Bullet Train: ಭಾರತದ ಮೊದಲ ಬುಲೆಟ್ ರೈಲು ಆರಂಭದ ಅಪ್ಡೇಟ್: ಮಾರ್ಗ, ನಿಲ್ದಾಣ, ವೇಳಾಪಟ್ಟಿ

ನವದೆಹಲಿ: ಭಾರತದ ಮೊದಲು ಹೈ-ಸ್ಪೀಡ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಶೀಘ್ರದಲ್ಲೇ ಪ್ರಯಾಣಿಕರ ಸೇವೆಗೆ ಸಿದ್ದವಾಗುತ್ತಿದೆ. ಈ ಮಹತ್ವಾಕಾಂಕ್ಷೆ ಯೋಜನೆ ಮೊದಲ ಹಂತದ ಸಂಚಾರವನ್ನು 2027ರ ಆಗಷ್ಟ್ 15 ರಿಂದ ಆರಂಭಿಸುವ ಗುರಿಯನ್ನು ಹೊಂದಿದೆ. ಜಪಾನ್‌ನ ಅತ್ಯಾಧುನಿಕ ಶಂಕಾನ್ಸೆನ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ರೈಲು ಸಂಚರಿಸಲಿದೆ. ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

508 ಕಿಲೋಮೀಟರ್ ಉದ್ದದ ಬುಲೆಟ್ ಮಾರ್ಗ

508 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ನಿರ್ಮಿಸಲಾಗಿದೆ. ದೇಶದ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದು ಒಂದಾಗಿದೆ. ಈ ಯೋಜನೆಯು ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ಹವೇಲಿ ನಗರ ಪ್ರದೇಶಗಳ ಮೂಲಕ ಸಾಗಲಿದೆ.

Indias First Bullet Train

ಪ್ರಮುಖ ನಿಲ್ದಾಣಗಳು

ಈ ಬುಲೆಟ್ ರೈಲು ಕೆಳಗಿನ ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಮುಂಬೈ (ಬಾಂದ್ರಾ-ಕರ್‌ಲಾ ಕಾಂಪ್ಲೆಕ್ಸ್), ಠಾಣೆ, ವಿರಾರ್, ಬೊಯ್ಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್, ಸಮರಮತಿ ನಿಲ್ದಾಣಗಳಲ್ಲಿ ಎರಡು ದಿಕ್ಕಿನಲ್ಲಿ ನಿಲುಗಡೆ ನೀಡಲಿದೆ.

ಯಾವಾಗ ಪ್ರಾರಂಭ ಆಗಲಿದೆ

ಯೋಜನೆ ಮೊದಲ ಹಂತದ ಪ್ರಯಾಣಿಕರ ಸೇವೆಯನ್ನು 2027ರ ಆಗಷ್ಟ್ 15ರಂದು ಆರಂಭಿಸುವ ಗುರಿಯನ್ನು ಹೊಂದಲಾಗಿದೆ. ಆರಂಭದಲ್ಲಿ ಈ ಮಾರ್ಗದ ಒಂದು ಭಾಗದಲ್ಲಿ ಮಾತ್ರ ಬುಲೆಟ್ ರೈಲು ಸಂಚಾರ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಸಂಪೂರ್ಣ ಮುಂಬೈ ಮತ್ತು ಅಹಮದಾಬಾದ್ ಮಾರ್ಗದಲ್ಲಿ ಸೇವೆಯನ್ನು ವಿಸ್ತರಿಸಲಾಗುತ್ತದೆ.

ಈ ಯೋಜನೆ ಜಪಾನ್‌ನ ಪ್ರಸಿದ್ಢ ಶಿಂಕಾನ್ಸೆನ್ ಹೈ-ಸ್ಪೀಡ್ ರೈಲು ವ್ಯವಸ್ಥೆ ಆಧಾರಿತವಾಗಿದೆ. ಜಪಾನ್ ಈ ಯೋಜನೆ ತಾಂತ್ರಿಕ ಹಾಗೂ ಆರ್ಥಿಕ ಸಹಾಯ ನೀಡಿದೆ. ಜಪಾನ್ ತಂತ್ರಜ್ಞಾನ ಬಳಸಿಕೊಂಡು ಕಾರಿಡಾರ್ ನಿರ್ಮಿಸಲಾಗಿದ್ದು, ಕೊಳವೆ ರೀತಿಯ ಮಾರ್ಗದಲ್ಲಿ ಈಗಾಗಲೇ ತಪಾಸಣೆ ನಡೆದಿದ್ದು, ಅಂತಿಮ ಹಂತದ ಅನುಮೋದನೆ ಸಿಗಬೇಕಿದೆ.

ಈ ಬುಲೆಟ್ ರೈಲಿನ ಪ್ರಮುಖ ವೈಶಿಷ್ಟ್ಯಗಳು

ಈ ಬುಲೆಟ್ ರೈಲು ಅತ್ಯುನ್ನತ ಸುರಕ್ಷತಾ ವ್ವವಸ್ಥೆಯನ್ನು ಹೊಂದಿದ್ದು, ಸಮಯ ಪಾಲನೆಯಲ್ಲಿ ಹೆಚ್ಚಿನ ನಿಖರತೆ ಇದೆ. ಭೂಕಂಪ ನಿರೋಧಕ ಎಂಜಿನಿಯರಿಂಗ್ ಹಾಗೂ ಅತ್ಯಾಧುನಿಕ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆ ಇರಲಿದೆ.

ಬುಲೆಟ್ ರೈಲಿನ ವೇಗ

ಬುಲೆಟ್ ರೈಲು ಪ್ರತಿ ಗಂಟೆಗೆ 300-320 ಕಿಲೋ ಮಿಟರ್‍ ವೇಗದಲ್ಲಿ ಸಂಚಾರ ಮಾಡಲಿದೆ. ಪ್ರಸ್ತುತ ಮುಂಬೈ ಮತ್ತು ಅಹಮದಾಬಾದ್ ನಡುವಿನ ರೈಲು ಪ್ರಯಾಣಕ್ಕೆ ಸುಮಾರು 6 ಗಂಟೆಗಳ ಕಾಲ ಬೇಕಾಗುತ್ತದೆ. ಈ ಬುಲೆಟ್ ರೈಲು ಆರಂಭವಾದ ಬಳಿಕ ಇದೇ ದೂರವನ್ನು ಸುಮಾರು 2 ಗಂಟೆಗಳಲ್ಲಿ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರವೇ ಈ ಮಾರ್ಗ ಪ್ರಯಾಣಿಕರಿಗೆ ಬುಲೆಟ್ ರೈಲು ಸಂಚಾರ ಸೇವೆ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+