7.6 ಕೋಟಿ ಮತದಾರರ ಬೆಂಬಲ ಪಡೆದ ಪುಟಿನ್‌ಗೆ ಗೆಲುವು!

ರಷ್ಯಾ ಅಧ್ಯಕ್ಷ ಪುಟಿನ್ ಅವರು ಈಗ ಮರು ಆಯ್ಕೆ ಆಗಿರುವ ವಿಚಾರ ಅಧಿಕೃತ ಘೋಷಣೆ ಆಗಿದೆ. ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ಭರ್ಜರಿಯಾದ ಗೆಲುವನ್ನು ಪಡೆದಿದ್ದಾರೆ. ಅದ್ರಲ್ಲೂ ಐತಿಹಾಸಿಕ ಪ್ರಮಾಣದಲ್ಲಿ ಮತಗಳನ್ನು ಪಡೆದಿರುವ ಪುಟಿನ್ ಈಗ ರಷ್ಯಾದಲ್ಲಿ ತಾವು ಎಷ್ಟು ಪ್ರಭಾವಿ? ಎಂಬುದನ್ನು ಮತ್ತೊಮ್ಮೆ ತಮ್ಮ ಶತ್ರು ದೇಶಗಳಿಗೂ ತೋರಿಸಿದ್ದಾರೆ.

ವ್ಲಾದಿಮಿರ್ ಪುಟಿನ್ 1999ರ ಡಿಸೆಂಬರ್ ತಿಂಗಳಿಂದ ಹಿಡಿದು ಈವರೆಗೆ, ಅಧ್ಯಕ್ಷರಾಗಿ ಅಥವಾ ಪ್ರಧಾನಿಯಾಗಿ ರಷ್ಯಾದ ಅಧಿಕಾರ ನಡೆಸುತ್ತಿದ್ದಾರೆ. ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ರಷ್ಯಾ ದೇಶದಲ್ಲಿ ಈಗ ಪುಟಿನ್ ಅವರಿಗೆ ವಿರೋಧ ಪಕ್ಷದ ನಾಯಕರೇ ಇಲ್ಲವಾಗಿದೆ. ಹೀಗಾಗಿಯೇ ಪುಟಿನ್ ಅವರು ರಷ್ಯಾ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತಿದ್ದಾರೆ ಎಂಬುದು ಪುಟಿನ್‌ರ ವಿರೋಧಿಗಳ ಆರೋಪ. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಪುಟಿನ್ ಆನೆ ನಡೆದಿದ್ದೇ ದಾರಿ ಎಂಬಂತೆ ಮುನ್ನುಗ್ಗುತ್ತಿದ್ದಾರೆ. ಹಾಗಾದರೆ ಇದೀಗ ಪುಟಿನ್ ರಷ್ಯಾದಲ್ಲಿ ಮತ್ತೊಂದು ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದು ಹೇಗೆ? ಮುಂದೆ ಓದಿ.

Russian President Putin Re Elected For Next 6 Years

ಶೇ. 87ರಷ್ಟು ವೋಟ್ ಪುಟಿನ್‌ಗೆ!

ರಷ್ಯಾದಲ್ಲಿ ಕೆಲ ದಿನಗಳ ಹಿಂದಷ್ಟೇ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಸಲಾಗಿತ್ತು. ಇದೀಗ ರಷ್ಯಾದ ಬಹುತೇಕ ಎಲ್ಲ ಪ್ರದೇಶಗಳ ಮತ ಎಣಿಕೆ ಪೂರ್ಣಗೊಂಡಿದೆಯಂತೆ. ಪುಟಿನ್ ಈ ಚುನಾವಣೆ ಅಖಾಡದಲ್ಲಿ ಶೇಕಡ 87ರಷ್ಟು ಮತಗಳನ್ನ ಪಡೆದಿದ್ದಾರೆ ಎಂದು ರಷ್ಯಾ ಕೇಂದ್ರ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದ್ದು. ಈ ಮೂಲಕ, ಸುಮಾರು 7.6 ಕೋಟಿ ಮತದಾರರು ವ್ಲಾದಿಮಿರ್ ಪುಟಿನ್ ಅವರಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಇಷ್ಟು ಪ್ರಮಾಣದ ಮತದಾರರು ಪುಟಿನ್ ಪರ ಮತ ಹಾಕಿದ್ದಾರೆ ಎಂಬುದು ಮತ್ತೊಂದು ದಾಖಲೆಯಾಗಿದೆ.

ರಷ್ಯಾ ಅಧ್ಯಕ್ಷರಿಗೆ ಶುಭ ಕೋರಿದ್ದು ಯಾರು?

ವ್ಲಾದಿಮಿರ್ ಪುಟಿನ್ ಇದೀಗ ಮತ್ತೊಂದು ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣಕ್ಕೆ ರಷ್ಯಾದ ಮಿತ್ರ ದೇಶಗಳು ವ್ಲಾದಿಮಿರ್ ಪುಟಿನ್ ಅವರಿಗೆ ಶುಭ ಕೋರಿವೆ. ಉತ್ತರ ಕೊರಿಯಾ & ಹೊಂಡುರಾಸ್, ನಿಕರಾಗುವಾ ಮತ್ತು ವೆನೆಜುವೆಲಾ ದೇಶಗಳು ಪುಟಿನ್ ಅವರಿಗೆ ಅಭಿನಂದನೆ ಸಲ್ಲಿಸಿವೆ ಎನ್ನಲಾಗಿದೆ. ಆದರೆ ಇದೀಗ ಪಾಶ್ಚಿಮಾತ್ಯ ದೇಶಗಳು ಮಾತ್ರ ಪುಟಿನ್ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಹಾಗೇ ರಷ್ಯಾದ ಚುನಾವಣೆ ಮೋಸದಾಟ ಎಂಬ ಆರೋಪ ಕೂಡ ಮಾಡುತ್ತಿವೆ ಅಮೆರಿಕ ಮತ್ತು ಇತರ ದೇಶಗಳು. ಹೀಗಾಗಿ, ಪರಿಸ್ಥಿತಿ ಭಾರಿ ಸೂಕ್ಷ್ಮವಾಗುತ್ತಿದೆ.

Russian President Putin Re Elected For Next 6 Years

ಒಟ್ನಲ್ಲಿ ಪುಟಿನ್ ಅವರು ಇದೀಗ ಮತ್ತೊಮ್ಮೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಪರ & ವಿರೋಧದ ಮಾತು ಕೇಳಿಬರುತ್ತಿವೆ. ಆದರೆ ಇದೇ ಸಮಯದಲ್ಲಿ ಇನ್ನೊಂದು ಕಡೆ ಉಕ್ರೇನ್ ಜನ ಮಾತ್ರ ಯುದ್ಧ ನಿಂತರೆ ಸಾಕು ದೇವರೆ ಅಂತಾ ಕಾದಿದ್ದಾರೆ. ಈ ಮನವಿಗಳ ನಡುವೆ ಯುದ್ಧ ನಿಲ್ಲುತ್ತಾ? ಅಥವಾ ಹಿಂಗೆ ಮುಂದುವರಿಯುತ್ತಾ? ಪುಟಿನ್ ಅವರು ಮರು ಆಯ್ಕೆಯಾದ ನಂತರ ಉಕ್ರೇನ್ ವಿರುದ್ಧದ ರಷ್ಯಾ ಯುದ್ಧವನ್ನು ನಿಲ್ಲಿಸಲು ಈಗ ಮನಸ್ಸು ಮಾಡ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+