14 ಜನರನ್ನು ಕೊಂದು ಹಾಕಿದ ರಷ್ಯಾ ಸೇನೆ?

ರಷ್ಯಾ VS ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಈಗಾಗಲೇ ಲಕ್ಷಾಂತರ ಜನರ ಜೀವ ಬಲಿ ಪಡೆದಿದೆ. ಆದರೂ ಎರಡೂ ದೇಶಗಳಿಗೆ ತೃಪ್ತಿ ಸಿಕ್ಕಿಲ್ಲ ಅಂತಾ ಕಾಣುತ್ತಿದೆ. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ಈಗಲೂ ಫೈಟಿಂಗ್ ಮಾಡುತ್ತಿವೆ. ಅದ್ರಲ್ಲೂ ಉಕ್ರೇನ್ ವಿರುದ್ಧ ರೊಚ್ಚಿಗೆದ್ದಿರುವ ರಷ್ಯಾ ಮಾಡಿದ್ದೇನು ಗೊತ್ತೆ?

ಅಂದಹಾಗೆ ಕಳೆದ 2 ವರ್ಷಗಳಿಂದ ರಷ್ಯಾ & ಉಕ್ರೇನ್ ಭೀಕರವಾಗಿ ಯುದ್ಧ ಮಾಡುತ್ತಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕೂಡ ನೆಮ್ಮದಿ ಇಲ್ಲವಾಗಿದೆ. ಇದೇ ಕಾರಣಕ್ಕೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹಲವು ದೇಶಗಳು ಪ್ರಯತ್ನ ಮಾಡಿವೆ. ಹೀಗಿದ್ದರೂ ಯುದ್ಧಕ್ಕೆ 2 ವರ್ಷ ತುಂಬಿದ್ದು ಈಗ 3ನೇ ವರ್ಷಕ್ಕೆ ಕಾಲಿಟ್ಟಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದಾಗ ಕೂಡ ರಷ್ಯಾ ತನ್ನ ದಾಳಿಯನ್ನು ನಿಲ್ಲಿಸುತ್ತಿಲ್ಲ. ಬದಲಾಗಿ ಉಕ್ರೇನ್ ವಿರುದ್ಧ ರಷ್ಯಾದಿಂದ ಭೀಕರ ದಾಳಿ ನಡೆಯುತ್ತಿರುವ ಕಾರಣಕ್ಕೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ. ಈಗಲೂ ಮತ್ತೆ ರಕ್ತ ಹರಿದು, ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದಿದ್ದಾರೆ.

Allegedly 14 Ukraine Citizens Are Died In Russian Attack On Ukraine

14 ಉಕ್ರೇನ್ ಪ್ರಜೆಗಳ ಸಾವು?

ಅಂದಹಾಗೆ ಉತ್ತರ ಉಕ್ರೇನ್‌ ನಗರ ಚೆರ್ನಿಹಾಯಿವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಈ ಹಿನ್ನೆಲೆ, 14 ಉಕ್ರೇನ್ ಪ್ರಜೆಗಳು ಮೃತಪಟ್ಟಿದ್ದು 61 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪ ಮಾಡಿದ್ದಾರೆ. ಇದರ ಜೊತೆಯಲ್ಲಿ 16 ಕಟ್ಟಡಕ್ಕೂ ಈ ದಾಳಿಯಲ್ಲಿ ಭೀಕರ ಹಾನಿ ಆಗಿದೆ. ಹಾಗೇ ಅವಶೇಷಗಳ ಅಡಿ ಸಿಲುಕಿದವರನ್ನ ರಕ್ಷಿಸುವ ಕೆಲಸದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಮತ್ತೊಂದು ಕಡೆ ಈ ದಾಳಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್‌ ಝೆಲೆನ್‌ಸ್ಕಿ.

ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡರಾ?

ರಷ್ಯಾ ದಾಳಿ ಆರಂಭ ಮಾಡಿದ ನಂತರ ಈಗಾಗಲೇ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಸೇನೆ ಮತ್ತು ಅಲ್ಲಿನ ಸರ್ಕಾರಕ್ಕೆ ಬೆಂಬಲ ನೀಡಿವೆ. ಇದೇ ಕಾರಣಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿವೆ. ಹೀಗೆ, ಇಷ್ಟೆಲ್ಲಾ ಸಹಾಯ ಮಾಡಿದರೂ ಉಕ್ರೇನ್ ಮಾತ್ರ ಶಕ್ತಿ ಕಳೆದುಕೊಳ್ಳುತ್ತಿದ್ದು, ರಷ್ಯಾ ದಿನೇ ದಿನೇ ಉಕ್ರೇನ್‌ನ ಹೊಸ ಹೊಸ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಿದೆ. ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರಿಂದ ಕೂಡ ಪ್ರತಿಕಾರದ ಮಾತು ಕೇಳಿಬಂದಿದೆ. ಮತ್ತೊಂದು ಕಡೆಯಲ್ಲಿ, ಉಕ್ರೇನ್ ಅಧ್ಯಕ್ಷರ ಅದೊಂದು ಹೇಳಿಕೆ ಬಳಿಕ ಬೇಕು ಅಂತಲೇ ರಷ್ಯಾ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

Allegedly 14 Ukraine Citizens Are Died In Russian Attack On Ukraine

ಬೆಂಬಲ ನೀಡುವಂತೆ ಮನವಿ!

ಅಷ್ಟಕ್ಕೂ ರಷ್ಯಾ ವಿರುದ್ಧ ದಾಳಿ ನಡೆಸಲು ನಮಗೆ ಬೆಂಬಲ ನೀಡಿ & ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪಣಿಗಳನ್ನು ಉಕ್ರೇನ್‌ಗೆ ನೀಡಿ ಎಂದು ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್‌ ಝೆಲೆನ್‌ಸ್ಕಿ ಮನವಿ ಮಾಡಿದ್ದರು. ಆದ್ರೆ ಹೀಗೆ ವ್ಲೊಡಿಮಿರ್‌ ಝೆಲೆನ್‌ಸ್ಕಿ ಮನವಿ ಮಾಡಿದ ನಂತರ ರಷ್ಯಾ ಸೇನೆ ಹೀಗೆ ಭೀಕರ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ದಾಳಿ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬ, ವಾಯುದಾಳಿ ನಿಗ್ರಹಿಸಲು ಇಸ್ರೇಲ್‌ ಅಳವಡಿಸಿರುವ ಕ್ಷಿಪಣಿ ನಿಗ್ರಹಗಳನ್ನ ಉಕ್ರೇನ್‌ ಕೂಡ ಅಳವಡಿಸಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+