ಮೊಮ್ಮಗನ ಖುಷಿಗೆ ಅಡುಗೆಮನೆಗೆ ಎಂಟ್ರಿಕೊಟ್ಟ ತೆಲಂಗಾಣ CM ರೇವಂತ್ ರೆಡ್ಡಿ: ವೈರಲ್ ಆಯ್ತು ಪೂರಿ ಮಾಡ್ತಿರೋ ವಿಡಿಯೋ

ರಾಜಕೀಯ ನಾಯಕರೆಂದರೆ ಯಾವಾಗಲು ಮೀಟಿಂಗ್‌, ಪ್ರೋಗ್ರಾಮ್‌, ಎಲೆಕ್ಷನ್, ಜನರ ಸಮಸ್ಯೆಗಳನ್ನ ಕೇಳಬೇಕು, ಅದಕ್ಕೆ ಪರಿಹಾರ ಹುಡುಕಬೇಕು. ಹೀಗೆ ಪ್ರತಿದಿನ ಅವರಿಗೆ ಬಿಡುವಿರದಷ್ಟು ಕೆಲಸಗಳಿರುತ್ತದೆ. ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿಯಾದ್ರಂತೂ ಕೇಳಬೇಕೆ? ದಿನದ 24 ಗಂಟೆ ಅವರಿಗೆ ಸಾಕಾಗುದಿಲ್ಲ ಎನ್ನುವಷ್ಟು ಅವರ ತಲೆಯ ಮೇಲೆ ಜವಾಬ್ದಾರಿಗಳಿರುತ್ತವೆ. ಆದರೆ, ಈ ಬಿಡುವಿಲ್ಲದ ಕೆಲಸಗಳ ನಡುವೆಯೂ ರಾಜಕಾರಣಿಯೊಬ್ಬರು ತಮ್ಮ ಕುಟುಂಬಕ್ಕಾಗಿ, ಅದರಲ್ಲೂ ವಿಶೇಷವಾಗಿ ತಮ್ಮ ಮುದ್ದಿನ ಮೊಮ್ಮಕ್ಕಳಿಗಾಗಿ ಸಮಯ ಕೊಟ್ಟಾಗ ಅದು ಎಲ್ಲರ ಗಮನ ಸೆಳೆಯುತ್ತದೆ.

ಹೌದು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇದೀಗ ತಮ್ಮ ಮೊಮ್ಮಗನ ಜೊತೆಗೆ ಕಳೆದ ಒಂದು ಸುಂದರ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು,ಇದೀಗ ಭಾರೀ ಸದ್ದು ಮಾಡುತ್ತಿದ್ದಾರೆ. ಅವರು ತಮ್ಮ ಮೊಮ್ಮಗನ ಆಸೆಯಂತೆ ಮುಖ್ಯಮಂತ್ರಿಯವರೇ ಅಡುಗೆಮನೆಯಲ್ಲಿ ಪೂರಿ ಮಾಡುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

Telangana CM Revanth Reddy

ಮೊಮ್ಮಗನ ಹಠಕ್ಕೆ ಮಣಿದ ಸಿಎಂ

ಚಿಕ್ಕ ಮಕ್ಕಳು ಮುದ್ದ ಮುದ್ದಾಗಿ ಹಠಮಾಡಲು ಶುರು ಮಾಡಿದರೆ ಅವರ ಮುಂದೆ ಎಂಥವರೂ ಕರಗಲೇಬೇಕು. ಯಾರೂ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅಧಿಕಾರದಲ್ಲಿದ್ದರೂ ಮನೆಯಲ್ಲಿ ಮಕ್ಕಳ ಮುಂದೆ ಎಲ್ಲರೂ ಕೇವಲ ಪೋಷಕರಷ್ಟೇ ಆಗಿರುತ್ತಾರೆ ಎಂಬುದಕ್ಕೆ ಈ ವಿಡಿಯೋಗಿಂತ ಬೇರೆ ಉದಾಹರಣೆ ಬೇಕೆ?. ರೇವಂತ್ ರೆಡ್ಡಿ ಅವರ ಮೊಮ್ಮಗ ಕೂಡ ಇದ್ದನ್ನೇ ಮಾಡಿದ್ದಾನೆ. ತನಗೆ "ತಾತಾನೇ ಪೂರಿ ಮಾಡಿಕೊಡಬೇಕು" ಎಂದು ಮುದ್ದಾಗಿ ಹಠ ಹಿಡಿದಿದ್ದಾನೆ. ಆತನ ಈ ಬೇಡಿಕೆಯನ್ನು ತಳ್ಳಿಹಾಕಲಾಗದ ಮುಖ್ಯಮಂತ್ರಿಗಳು, ತಮ್ಮೆಲ್ಲಾ ಕೆಲಸವನ್ನಾ ಬದಿಗಿಟ್ಟು, ಒಬ್ಬ ಮೊಮ್ಮಗನಿಗೆ ತಾತನಾಗಿ ಅಡುಗೆ ಮನೆಗೆ ಹೋಗಿದ್ದಾರೆ. ಇದು ಅವರ ಸರಳತೆಯನ್ನು ಹಾಗೂ ಕುಟುಂಬದ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಅಡುಗೆಮನೆಯಲ್ಲಿ ಸಿಎಂ ರೇವಂತ್ ರೆಡ್ಡಿ ಕೈಚಳಕ

ಸ್ವತಃ ಮುಖ್ಯಮಂತ್ರಿಯವರೇ ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ಕ್ಯೂಟ್ ವಿಡಿಯೋದಲ್ಲಿ, ಮುಖ್ಯಮಂತ್ರಿಗಳು ಅಡುಗೆಮನೆಯಲ್ಲಿ ನಿಂತು ಹಿಟ್ಟು ಲಟ್ಟಿಸುತ್ತಿರುವುದನ್ನು ನೋಡಬಹುದು. ಅವರ ಪಕ್ಕದಲ್ಲೇ ಅಡುಗೆಮನೆಯ ಕೌಂಟರ್ ಮೇಲೆ ಕುಳಿತಿರುವ ಮೊಮ್ಮಗ, ತಾತ ಪೂರಿ ಮಾಡುವುದನ್ನು ಆಸೆಕಣ್ಣಿನಿಂದ ನೋಡುತ್ತಿದ್ದಾನೆ. ಅಷ್ಟೇ ಅಲ್ಲ, ತಾನೂ ಕೂಡ ತನ್ನ ಪುಟ್ಟ ಕೈಗಳಿಂದ ಹಿಟ್ಟನ್ನು ಮುಟ್ಟಿ ಪೂರಿ ಮಾಡುತ್ತ ಆಟವಾಡುತ್ತಿದ್ದಾನೆ. ಎಣ್ಣೆ ಕಾದಿರುವ ಕಡಾಯಿಗೆ ಲಟ್ಟಿಸಿದ ಹಿಟ್ಟನ್ನು ಹಾಕಿ, ಕೆಂಪಗೆ ಕರಿದು ತೆಗೆಯುತ್ತಿರುವ ದೃಶ್ಯವು ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ. ಒಬ್ಬ ಮುಖ್ಯಮಂತ್ರಿಯ ಇಂತಹ ಸರಳ ರೂಪ ಕಂಡು ಜನರು ಅಚ್ಚರಿಪಟ್ಟಿದ್ದಾರೆ.

ವೈರಲ್ ವಿಡಿಯೋ ಬಗ್ಗೆ ಸಿಎಂ ಹೇಳಿದ್ದೇನು?

ಈ ವಿಡಿಯೋಗೆ ರೇವಂತ್ ರೆಡ್ಡಿ ಅವರು ತೆಲುಗಿನಲ್ಲಿ ಬಹಳ ಸುಂದರವಾದ ಹಾಗೂ ಭಾವನಾತ್ಮಕವಾದ ಶೀರ್ಷಿಕೆಯೊಂದನ್ನು ಬರೆದುಕೊಂಡಿದ್ದಾರೆ. "ತಾತಾ, ನೀವು ಪೂರಿ ಮಾಡಿದರೆ ಮಾತ್ರ ನಾನು ತಿನ್ನುತ್ತೇನೆ.. ಎಂದು ಮೊಮ್ಮಗ ಹಠ ಮಾಡಿದಾಗ ನಾನು ಇಲ್ಲವೆನ್ನಲು ಹೇಗೆ ಸಾಧ್ಯ? ನನ್ನ ಪಕ್ಕದಲ್ಲೇ ನಿಂತು ಹಿಟ್ಟಿನ ಉಂಡೆ ಹಿಡಿದುಕೊಂಡಿದ್ದ ನನ್ನ ಮೊಮ್ಮಗ, ನನ್ನ ಮುಖದಲ್ಲಿ ಕಳೆದು ಹೋಗಿದ್ದ ನಗು, ಮತ್ತು ನಾನು ಮಾಡಿದ ಆಕಾರವಿಲ್ಲದ ಒಂದು ಡಜನ್ ಪೂರಿಗಳು.. ಸಾರ್ವಜನಿಕ ಜೀವನದ ಈ ಬಿಡುವಿಲ್ಲದ ಕೆಲಸದ ನಡುವೆ, ನನ್ನ ಮೊಮ್ಮಗನೊಂದಿಗೆ ಪೂರಿ ಮಾಡುತ್ತಾ ಕಳೆದ ಈ ಕೆಲವು ಕ್ಷಣಗಳು ನನ್ನ ಪಾಲಿನ ಅತ್ಯಂತ ಸಿಹಿ ನೆನಪುಗಳು" ಎಂದು ಅವರು ಬರೆದುಕೊಂಡಿದ್ದಾರೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಒಬ್ಬ ಬಳಕೆದಾರರು "ತಾತಾ ಮತ್ತು ಮೊಮ್ಮಗನ ಅದ್ಭುತವಾದ ತಂಡವಿದು" ಎಂದು ಹೊಗಳಿದ್ದಾರೆ. ಮತ್ತೊಬ್ಬರು "ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಸೆಲೆಬ್ರಿಟಿಯಾಗಲಿ, ಮುಖ್ಯಮಂತ್ರಿಯಾಗಲಿ ಆತ ತನ್ನ ಮೊಮ್ಮಗನಿಗೆ ಕೇವಲ ತಾತಾ ಮಾತ್ರ. ಆ ಪುಟ್ಟ ಬಾಲಕ ಆದೇಶ ಮಾಡಿದರೆ ಅದನ್ನು ಪಾಲಿಸಲೇಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಸಾರ್, ನಿಮ್ಮ ಮೊಮ್ಮಗನ ಆಸೆಯನ್ನು ನೀವು ಹೇಗೆ ತಾಳ್ಮೆಯಿಂದ ಈಡೇರಿಸಿದಿರೋ, ಅದೇ ರೀತಿ ನಮ್ಮ ಜನತೆಯನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ" ಎಂದು ಬರೆದಿದ್ದಾರೆ. "ಈ ಪುಟ್ಟ ಬಾಲಕನೇ ರೇವಂತ್ ಅಣ್ಣನ ನಿಜವಾದ ಸ್ಟ್ರೆಸ್ ಬಸ್ಟರ್" ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+