ಅಮೆರಿಕ ಆಯ್ತು ಈಗ ಫ್ರಾನ್ಸ್‌ಗೆ ಎಚ್ಚರಿಕೆ ಕೊಟ್ಟ ರಷ್ಯಾ!
ಉಕ್ರೇನ್ ವಿಚಾರದಲ್ಲಿ ಯಾರೇ ಮೂಗು ತೂರಿಸಲು ಬಂದರೂ ರಷ್ಯಾ ಸುಮ್ಮನೆ ಕೂರುತ್ತಿಲ್ಲ. ಅದರ ಬದಲಾಗಿ ತಾನು ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ನೀಡುತ್ತಿದೆ. ಇದರ ಫಲವಾಗಿಯೆ ಈಗಾಗಲೇ ಅಮೆರಿಕ ಒಂದು ಬಾರಿ ಎಚ್ಚರಿಕೆ ಪಡೆದು ತಣ್ಣಗಾಗಿದೆ. ಹೀಗಿದ್ದಾಗ ಫ್ಯಾನ್ಸ್ ಕೂಡ ಕಿರಿಕ್ ಮಾಡಲು ಬಂದು ಸೈಲೆಂಟ್ ಆಗಿದೆ!
ಕಳೆದ 2 ವರ್ಷಗಳಿಂದ ರಷ್ಯಾ & ಉಕ್ರೇನ್ ನಡುವೆ ಯುದ್ಧ, ನಿರಂತರವಾಗಿ ನಡೆಯುತ್ತಿದೆ. 2022ರಲ್ಲಿ ಇಬ್ಬರ ನಡುವೆ ಮೊದಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ನಂತರ ಎರಡು ಕಡೆ, ಇದೇ ರೀತಿ ಫೈಟಿಂಗ್ ನಡೆಯುತ್ತಿದೆ. ಹೀಗಿದ್ದಾಗ ಇಬ್ಬರ ಮಧ್ಯೆ ಕಡ್ಡಿ ಆಡಿಸಲು ಬಂದಿದ್ದ ಹಲವು ದೇಶಗಳಿಗೆ ಈಗಾಗಲೇ ರಷ್ಯಾ ಎಚ್ಚರಿಕೆ ಸಂದೇಶ ನೀಡಿ ಕಳುಹಿಸಿದೆ. ಹೀಗಿದ್ದಾಗಲೇ ಫ್ರಾನ್ಸ್ ಕೂಡ ಸುಮ್ಮನೆ ಇರದೆ ಕಿರಿಕ್ ಮಾಡಲು ಬಂದು ಸರಿಯಾಗೇ ಪೆಟ್ಟು ತಿಂದು ಹೋಗಿದೆ. ಹಾಗಾದರೆ ಇದೀಗ ಅಸಲಿಗೆ ರಷ್ಯಾ ಮತ್ತು ಫ್ರಾನ್ಸ್ ಮಧ್ಯೆ ನಡೆದಿದ್ದಾದರೂ ಏನು ಗೊತ್ತೆ.?

ಉಕ್ರೇನ್‌ಗೆ ಸೇನಾ ನೆರವು?
ಅಷ್ಟಕ್ಕೂ ಇದೀಗ ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಸೇನಾ ನೆರವು ನೀಡಲು ಮುಂದೆ ಬಂದ ಫ್ರಾನ್ಸ್ ರಕ್ಷಣಾ ಸಚಿವರಿಗೆ ರಷ್ಯಾದ ರಕ್ಷಣಾ ಸಚಿವರು ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಉಕ್ರೇನ್ ನೆರವಿಗೆ ನಿಲ್ಲುವ ನೆಪದಲ್ಲಿ, ರಷ್ಯಾ ಶತ್ರುಗಳಿಗೆ ಸಹಾಯ ಮಾಡಿದ್ರೆ ಸರಿ ಇರೋದಿಲ್ಲ ಎಂಬ ಸಂದೇಶ ಕೊಟ್ಟಿದೆ ರಷ್ಯಾ. ಫ್ರಾನ್ಸ್ ಯುರೋಪ್ ಒಕ್ಕೂಟದ ಒಂದು ಪ್ರಮುಖ ದೇಶವಾಗಿದ್ದು, ರಷ್ಯಾ ಈಗ ನೀಡಿರುವ ಎಚ್ಚರಿಕೆ ಸಂದೇಶ ಭಾರಿ ಕುತೂಹಲವನ್ನ ಕೆರಳಿಸಿದೆ. ಹಾಗಾದರೆ ರಷ್ಯಾ ಇದೀಗ ನೀಡಿರುವ ಹೇಳಿಕೆ ಏನು? ಮುಂದೆ ಓದಿ.
ಫ್ರಾನ್ಸ್‌ಗೆ ಚಳಿ ಬಿಡಿಸಿದ ರಷ್ಯಾ!
ಈ ಕುರಿತು ಇದೀಗ ಮಾಹಿತಿ ನೀಡಿರುವ ರಷ್ಯಾ ರಕ್ಷಣಾ ಇಲಾಖೆ, ಫ್ರಾನ್ಸ್ ನಡೆ ಬಗ್ಗೆ ಇದೀಗ ವಿರೋಧ ವ್ಯಕ್ತಪಡಿಸಿದ್ದೇವೆ. ಅಲ್ಲದೆ ತನ್ನ ಸೇನೆ ಉಕ್ರೇನ್‌ಗೆ ಕಳುಹಿಸುವುದರಿಂದಾಗಿ ಫ್ರಾನ್ಸ್‌ಗೆ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚು ಅಂತಲೂ ರಷ್ಯಾ ರಕ್ಷಣಾ ಸಚಿವ ಸೆರ್ಗಿ ಶೋಯಿಗೊ ಅವರು ಫ್ರಾನ್ಸ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೇಕೊರ್ನುಗೆ ಮಾಹಿತಿ ನೀಡಿದ್ದಾರೆ ಎಂದಿದೆ. ಹೀಗಾಗಿ ಉಕ್ರೇನ್ ಯುದ್ಧದಲ್ಲಿ ಫ್ರಾನ್ಸ್ ಮುಂದೆ ಯಾವ ನಡೆ ಇಡಲಿದೆ? ಎಂಬ ಕುತೂಹಲ ಇದೀಗ ಮೂಡಿದೆ. ಅಲ್ಲದೆ ಇದೇ ವೇಳೆ ಮಾಸ್ಕೋ ಉಗ್ರರ ದಾಳಿ ಬಗ್ಗೆಯೂ ಪ್ರಸ್ತಾಪ ಆಗಿದ್ದು, ಈ ಬಗ್ಗೆ ಫ್ರಾನ್ಸ್ ನೀಡಿರುವ ಹೇಳಿಕೆಗೂ ರಷ್ಯಾ ತಿರುಗೇಟು ನೀಡಿದೆ.












Click it and Unblock the Notifications