ರಷ್ಯಾ ಮೇಲೆ ಉಗ್ರರ ದಾಳಿ ಮಾಡಿಸಿದ್ದು ಉಕ್ರೇನ್?

ಮೈಚಳಿ ಬಿಟ್ಟು ಒಬ್ಬರನ್ನೊಬ್ಬರು ಹತ್ಯೆ ಮಾಡುತ್ತಿರುವ ರಷ್ಯಾ & ಉಕ್ರೇನ್ ಯುದ್ಧ ಈಗ ಕೈಮೀರಿ ಹೋಗಿದೆ. ಅದರಲ್ಲೂ ಯುದ್ಧ ಶುರುವಾಗಿ 2 ವರ್ಷ ಮುಗಿದಿರುವ ಸಮಯದಲ್ಲೇ ಭಯಾನಕ ಸತ್ಯ ಹೊರಬಿದ್ದಿದೆ. ಅದು ಏನೆಂದರೆ ರಷ್ಯಾದಲ್ಲಿ ನಡೆದ ಉಗ್ರರ ದಾಳಿ ಹಿಂದೆ ಉಕ್ರೇನ್ ಕೈವಾಡ ಇದೆ ಎಂದು ಪುಟಿನ್ ಗಂಭೀರ ಆರೋಪವನ್ನ ಮಾಡಿದ್ದಾರೆ. ಈ ಮಧ್ಯೆ ರಷ್ಯಾದಲ್ಲಿ 133 ಜನರ ಸಾವಿಗೆ ಕಾರಣವಾದ ಉಗ್ರರು ಉಕ್ರೇನ್‌ಗೆ ಓಡುವಾಗ ರಷ್ಯಾ ಸೇನೆ ಕೈಗೆ ಸಿಕ್ಕಿಬಿದಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಲವೇ ದಿನದಲ್ಲಿ ಮುಗಿದು ಹೋಗುತ್ತೆ ಅಂತಾ ಅಂದುಕೊಂಡ ರಷ್ಯಾ ಮತ್ತು ಉಕ್ರೇನ್ ಯುದ್ಧ ಒಂದೂವರೆ 2 ವರ್ಷ ಮುಗಿಸಿದೆ. ಈ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆ ಇಲ್ಲ. ರಷ್ಯಾ ಕೂಡ ಯುದ್ಧವನ್ನು ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಹೀಗಿದ್ದಾಗಲೇ ಉಗ್ರರು, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಕ್ತದ ನದಿಯನ್ನೇ ಹರಿಸಿದ್ದಾರೆ. ಪರಿಸ್ಥಿತಿ ಕೈಮೀರಿದ್ದು ರಷ್ಯಾ ಪ್ರಜೆಗಳು ಬೆಚ್ಚಿಬಿದ್ದಿದ್ದಾರೆ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಅಕ್ಷರಶಃ ಆಕ್ರೋಶ ಹೊರಹಾಕಿದ್ದು, ರಷ್ಯಾದ ಮೇಲೆ ದಾಳಿ ಮಾಡಿದವರನ್ನು ಸುಮ್ಮನೆ ಬಿಡಲ್ಲ ಎಂದಿದ್ದಾರೆ.

Russia And Ukraine War Become More Difficult After Terrorist Attack in Moscow

133 ಜನರನ್ನು ಕೊಂದ ಉಗ್ರರು

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಗ್ರರ ದಾಳಿ ನಡೆದಿದೆ. ಮಾಸ್ಕೋ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ಇದ್ದ ಜಾಗಕ್ಕೆ ನುಗ್ಗಿದ್ದ ಉಗ್ರರು ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ ನೂರಾರು ಜನರನ್ನು ಹತ್ಯೆ ಮಾಡಿದ್ದಾರೆ. ಸಾವಿರಾರು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 133 ಜನರನ್ನು ಐಎಸ್‌ಐಎಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ 187 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಸಮಯದಲ್ಲಿ, ದಾಳಿ ನಡೆಸಿರುವ ಒಟ್ಟು 4 ಉಗ್ರರನ್ನು ಉಕ್ರೇನ್ ಗಡಿ ಸಮೀಪದಲ್ಲಿ ರಷ್ಯಾ ಸೇನೆ ಅರೆಸ್ಟ್ ಮಾಡಿದೆ ಎಂದು ಆರೋಪಿಸಲಾಗಿದೆ.

ರಷ್ಯಾ ಉಗ್ರರ ದಾಳಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ ಹೀಗಾಗಿ ಉಗ್ರರ ದಾಳಿಯನ್ನ ರಷ್ಯಾ ಸರ್ಕಾರ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿದೆ. ಈ ಕುರಿತು ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ ರಷ್ಯಾದ ಅಧ್ಯಕ್ಷ ಪುಟಿನ್, ಗಾಯಾಳು ರಕ್ಷಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಇದು ಒಂದು ಕಡೆ ಇರುವಾಗಲೇ, ರಷ್ಯಾದಲ್ಲಿ ನಡೆದಿರುವ ಈ ದಾಳಿಯ ಹಿಂದೆ ಉಕ್ರೇನ್ ಕೈವಾಡ ಇದೆ ಎಂಬ ಆರೋಪ ಮಾಡಲಾಗಿದೆ. ಈ ಮೂಲಕ ಪರಿಸ್ಥಿತಿ ಕೂಡ ಕೈಮೀರಿದೆ.

Russia And Ukraine War Become More Difficult After Terrorist Attack in Moscow

ಉಕ್ರೇನ್ ಮೂಲ ಹುಡುಕುತ್ತಾ ರಷ್ಯಾ?

ರಷ್ಯಾ ಇದೀಗ ಮಾಡಿರುವ ಆರೋಪ ನಿಜವಾದರೆ ಯುದ್ಧ ಮತ್ತೊಂದು ಭೀಕರ ಹಂತಕ್ಕೂ ತಲುಪುವ ಆತಂಕ ಮನೆಮಾಡಿದೆ. ಯಾಕಂದ್ರೆ ರಷ್ಯಾ ಹೇಳುತ್ತಿರುವ ಪ್ರಕಾರ, ಮಾಸ್ಕೋದ ಗುಂಡಿನ ದಾಳಿ ಹಿಂದೆ ಉಕ್ರೇನ್ ಕೈವಾಡ ಇದ್ದರೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ರಷ್ಯಾ ಸೇನೆ ಕೂಡ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಉಕ್ರೇನ್‌ನ ನೆಲದಲ್ಲಿ ಕಾರ್ಯಾಚರಣೆ ತೀವ್ರಗೊಳಿಸುವ ಮುನ್ಸೂಚನೆ ಕೂಡ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+