Video Viral: ಪಾರ್ಕ್‌‌ನಲ್ಲಿ ಅಜ್ಜಿಯ ಏರ್‍‌ಸ್ವಿಂಗ್ ವರ್ಕೌಟ್ ವೈರಲ್: ಸುರಕ್ಷತೆ ಬಗ್ಗೆ ಜೋರಾಯ್ತು ಚರ್ಚೆ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಉದ್ಯಾನಗಳಲ್ಲಿ ಯುವಕರು ಸೇರಿದಂತೆ ಹಿರಿಯ ನಾಗರಿಕರ ವಾಯುವಿಹಾರ, ಮಷಿನ್ ವರ್ಕೌಟ್, ವ್ಯಾಯಾಮ ಕಾಣಬಹುದಾಗಿದೆ. ಅದೇ ರೀತಿ ವಾಯುವಿಹಾರಕ್ಕೆ ಬಂದ ಅಜ್ಜಿಯೊಬ್ಬರು ನಗರ ಉದ್ಯಾನವೊಂದರಲ್ಲಿ ಏರ್‍‌ಸ್ವಿಂಗ್ ವ್ಯಾಯಾಮ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮತ್ತೊಂದೆಡೆ ಹೊರಾಂಗಣದಲ್ಲಿನ ಯಂತ್ರೋಪಕರಣಗಳ ಬಳಕೆ, ಬಳಕೆದಾರರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿವೆ.

ಬೆಂಗಳೂರಿನ ಸಂದೀಪ್ ಪಾರ್ಶ್ವನಾಥ್ ಅನ್ನುವವರು ಎಕ್ಸ್ ಖಾತೆಯಲ್ಲಿ ಉದ್ಯಾನದಲ್ಲಿ ಅಜ್ಜಿ ಮಾಡುತ್ತಿದ್ದ ಹತ್ತು ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಗಟ್ಟಿಮುಟ್ಟಾಗಿರಲು, ಸದಾ ಆಕ್ಟಿವ್ ಆಗಿರಲು ವ್ಯಾಯಾಮ ಮಾಡಲು ಮುಂದಾಗಿರುವ ಅಜ್ಜಿಯ ಉತ್ಸಾಹವನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ಉದ್ಯಾನದಲ್ಲಿನ ಜಿಮ್ ಯಂತ್ರೋಪಕರಣಗಳ ಬಳಸುವುದು ಸುರಕ್ಷತವೇ? ಎಂಬುದನ್ನು ಚರ್ಚೆಸಿದ್ದಾರೆ. ಉದ್ಯಾನ ನಿರ್ವಹಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

Bengaluru Grandma Gym Workout Video

ವೈರಲ್ ವೈರಲ್ ವಿಡಿಯೋದಲ್ಲಿ ಏನಿದೆ?

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೀರೆಯೂಟ್ಟ ಅಜ್ಜಿಯೊಬ್ಬರು ಪಾರ್ಕ್‌ವೊಂದರಲ್ಲಿ ಅಳವಡಿಸಲಾಗಿರುವ ವ್ಯಾಯಾಮದ ಯಂತ್ರೋಪಕರಣಗಳನ್ನು ಬಳಸಿ ವರ್ಕೌಟ್ ಮಾಡುತ್ತಿರುವುದು ಕಾಣಿಸುತ್ತದೆ. ಏರ್‍‌ ಸ್ಟಿಂಗ್ ಯಂತ್ರದಲ್ಲಿ ಆಕಡೆಯಿಂದ ಈಕಡೆಗೆ, ಈ ಕಡೆಯಿಂದ ಆಕಡೆಗೆ ವಾಲಾಡುವ ರೀತಿಯಲ್ಲಿ ವ್ಯಾಯಾಮ ಮಾಡುವುದನ್ನು ಸೆರೆ ಹಿಡಿಯಲಾಗಿದೆ. ಪಾರ್ಕ್‌ನಲ್ಲಿದ್ದ ಎಲ್ಲರು ಅಜ್ಜಿ ವ್ಯಾಯಾಮ ವೀಕ್ಷಿಸಿದ್ದಾರೆ. ಮಕ್ಕಳು, ಪೋಷಕರು ವ್ಯಾಯಾಮ ಯಂತ್ರದ ಸಮೀಪ ಕೂತಿರುವುದು ಕಾಣಿಸುತ್ತದೆ.

Bengaluru-Mysuru Expressway: ಹೆದ್ದಾರಿಯಲ್ಲಿ KSRTC ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ, ವಿಡಿಯೋ ವೈರಲ್
Bengaluru-Mysuru Expressway: ಹೆದ್ದಾರಿಯಲ್ಲಿ KSRTC ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ, ವಿಡಿಯೋ ವೈರಲ್

ನಿರ್ವಹಣೆ ಇಲ್ಲದ ಉಪಕರಣ ಬಳಕೆಗೆ ಅಪಾಯಕಾರಿ

ಉದ್ಯಾನದಲ್ಲಿ ಹೊರಾಂಗಣದ ಈ ಯಂತ್ರೋಪಕರಣಗಳ ಮೇಲ್ವಿಚಾರಣೆ ಪ್ರತಿಕ್ರಿಯಿಸಿರುವ ಸಂದೀಪ್ ಪಾರ್ಶ್ವನಾಥ್ ಅವರು ಇವುಗಳನ್ನು ಬಳಸಬೇಕೆಂದು ಪ್ರಶ್ನಿಸಿದ್ದಾರೆ. ಏಕೆಂದರೆ ಯಂತ್ರಗಳ ಸುರಕ್ಷತೆ, ಅವುಗಳ ಬಳಕೆಯ ಮಾರ್ಗಸೂಚಿಗಳನ್ನು ಯಂತ್ರದ ಪಕ್ಕ ಸ್ಥಾಪಿಸಬೇಕೆಂದು ಎಂದು ಪಾಲಿಕೆ ಅಧಿಕಾರಿಗಳಿಗೆ ಅವರು ಒತ್ತಾಯಿಸಿದರು.

ಇಂಟರ್‍‌ನೆಟ್ ಬಳಕೆದಾರರಲ್ಲಿ ಕೆಲವರು, ಹೀಗೆ ವ್ಯಾಯಾಮ ಯಂತ್ರಗಳ ಬಳಕೆ ಮಾರ್ಗಸೂಚಿಯಿಂದ ನಿಯಮಿತ ನಿರ್ವಹಣೆ, ಅಪಘಾತ ತಡೆಯಲು ಸಾಧ್ಯವಾಗುತ್ತದೆ. ವಯಸ್ಸಾದವರಿಗೆ, ಹಿರಿಯ ನಾಗರಿಕರಿಗೆ ಇವುಗಳ ಬಳಕೆ ಮುನ್ನ ಉತ್ತಮ ಮಾಹಿತಿ ನೀಡಿದಂತಾಗುತ್ತದೆ ಎಂದಿದ್ದಾರೆ. ಇವುಗಳ ನಿರ್ವಹಣೆ ಇಲ್ಲದೇ ಬಳಕೆ ಮಾಡುವುದು ಅಪಾಯಕಾರಿ. ಹೀಗಾಗಿ ಮೇಲ್ವಿಚಾರಣೆ ಮಾಡಿ ಬಳಕೆಗೆ ಸದಾ ಯೋಗ್ಯವಾಗಿರುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಕೆಲವರು ಈ ರೀತಿಯ ವ್ಯಾಯಾಮದ ಮೂಲಭೂತ ಯಂತ್ರೋಪಕರಣಗಳು, ನಗರ ಪ್ರತಿ ಉದ್ಯಾನದಲ್ಲಿ ಇರಬೇಕು. ಇದರಿಂದ ನಾಯಕರಿಗೆ ನಿತ್ಯ ವ್ಯಾಯಾಮ ಮಾಡಲು, ಆರೋಗ್ಯ ವಾಗಿರಲು ಸಹಾಯಾಗುತ್ತದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+