50 ಸಾವಿರ ಸೈನಿಕರನ್ನು ಕಳೆದುಕೊಂಡ ರಷ್ಯಾ?
ರಷ್ಯಾ VS ಉಕ್ರೇನ್ ನಡುವೆ ಯುದ್ಧದ ಕಾಡ್ಗಿಚ್ಚು ಹೊತ್ತಿ ಬರೋಬ್ಬರಿ 2 ವರ್ಷವೇ ಕಳೆದು ಹೊಗಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಕಾರಣಕ್ಕೆ ಲಕ್ಷಾಂತರ ಜನರು ನರಳಿ ಹೋಗಿದ್ದು ಆರ್ಥಿಕ ಸಂಕಷ್ಟ ಕೂಡ ಶುರುವಾಗಿದೆ. ಅದರಲ್ಲೂ ರಷ್ಯಾ ನಿಧಾನವಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂಬ ಆರೋಪಗಳ ನಡುವೆ ಇದೀಗ ಭಯಾನಕ ವರದಿ ಹೊರಬಿದ್ದಿದೆ. ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
2022ರ ಫೆಬ್ರವರಿ 24 ರಂದು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು ಹೀಗೆ ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ & ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾಗಿ ಲಕ್ಷಾಂತರ ಜನರು ಕೂಡ ಜೀವ ಬಿಟ್ಟಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ರಷ್ಯಾ ತಯಾರಿಲ್ಲ. ಉಕ್ರೇನ್ ಕೂಡ ಹಠನ ಬಿಟ್ಟು ಸಂಧಾನಕ್ಕೆ ಬರ್ತಿಲ್ಲ ಅಂತಾ ರಷ್ಯಾ ಸೇನೆಯು ಆರೋಪಿಸುತ್ತಿದೆ. ಇಷ್ಟೆಲ್ಲದರ ನಡುವೆ ರಷ್ಯಾ ಈವರೆಗೂ ಕಳೆದುಕೊಂಡ ಸೈನಿಕರ ಸಂಖ್ಯೆ ಎಷ್ಟು ಗೊತ್ತೆ?

ಲಕ್ಷ ಲಕ್ಷ ಜನರ ಸಾವು?
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿ ಹೆಚ್ಚಿಸುತ್ತಿದೆ ಹೀಗೆ ಇಬ್ಬರ ಮಧ್ಯೆ ಘೋರ ಕಾಳಗ ನಡೆಯುತ್ತಿದೆ. ಈ ಯುದ್ಧದಿಂದ ಈವರೆಗೆ 50,000 ನಾಗರಿಕರು ಮೃತಪಟ್ಟಿದ್ದು, 70,000 ಉಕ್ರೇನ್ ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ. ಮತ್ತೊಂದು ಕಡೆ ರಷ್ಯಾ ಕೂಡ ದೊಡ್ಡ ಮಟ್ಟದಲ್ಲಿ ಸೈನಿಕರನ್ನು ಕಳೆದುಕೊಂಡಿದೆ ಎಂಬ ಆರೋಪವು ಕೇಳಿಬಂದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 50 ಸಾವಿರ ಸೈನಿಕರನ್ನು ರಷ್ಯಾ ಸೇನೆಯು ಕಳೆದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಣೆ ಮಾಡಿರುವಂತೆ, ಉಕ್ರೇನ್ ವಿರುದ್ಧ ನಡೆಯುತ್ತಿರುವ ಘೋರ ಯುದ್ಧ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅದರಲ್ಲೂ ಅಮೆರಿಕ & ನ್ಯಾಟೋ ಜೊತೆ ಸೇರಲು ಹೊರಟಿದ್ದ ಉಕ್ರೇನ್‌ಗೆ ಯಾವುದೇ ರೀತಿ ವಿನಾಯಿತಿ ಇರುವುದಿಲ್ಲ ಎಂದು ಪುಟಿನ್ ಘೋಷಣೆ ಮಾಡಿದ್ದರು. ಇದೇ ಕಾರಣಕ್ಕೆ ಕಳೆದ 2 ವರ್ಷಗಳಿಂದಲೂ ಇದೇ ಯುದ್ಧ ಭೀಕರವಾಗಿ ನಡೆಯುತ್ತಿದ್ದು. ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರತೆ ಪಡೆದು, ಮತ್ತಷ್ಟು ಅಮಾಯಕರ ಜೀವ ಬಲಿಪಡೆಯುವ ಸಾಧ್ಯತೆ ದಟ್ಟವಾಗಿದೆ. ಆದ್ರೆ ಯುದ್ಧವನ್ನ ನಿಲ್ಲಿಸಲು ಯಾರಿಗೂ ಇಷ್ಟ ಇಲ್ಲವೇನೋ ಅಂತಾ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಬಲು ಜೋರಾಗಿದೆ.












Click it and Unblock the Notifications