ಕಿಂಗ್ ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಭರ್ಜರಿ ಗೆಲುವು!
ಆರ್‌ಸಿಬಿ ತಂಡಕ್ಕೆ ಹಿಡಿದಿದ್ದ ಸೋಲಿನ ಗ್ರಹಣ ಇಂದು ಮುಗಿದಿದೆ. ಸತತ 6 ಸೋಲುಂಡ ನಮ್ಮ ಬೆಂಗಳೂರಿನ ಆರ್‌ಸಿಬಿ ತಂಡ, ಸಾಕಷ್ಟು ಒತ್ತಡದಲ್ಲಿ ಇತ್ತು. ಆದ್ರೂ ಒತ್ತಡಗಳನ್ನ ಎದುರಿಸಿ ನಿಂತ ನಮ್ಮ ಆರ್‌ಸಿಬಿ ತಂಡ ಭರ್ಜರಿಯಾಗಿ ಗೆಲುವಿನ ರಣಕಹಳೆ ಮೊಳಗಿಸಿದೆ. ಅದರಲ್ಲೂ ಕಿಂಗ್ ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಭರ್ಜರಿ ಗೆಲುವು ಸಿಕ್ಕಿದೆ ಅಂತಿದ್ದಾರೆ, ಬೆಂಗಳೂರು ತಂಡದ ಅಭಿಮಾನಿಗಳು.
ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಇಂದು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಣ್ಣು ಮುಚ್ಚಿಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗೆ ಬ್ಯಾಟಿಂಗ್ ಶುರು ಮಾಡಿದ ಆರ್‌ಸಿಬಿ ಬೆಂಗಳೂರು ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಈ ಸಮಯದಲ್ಲೇ ಮಧ್ಯದಲ್ಲಿ ಪರಿಸ್ಥಿತಿ ಒಂದಷ್ಟು ಆತಂಕ ಮೂಡಿಸಿತ್ತು. ಆದರೆ ಆಗ ಕೊಹ್ಲಿ ಅಂದ್ರೆ ಕಿಂಗ್ ವಿರಾಟ್ ಕೊಹ್ಲಿ ಅವರು ಗಟ್ಟಿಯಾಗಿ ನಿಂತು ಇಡೀ ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಬುಡವನ್ನೇ ಅಲ್ಲಾಡಿಸಿದರು. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 51 ರನ್ ಗಳಿಸಿದರು.

ಕಷ್ಟದಲ್ಲಿ ಕಿಂಗ್ ಆದ ಕೊಹ್ಲಿ!
ಇನ್ನು ಆರ್‌ಸಿಬಿ ತಂಡ ಉತ್ತಮ ಆರಂಭ ಪಡೆದರೂ, ನಂತರ ಸಮಸ್ಯೆಯ ಸುಳಿಯಲ್ಲಿಯೆ ಸಿಲುಕಿತ್ತು. ಆದರೆ ಆಗ ವಿರಾಟ್ ಕೊಹ್ಲಿ ಅವರು ಕೈಹಿಡಿದ ಕಾರಣಕ್ಕೆ ಪಂದ್ಯದ ಗತಿಯೇ ಬದಲಾಗಿ ಹೋಗಿತ್ತು, ವಿರಾಟ್ ಕೊಹ್ಲಿ ಸಿಡಿಸಿದ 51 ರನ್ ಆರ್‌ಸಿಬಿ ತಂಡಕ್ಕೆ ನೆರವಾಗಿತ್ತು. ಪಕ್ಕಾ ಪ್ಲಾನ್ ಮಾಡಿ ಇಂದು ಆರ್‌ಸಿಬಿ ತಂಡ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಂತೆ ಕಾಣುತ್ತಿತ್ತು. ಹೀಗಾಗಿ ಹೈದರಾಬಾದ್ ಬೌಲಿಂಗ್ ದಾಳಿಯನ್ನ ಪಕ್ಕಾ ಚಚ್ಚಿ ಬಿಸಾಡಿತ್ತು.
ಹೀಗೆಯೇ ನೋಡ ನೋಡುತ್ತಲೇ ಕುಸಿದು ಹೋಗುತ್ತಿದ್ದ ಆರ್‌ಸಿಬಿ ತಂಡದ ಸ್ಕೋರ್‌ಗೆ ಕಿಂಗ್ ವಿರಾಟ್ ಕೊಹ್ಲಿ ಬೆಂಬಲವಾಗಿ ನಿಂತರು. ಆ ಮೂಲಕ ಆರ್‌ಸಿಬಿ ತಂಡ, 206 ರನ್ ಗಳಿಸಿ ಹೈದರಬಾದ್ ತಂಡಕ್ಕೆ ಸವಾಲಿನ ಮೊತ್ತ ನೀಡುವಲ್ಲಿ ವಿರಾಟ್ ಕೊಹ್ಲಿ ನೆರವಾದರು. ಆದ್ರೆ 171 ರನ್‌ಗೆ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿತ್ತು. ಹೀಗೆ ಭರ್ಜರಿ 35 ರನ್ ಅಂತರದ ಗೆಲುವಿನ ಮೂಲಕ ಆರ್‌ಸಿಬಿ ತನ್ನ ಪ್ಲೇಆಫ್ ಕನಸನ್ನು ಈಗ ಕೂಡ ಜೀವಂತವಾಗಿ ಉಳಿಸಿಕೊಂಡಿದೆ.
2024ರಲ್ಲಿ ಆರ್‌ಸಿಬಿ ಕಪ್ ಗೆಲ್ಲುತ್ತಾ?
ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ಈಗಲೂ ಅವಕಾಶ ಇದೆ. ಆದರೆ ಆರ್‌ಸಿಬಿ ತಂಡ ಇನ್ನುಳಿದ 5ಕ್ಕೆ 5 ಪಂದ್ಯಗಳನ್ನ ಗೆಲ್ಲಲೇಬೇಕು. ಇದು ಮಾತ್ರವಲ್ಲ ರಾಜಸ್ಥಾನ ರಾಯಲ್ಸ್ & ಕೆಕೆಆರ್ ತಂಡಗಳು ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲಬೇಕು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಕೇವಲ 2 ಪಂದ್ಯ ಮಾತ್ರ ಗೆಲ್ಲಬೇಕು. ಆ ನಂತರ ಲಖನೌ ತಂಡವು ಕೇವಲ ಒಂದೇ ಒಂದು ಪಂದ್ಯ ಗೆಲ್ಲಬೇಕು. ಆಗ ಮಾತ್ರ ಆರ್‌ಸಿಬಿ ತಂಡಕ್ಕೆ ಮುಂದಿನ ಹಂತ ತಲುಪಲು ಅವಕಾಶ ಸಿಗಲಿದೆಯಂತೆ. ಈ ಬಗ್ಗೆ ತಜ್ಞರು ಚರ್ಚೆಯ ಮಾಡಿದ್ದು, ಆರ್‌ಸಿಬಿ ಅಭಿಮಾನಿಗಳು ಇದರಿಂದ ಫುಲ್ ಖುಷ್ ಆಗಿದ್ದಾರೆ.
ಕೊಹ್ಲಿ ವಿರೋಧಿಗಳ ಮಾತು ಏನು?
ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಗೆದ್ದಿದ್ದರೂ ಕೊಹ್ಲಿ ವಿರುದ್ಧವಾಗಿ, ಕೆಲವರು ಇದೀಗ ಮಾತನಾಡುತ್ತಿದ್ದಾರೆ. ಈ ವಿಚಾರ ದೊಡ್ಡ ಸದ್ದನ್ನು ಕೂಡ ಮಾಡುತ್ತಿದೆ. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಹೀಗಿದ್ದರೂ ವಿರಾಟ್ ಕೊಹ್ಲಿ, ಸ್ಲೋ ಬ್ಯಾಟಿಂಗ್ ಆಡಿದ್ದಾರೆ ಅಂತಾ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವಿಚಾರದ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು. ವಿರಾಟ್ ಕೊಹ್ಲಿ ವಿರೋಧಿ ಗ್ಯಾಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಲಿ ಅಂತಾ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಚಳಿ ಬಿಡಿಸುತ್ತಿದೆ.












Click it and Unblock the Notifications