್ರಿಲ್ 26ರಂದು ಮೊದಲ ಹಂತದಲ್ಲಿ ಚುನಾವಣೆಗೆ ದಕ್ಷಿಣ ಕರ್ನಾಟಕದ ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಉಡುಪಿ-ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕಿದೆ.












Click it and Unblock the Notifications