ಅನ್ನ ತಿಂದ RCB ಮನೆಗೆ ದ್ರೋಹ ಬಗೆಯೋಲ್ಲ: ಮುಖ್ಯ ಕೋಚ್ ಆ್ಯಂಡಿ ಫ್ಲವರ್

Andy Flower: ಇತ್ತೀಚೆಗಷ್ಟೇ ತೆರವಾದ ಇಂಗ್ಲೆಂಡ್‌ ಟೆಸ್ಟ್‌ ಟೀಮ್ ಕೋಚ್‌ ಹುದ್ದೆಗೆ ಆರ್‌ಸಿಬಿಯ ಮುಖ್ಯ ತರಬೇತುದಾರರಾದ ಆ್ಯಂಡಿ ಫ್ಲವರ್ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಅವರು ಮಹತ್ವದ ನಿರ್ಧಾರ ತೆಗೆದುಕೊಂಡು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆರ್‌ಸಿಬಿಯ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗುವ ಬಂಪರ್ ಆಫರ್ ಅನ್ನು ವಿನಮ್ರವಾಗಿ ತಿರಸ್ಕರಿಸಿದ್ದಾರೆ. ಬ್ರೆಂಡನ್ ಮೆಕಲಮ್ ಅವರ ನಿರ್ಗಮನದ ನಂತರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮೊದಲ ಆಯ್ಕೆಯಾಗಿ ಫ್ಲವರ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ತಾವು ಪ್ರಸ್ತುತ ಇರುವ ಜವಾಬ್ದಾರಿಗಳಲ್ಲೇ ಸಂತೋಷ ಆಗಿರುವುದಾಗಿ ಹೇಳುವ ಮೂಲಕ ಆ್ಯಂಡಿ ಫ್ಲವರ್ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

Andy Flower Rejects England Test Coach Role Stays with IPL s Royal Challengers Bengaluru Viral

ಆ್ಯಂಡಿ ಫ್ಲವರ್ ಬಿಗ್ ಆಫರ್ ತಿರಸ್ಕರಿಸಲು ಕಾರಣ ಏನು?

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆ್ಯಂಡಿ ಫ್ಲವರ್ ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಒಂದೇ ಬಾರಿಗೆ ಇಂಗ್ಲೆಂಡ್ ತಂಡ ಹಾಗೂ ಐಪಿಎಲ್ ಫ್ರಾಂಚೈಸಿ ಎರಡನ್ನೂ ನಿಭಾಯಿಸಲು ಮುಕ್ತ ಅವಕಾಶ ನೀಡಿತ್ತು. ಆದರೆ ಐಪಿಎಲ್ ಹಾಗೂ ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ಸೀಸನ್‌ ಒಂದೆ ಸಮಯದಲ್ಲಿ ಬರುತ್ತವೆ. ಆದ್ದರಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಆ್ಯಂಡಿ ಫ್ಲವರ್ ಹೇಳಿದ್ದೇನು?

ಈ ಕುರಿತು ಮಾತನಾಡಿದ ಆ್ಯಂಡಿ ಫ್ಲವರ್ ಅವರು, 'ನಾನು ಇಂಗ್ಲೆಂಡ್ ಕೋಚ್ ಜವಾಬ್ದಾರಿ ವಹಿಸಿಕೊಂಡರೆ ಇಲ್ಲೇ ಇದ್ದು ಆಟಗಾರರನ್ನು ಗಮನಿಸಬೇಕಾಗುತ್ತದೆ. ಆದರೆ ಐಪಿಎಲ್ ಕಟ್ಟುನಿಟ್ಟಿನ ನಿಯಮಗಳ ಕಾರಣ ಅದು ಸಾಧ್ಯವಾಗದ ಮಾತು. ಆದ್ದರಿಂದ ಈ ಆಫರ್ ಬೇಡ ತಿರಸ್ಕರಿಸಿದ್ದೇನೆ,' ಎಂದು ಹೇಳಿದರು.

ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ ಅವರೊಂದಿಗೆ ಮಾತುಕತೆ ನಡೆಸಿರುವುದನ್ನು ಒಪ್ಪಿಕೊಂಡಿರುವ ಅವರು, ಪ್ರಸ್ತುತ ಆರ್‌ಸಿಬಿ ಮತ್ತು ಲಂಡನ್ ಸ್ಪಿರಿಟ್ ತಂಡಗಳ ವಾತಾವರಣ ಹಾಗೂ ಆಟಗಾರರೊಂದಿಗೆ ತಾವು ಕಂಫರ್ಟಬಲ್ ಆಗಿರುವುದಾಗಿ ತಿಳಿಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ತಂತ್ರಜ್ಞರಾಗಿರುವ ಆ್ಯಂಡಿ ಫ್ಲವರ್ ಆರ್‌ಸಿಬಿಯಲ್ಲಿ ಹೊಸ ಗೆಲುವಿನ ಸಂಸ್ಕೃತಿಯನ್ನು ಬೆಳೆಸಿದ್ದಾರೆ.

ಇವರ ಮಾರ್ಗದರ್ಶನದಲ್ಲೇ ಆರ್‌ಸಿಬಿ ತಂಡ 2025 ಮತ್ತು 2026ರ ಸೀಸನ್‌ಗಳಲ್ಲಿ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿ ಭರ್ಜರಿ ಹೆಗ್ಗಳಿಕೆ ಪಾತ್ರವಾಗಿದೆ. ಮುಂಬರುವ ಐಪಿಎಲ್ ಮಿನಿ ಹರಾಜು ಹಾಗೂ ತಂಡದ ಪುನರ್‌ನಿರ್ಮಾಣದ ದೃಷ್ಟಿಯಿಂದ ಆ್ಯಂಡಿ ಫ್ಲವರ್ ಆರ್‌ಸಿಬಿಯಲ್ಲೇ ಮುಂದುವರೆಯುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಮೂಲಕ ಮುಂದಿನ ಬಾರಿಯೂ ಮತ್ತೆ ಟ್ರೋಫಿ ಎತ್ತುವ ಭರವಸೆಯನ್ನು ಮೂಡಿಸಿದ್ದಾರೆ.

ಆ್ಯಂಡಿ ಫ್ಲವರ್ ಅವರ ಈ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರಿ ಹಿನ್ನಡೆಯಾಗಿದೆ. ಮುಂಬರುವ ಆಗಸ್ಟ್ 19ರಿಂದ ಪಾಕಿಸ್ತಾನ ವಿರುದ್ಧ ಆರಂಭ ಆಗಲಿರುವ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್ ಅನ್ನು ಹುಡುಕಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ. ಸದ್ಯಕ್ಕೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ರೇಸ್‌ನಲ್ಲಿ ಭಾರತದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಜೋನಾಥನ್ ಟ್ರಾಟ್, ರಿಚರ್ಡ್ ಡಾಸನ್, ಸ್ಟೀಫನ್ ಫ್ಲೆಮಿಂಗ್ ಮತ್ತು ಟಾಮ್ ಮೂಡಿ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಬೆಂಗಳೂರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+