ಜಪಾನ್ ಕಂಪನಿಗಳ ಶಿಸ್ತಿಗೆ ಭಾರತೀಯ ಫಿದಾ: ಎಕ್ಸ್‌ಟ್ರಾ ಕೆಲಸ ಮಾಡಿದ್ರೆ ಸಿಗುತ್ತೆ ದುಡ್ಡು, ಲಾಗ್‌ಔಟ್ ಆದ್ರೆ ಬರಲ್ಲ ಬಾಸ್ ಕಾಲ್

ವಿದೇಶಗಳಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಾಣುವವರ ಸಂಖ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಲೇ ಇದೆ. ವಿದೇಶದಲ್ಲಿ ಕೆಲಸ ಮಾಡಿದ್ರೆ ನಮಗೆ ಆಕರ್ಷಕ ಸ್ಯಾಲರಿ ಸಿಗುತ್ತದೆ ಅಥವಾ ಅಲ್ಲಿನ ಕಂಪೆನಿಗಳ ವರ್ಕ್‌ ಕಲ್ಚರ್‌ ಚೆನ್ನಾಗಿರುತ್ತೆ ಇಂದು ಹಲವರು ಅಂದುಕೊಂಡಿರುತ್ತಾರೆ. ಅದರಲ್ಲೂ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಹೆಸರಾಗಿರುವ ಜಪಾನ್ ದೇಶವು ಉದ್ಯೋಗಿಗಳನ್ನು ಕೈಬೀಸಿ ಕರೆಯುತ್ತಿದೆ.

ಆದರೆ, ಜಪಾನ್‌ನಲ್ಲಿ ಕೇವಲ ಕೆಲಸ ಪಡೆಯುವುದು ಮಾತ್ರವಲ್ಲ, ಅಲ್ಲಿನ ವಿಶಿಷ್ಟವಾದ ಆಫೀಸ್‌ ಕಲ್ಚರ್‌ ಅನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಜಪಾನ್ ದೇಶದ ಕಾರ್ಪೊರೇಟ್ ಜಗತ್ತು ಶಿಸ್ತು, ಪರಸ್ಪರ ಗೌರವ, ಮತ್ತು ನಮ್ಮಲ್ಲಿರುವ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತದಿಂದ ಹೋಗಿ 10 ವರ್ಷದಿಂದ ಜಪಾನ್‌ನಲ್ಲಿ ಉದ್ಯೋಗದಲ್ಲಿರುವ ಅಂಕಿತ್ ಪುರೋಹಿತ್ ಎಂಬುವವರು ಅಲ್ಲಿನ ಕಚೇರಿ ವ್ಯವಸ್ಥೆಯ ಕೆಲವೊಂದು ಆಸಕ್ತಿದಾಯಕ ಸತ್ಯಗಳನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Japanese Office Culture

ಜಪಾನ್ ಕಚೇರಿಗಳಲ್ಲಿ ಸಮಯ ಪ್ರಜ್ಞೆ ತುಂಬ ಮುಖ್ಯ

ಜಪಾನಿನಲ್ಲಿ ಸಮಯಕ್ಕೆ ತುಂಬ ಮಹತ್ವ ನೀಡುತ್ತಾರೆ. ಅಲ್ಲಿ ಕಚೇರಿಗೆ ತಡವಾಗಿ ಬರುವುದನ್ನು ಯಾವುದೇ ಕಾರಣಕ್ಕೂ ಯಾರು ಸಹಿಸುವುದಿಲ್ಲ. ಒಂದು ವೇಳೆ ನಿಮ್ಮ ಆಫೀಸ್‌ ಸಮಯ ಬೆಳಿಗ್ಗೆ 9 ಗಂಟೆಯಾಗಿದ್ದರೆ, ನೀವು 9 ಗಂಟೆಗೆ ಆಫೀಸ್‌ ಒಳಗೆ ಬರುವುದಲ್ಲ, ಬದಲಾಗಿ 9 ಗಂಟೆಯ ಒಳಗೆ ಆಫೀಸ್‌ಗೆ ಬಂದು ನಿಮ್ಮ ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸಮಾಡಲು ರೆಡಿಯಾಗಿರಬೇಕು. ಅಂದರೆ ನಿಗದಿತ ಸಮಯಕ್ಕಿಂತ ಕನಿಷ್ಠ 10-15 ನಿಮಿಷ ಮುಂಚಿತವಾಗಿ ತಲುಪುವುದು ಅಲ್ಲಿ ಕಡ್ಡಾಯ. ಆಫೀಸ್‌ಗೆ ಬರುವಾಗ ದಾರಿಯಲ್ಲಿ ಅಂದರೆ ರೈಲು ಅಥವಾ ಅಲ್ಲಿನ ಸಾರಿಗೆ ವ್ಯವಸ್ಥೆಯಲ್ಲಿ ಏನಾದರೂ ಸಣ್ಣ ಲೇಟ್‌ ಆಗುವ ಸಾಧ್ಯತೆ ಇದ್ದರೆ, ಅದನ್ನು ಮೊದಲೇ ತಂಡಕ್ಕೆ ತಿಳಿಸಬೇಕು. ಈ ಶಿಸ್ತು ಅಲ್ಲಿನ ಉದ್ಯೋಗಿಗಳಲ್ಲಿದೆ.

ಜಪಾನ್‌ನಲ್ಲಿ ಹೆಚ್ಚುವರಿ ಕೆಲಸಕ್ಕೆ ವೇತನ

ಉದ್ಯೋಗಿಗಳು ಕಚೇರಿ ಸಮಯ ಮುಗಿದ ಮೇಲೂ ಗಂಟೆಗಟ್ಟಲೆ ಹೆಚ್ಚುವರಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ, ಬೇರೆ ದೇಶಗಳಲ್ಲಿ ಆದರೆ ಅದಕ್ಕೆ ಯಾವುದೇ ಸೂಕ್ತ ಭತ್ಯೆ ಸಿಗುವುದಿಲ್ಲ. ಆದರೆ ಜಪಾನ್‌ನಲ್ಲಿ ಹಾಗಾಲ್ಲ. ನೀವು ಆಫೀಸ್‌ ಲಾಗ್‌ಔಟ್ ಸಮಯದ ನಂತರ ಕೇವಲ 15 ನಿಮಿಷಗಳ ಕಾಲ ಹೆಚ್ಚು ಕೆಲಸ ಮಾಡಿದರೂ ಸಹ, ಕಂಪನಿಯು ಆ 15 ನಿಮಿಷಕ್ಕೆ ತಕ್ಕ ಇನ್‌ಸೆಂಟಿವ್ ಅಥವಾ ಓವರ್‌ಟೈಮ್ ವೇತನವನ್ನು ಕಡ್ಡಾಯವಾಗಿ ಪಾವತಿಸುತ್ತದೆ. ಇಷ್ಟೇ ಅಲ್ಲದೆ, ನೀವು ಆಫೀಸಿನಿಂದ ಒಮ್ಮೆ ಲಾಗ್‌ಔಟ್ ಮಾಡಿದರೆ, ನಿಮ್ಮ ಮ್ಯಾನೇಜರ್ ನಿಮಗೆ ಫೋನ್ ಮಾಡಿ ಯಾವುದೇ ಕೆಲಸವನ್ನು ಕೊಡುವುದಿಲ್ಲ. ವಿಕೆಂಡ್‌ ಅಥವಾ ರಜಾದಿನಗಳಲ್ಲಂತೂ ನಿಮ್ಮ ವೈಯಕ್ತಿಕ ಜೀವನಕ್ಕೆ ಜಪಾನಿನಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಗೌರವ ಮತ್ತು ಭೇದಭಾವವಿಲ್ಲದ ಸಂಸ್ಕೃತಿ

ಜಪಾನಿ ಆಫೀಸ್‌ನಲ್ಲಿ ಹುದ್ದೆಗಿಂತ ಹೆಚ್ಚಾಗಿ ವ್ಯಕ್ತಿಗೆ ಮತ್ತು ಅವರ ಶ್ರಮಕ್ಕೆ ಹೆಚ್ಚಿನ ಗೌರವ ನೀಡಲಾಗುತ್ತದೆ. ಅಲ್ಲಿ ವೈಯಕ್ತಿಕ ಸಾಧನೆಗಿಂತ 'ಟೀಮ್ ವರ್ಕ್‌ನ ಯಶಸ್ಸಿಗೆ ಮೊದಲ ಆದ್ಯತೆ. ಇನ್ನೂ ವಿಶೇಷವೆಂದರೆ, ಅಲ್ಲಿ ದೊಡ್ಡ ಕಂಪನಿಗಳ ಸಿಇಒ ಆದ್ರೂ ಕೂಡ ಅವರು ಸಾಮಾನ್ಯ ಉದ್ಯೋಗಿಗಳಂತೆ ಮೆಟ್ರೋ ಅಥವಾ ಲೋಕಲ್ ಟ್ರೈನ್‌ಗಳಲ್ಲೇ ಆಫೀಸ್‌ಗೆ ಬರುತ್ತಾರೆ. ಹೀಗಾಗಿ ಯಾರು ಕಾರಿನಲ್ಲಿ ಬರುತ್ತಾರೆ, ಯಾರು ಬೈಕ್‌ನಲ್ಲಿ ಬರುತ್ತಾರೆ ಎಂಬ ಭೇದಭಾವ ಅಥವಾ ಹೋಲಿಕೆ ಅಲ್ಲಿನ ಕಚೇರಿಗಳಲ್ಲಿ ಇರುವುದಿಲ್ಲ.

ಅಷ್ಟೇ ಅಲ್ಲದೇ, ಮಧ್ಯಾಹ್ನ 12 ರಿಂದ 1 ಗಂಟೆಯವರೆಗಿನ ಲಂಚ್ ಬ್ರೇಕ್ ಅನ್ನು ಉದ್ಯೋಗಿಯ ಸಂಪೂರ್ಣ ವೈಯಕ್ತಿಕ ಸಮಯವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಜಪಾನಿಯರು ಮನೆಯಿಂದ ಟಿಫಿನ್ ಬಾಕ್ಸ್ ತರುವುದಕ್ಕಿಂತ, ಅಲ್ಲಿನ ಇಷ್ಟವಾದ ಕಡೆಯಿಂದ ಊಟ ಖರೀದಿಸಿ ತಿನ್ನಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲದೆ, ಕಚೇರಿಯ ಲಿಫ್ಟ್ ಬಳಸುವಾಗಲೂ ಕೂಡ ವಿಶಿಷ್ಟ ನಿಯಮವಿರುತ್ತದೆ.ಅದೇನೆಂದರೆ ಯಾರು ಲಿಫ್ಟ್ ಬಟನ್ ಹತ್ತಿರ ನಿಂತಿರುತ್ತಾರೋ ಅವರು ಉಳಿದೆಲ್ಲಾ ಸಹೋದ್ಯೋಗಿಗಳು ಇಳಿಯುವವರೆಗೂ ಬಟನ್ ಒತ್ತಿ ಹಿಡಿದು, ಕೊನೆಗೆ ತಾವು ಹೊರಬರುತ್ತಾರೆ. ಈ ಸಣ್ಣ ಸಣ್ಣ ಹವ್ಯಾಸಗಳು ಅಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಉತ್ತಮಗೊಳಿಸಿವೆ.

ಸೋಷಿಯಲ್ ಮೀಡಿಯಾ ಕಾಮೆಂಟ್‌ಗಳು

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆ ಸುರಿಸುತ್ತಿದ್ದಾರೆ. ಅದರಲ್ಲಿ ಒಬ್ಬರು,"ನಮ್ಮ ದೇಶದ ಐಟಿ ಕಂಪನಿಗಳು ಕೂಡ ಜಪಾನ್‌ನ ಈ ಓವರ್‌ಟೈಮ್ ಪಾಲಿಸಿಯನ್ನು ನೋಡಿ ಕಲಿಯಬೇಕು!ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು, ಲಾಗ್‌ಔಟ್ ಆದಮೇಲೆ ಬಾಸ್‌ನಿಂದ ಯಾವುದೇ ಕರೆಗಳು ಬರಲ್ಲ ಅನ್ನೋ ನಿಯಮ ಇದೆಯಲ್ಲ, ಅದು ನಿಜಕ್ಕೂ ಅದ್ಭುತ. ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಇದು ತುಂಬಾ ಮುಖ್ಯ ಎಂದು ಕಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+