Get Updates
Get notified of breaking news, exclusive insights, and must-see stories!

ಇರಾನ್‌ ಮಿತ್ರ ರಾಷ್ಟ್ರ ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸುವ ಮೂಲಕ ಸಂಚಲನ

ರಷ್ಯಾ ಶುಕ್ರವಾರ ತನ್ನ ಕಪುಸ್ಟಿನ್ ಯಾರ್ ಶ್ರೇಣಿಯಿಂದ ಅತ್ಯಂತ ರಹಸ್ಯವಾದ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಅನ್ನು ಪರೀಕ್ಷಿಸಿದೆ ಎಂದು ವರದಿಯಾಗಿದೆ.

ರಷ್ಯಾದ ಮಾಧ್ಯಮ ಆರ್ಟಿ ಪ್ರಕಾರ, ಈ ಕ್ಷಿಪಣಿ ಪರಮಾಣು ದಾಳಿಯ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ರಕ್ಷಣಾ ಸಚಿವಾಲಯ ಈ ಕ್ಷಿಪಣಿ ದಾಳಿಯನ್ನು ಖಚಿತ ಪಡಿಸಿದೆ. ಈ ಕ್ಷಿಪಣಿಯಿಂ ರಷ್ಯಾದ ಭಧ್ರತೆ ಮತ್ತಷ್ಟು ಬಲಗೊಳ್ಳಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಹೇಳಿದೆ. ರಷ್ಯಾದ ಈ ಪರೀಕ್ಷೆಯಿಂದಾಗಿ ಉಕ್ರೇನ್ ಮತ್ತು ಅಮೆರಿಕ ಹೆಚ್ಚು ಉದ್ವಿಗ್ನಗೊಂಡಿವೆ. ಇದು ಇಸ್ರೇಲ್‌ನ ಆತಂಕದ ವಿಷಯವೂ ಆಗಿದೆ. ಏಕೆಂದರೆ ರಷ್ಯಾ ಮತ್ತು ಇರಾನ್ ಆಪ್ತ ಸ್ನೇಹಿತ.

Russia Confirms Successful Test Launch of Intercontinental Ballistic Missile

ಏನಿದೆ ವಿಶೇಷತೆ?

ಈ ಮಿಸೈಲ್‌ ಘನ ಇಂಧನ ಕ್ಷಿಪಣಿಯಾಗಿದ್ದು, ಥರ್ಮೋ-ನ್ಯೂಕ್ಲಿಯರ್ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ನೆಲದ ಮೇಲೆ ಅಥವಾ ಚಲಿಸುವ ವಾಹನದ ಮೇಲೆ ಯಾವುದೇ ಸ್ಥಳದಲ್ಲಿ ಇಡಬಹುದಾಗಿದೆ. ಆದಾಗ್ಯೂ, ಪ್ರಸ್ತುತ ಇದರ ಸಾಮರ್ಥ್ಯಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ರಷ್ಯಾ ತನ್ನ ಮೊದಲ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಗಳ ರೆಜಿಮೆಂಟ್ ಅನ್ನು ನಿಯೋಜಿಸಿತು. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅಧ್ಯಕ್ಷ ಪುಟಿನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ರಷ್ಯಾ ಈ ಕ್ಷಿಪಣಿಯನ್ನು ಎಲ್ಲಿ ನಿಯೋಜಿಸಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ರಷ್ಯಾದ ಹೊಸ ಪೀಳಿಗೆಯ ಪರಮಾಣು ಶಸ್ತ್ರಾಸ್ತ್ರಗಳು ಪ್ರಪಂಚದ ಯಾವುದೇ ಮೂಲೆಯ ಮೇಲೆ ದಾಳಿ ನಡೆಸಬಲ್ಲದು. ಇದು ಯಾವುದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಮತ್ತು ಭೇದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಯಾವುದೇ ದೇಶವು ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ.

ದ್ರವ ಇಂಧನ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೊದಲು ಇಂಧನ ತುಂಬಿಸಬೇಕು, ಇದು ಹಲವು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಮಯದಲ್ಲಿ, ಘನ ಇಂಧನ ಕ್ಷಿಪಣಿಗಳನ್ನು ವೇಗವಾಗಿ ಹಾರಿಸಬಹುದು. ದ್ರವ ಇಂಧನದ ಬದಲಿಗೆ ಘನ ಇಂಧನವನ್ನು ಬಳಸಲಾಗುತ್ತಿತ್ತು. ಅಲ್ ಜಜೀರಾ ವರದಿಯ ಪ್ರಕಾರ ಘನ ಇಂಧನದಿಂದ ಚಲಿಸುವ ಕ್ಷಿಪಣಿಗಳು ಸುರಕ್ಷಿತವಾಗಿರುತ್ತವೆ.

ಹೈಪರ್ಸಾನಿಕ್‌ ಎಂದರೇನು?

ಹೈಪರ್ಸಾನಿಕ್ ಮಿಸೈಲ್‌ ಎಂದರೆ ಶಬ್ದದ ವೇಗಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುವ ಮಿಸೈಲ್. ಈ ಮಿಸೈಲ್‌ ಗಂಟೆಗೆ 5000ರಿಂದ 12 ಸಾವಿರ ಕಿಲೋಮೀಟರ್ ವೇಗದಲ್ಲಿ ಉಡಾವಣೆ ಆಗುತ್ತವೆ. ವೇಗವಾದ ಉಡಾವಣೆ ಹಾಗೂ ಕಡಿಮೆ ಎತ್ತರದಲ್ಲಿ ಹಾರುವುದರಿಂದ ಇವುಗಳನ್ನು ಯಾವುದೆ ರಡಾರ್‌ ಪತ್ತೆ ಹೆಚ್ಚುವುದು ಕಷ್ಟ.

ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಸಹ ರಷ್ಯಾ ಪರಮಾಣು ಬಾಂಬ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಬುರೆವೆಸ್ಟ್ನಿಕ್ ಕ್ಷಿಪಣಿಯನ್ನು ಪರೀಕ್ಷಿಸಿತ್ತು. ಈ ಪರಮಾಣು ಕ್ಷಿಪಣಿ ಸಾವಿರಾರು ಮೈಲುಗಳ ದೂರದಿಂದಲೂ ದಾಳಿ ಮಾಡಬಲ್ಲದು ಎಂದು ಪುಟಿನ್ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+